ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುತಾತ್ಮ ಯೋಧ ಕರ್ನಲ್ ಸಂತೋಷ್ ಬಾಬು ಕುಟುಂಬಕ್ಕೆ 5 ಕೋಟಿ ಚೆಕ್‌ ನೀಡಿದ ಕೆಸಿಆರ್

|
Google Oneindia Kannada News

ಹೈದ್ರಾಬಾದ್, ಜೂನ್ 22: ಪೂರ್ವ ಲಡಾಖ್ ನಲ್ಲಿ ಚೀನಾ ಯೋಧರ ದಾಳಿಯಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಅವರ ಕುಟುಂಬವನ್ನು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಇಂದು ಭೇಟಿ ಮಾಡಿದ್ದಾರೆ. ಜೊತೆಗೆ ಕರ್ನಲ್ ಅವರ ಪತ್ನಿಗೆ 5 ಕೋಟಿ ರುಪಾಯಿ ಎಕ್ಸ್-ಗ್ರೇಟಿಯಾ, ರೆಸಿಡೆನ್ಶಿಯಲ್ ಫ್ಲಾಟ್ ಮತ್ತು ಗ್ರೂಪ್ 1 ಉದ್ಯೋಗ ನೀಡಲಾಗಿದೆ.

Recommended Video

ರಾಜಕೀಯ ಹೀರೋ ಆಗಿದ್ದ ಎಚ್.ವಿಶ್ವನಾಥ್ ಈಗ ದುರಂತ ನಾಯಕ | H Vishwanath | Oneindia Kannada

ಈ ಹಿಂದೆಯೇ ಈ ಕುರಿತು ಘೋಷಣೆ ಮಾಡಿದ್ದ ತೆಲಂಗಾಣ ಸಿಎಂ ಕೆಸಿಆರ್ ಹುತಾತ್ಮ ಯೋಧ ಸಂತೋಷ್ ಬಾಬು ಕುಟುಂಬಕ್ಕೆ 5 ಕೋಟಿ ರು. ಪರಿಹಾರ ನೀಡಲಾಗುತ್ತಿದ್ದು, ಉಳಿದ ಯೋಧರ ಕುಟುಂಬಕ್ಕೆ ತಲಾ 10 ಲಕ್ಷ ರು. ಪರಿಹಾರ ನೀಡಲಾಗುತ್ತದೆ ಎಂದು ಹೇಳಿದ್ದರು.

Telangana CM K Chandrasekhar Rao visits Colonel Bikkumalla Santosh Babus Family

 ಗಲ್ವಾನ್ ಕಣಿವೆಯಲ್ಲಿನ ಯೋಧರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ: ವಾಯುಸೇನೆ ಮುಖ್ಯಸ್ಥ ಗಲ್ವಾನ್ ಕಣಿವೆಯಲ್ಲಿನ ಯೋಧರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ: ವಾಯುಸೇನೆ ಮುಖ್ಯಸ್ಥ

ಸಂತೋಷ್ ಬಾಬು ಕುಟುಂಬಕ್ಕೆ ಐದು ಕೋಟಿ ರುಪಾಯಿ ಪರಿಹಾರದ ಜೊತೆಗೆ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ಮತ್ತು ಫ್ಲಾಟ್ ಅನ್ನು ನೀಡಲಾಗಿದೆ. ಸ್ವತಃ ಮುಖ್ಯಮಂತ್ರಿಗಳೇ ಅವರ ಮನೆಗೆ ತೆರಳಿ ಚೆಕ್ ಹಸ್ತಾಂತರಿಸಿದ್ದಾರೆ.

Telangana CM K Chandrasekhar Rao visits Colonel Bikkumalla Santosh Babus Family

ಚೀನಾ ವಿರುದ್ಧ ಹೋರಾಡಿ ಹುತಾತ್ಮರಾದ ಭಾರತೀಯ ಸೈನಿಕರ ಶೌರ್ಯವನ್ನು ಎಂದಿಗೂ ಮರೆಯಲ್ಲ: ಅಮೆರಿಕಾಚೀನಾ ವಿರುದ್ಧ ಹೋರಾಡಿ ಹುತಾತ್ಮರಾದ ಭಾರತೀಯ ಸೈನಿಕರ ಶೌರ್ಯವನ್ನು ಎಂದಿಗೂ ಮರೆಯಲ್ಲ: ಅಮೆರಿಕಾ

ಗಡಿಯಲ್ಲಿ ನಮ್ಮ ದೇಶವನ್ನು ಕಾಯುತ್ತಿರುವ ಯೋಧರೊಂದಿಗೆ ಇಡೀ ದೇಶ ನಿಲ್ಲಲಿದೆ. ಹುತಾತ್ಮ ಯೋಧರ ಕುಟುಂಬಸ್ಥರೊಂದಿಗೆ ನಾವು ನಿಲ್ಲಬೇಕು. ಅವರಿಗೆ ಬೆಂಬಲ ನೀಡಬೇಕು. ಇಡೀ ದೇಶ ನಿಮ್ಮೊಂದಿಗಿದೆ ಎಂಬ ಧೈರ್ಯವನ್ನು ನಾವು ನೀಡಬೇಕು ಎಂದು ಕೆಸಿಆರ್‌ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Telangana CM K Chandrasekhar Rao visits family of Colonel Santosh Babu, who lost his life in action during galwan valley clash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X