ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣ ಚುನಾವಣೆ: ಕೈ ಪಟ್ಟಿಯಲ್ಲಿ 10 ಮಂದಿ ಸಿಎಂ ಆಕಾಂಕ್ಷಿಗಳು

|
Google Oneindia Kannada News

ಹೈದರಾಬಾದ್, ನವೆಂಬರ್ 13: ತೆಲಂಗಾಣ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್​ತನ್ನ 65 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 10ಕ್ಕೂ ಅಧಿಕ ಮಂದಿ ಸಿಎಂ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ನಡೆದ ಚುನಾವಣಾ ಉಸ್ತುವಾರಿ ಸಭೆ ನಂತರ ಸಿಇಸಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಅವರು ಈ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಟಿಡಿಪಿ ಜತೆ ಕೈ ಮೈತ್ರಿ, ಪಕ್ಷ ತೊರೆಯಲು ಚಿರಂಜೀವಿ ನಿರ್ಧಾರಟಿಡಿಪಿ ಜತೆ ಕೈ ಮೈತ್ರಿ, ಪಕ್ಷ ತೊರೆಯಲು ಚಿರಂಜೀವಿ ನಿರ್ಧಾರ

ಕೇಂದ್ರ ಸರ್ಕಾರದಿಂದ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದ ಕಾರಣ ನೀಡಿ ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟದಿಂದ ಟಿಡಿಪಿ ಹೊರಬಂದಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್ ಜತೆ ಕೈ ಜೋಡಿಸಿದೆ. ಹೀಗಾಗಿ, ತೆಲಂಗಾಣದಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಫರ್ಧೆ ಮಾಡಲಿದೆ.

Telangana Assembly polls: Congress releases first list of candidates

ಕಾಂಗ್ರೆಸ್- ಟಿಡಿಪಿ ಮೈತ್ರಿ ಹಾಗೂ ಬಿಜೆಪಿಗೆ ಕೆ ಚಂದ್ರಶೇಖರರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಎದುರಾಳಿಯಾಗಿದೆ.

ತೆಲಂಗಾಣದಲ್ಲಿ ಮತ್ತೆ ಕೆಸಿಆರ್ ಹವಾ : ಸಮೀಕ್ಷೆ ಫಲಿತಾಂಶ ತೆಲಂಗಾಣದಲ್ಲಿ ಮತ್ತೆ ಕೆಸಿಆರ್ ಹವಾ : ಸಮೀಕ್ಷೆ ಫಲಿತಾಂಶ

ಕಾಂಗ್ರೆಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಸುಮಾರು 20 ಕ್ಕೂ ಹೆಚ್ಚು ಹಿರಿಯ ರಾಜಕಾರಣಿಗಳಿದ್ದಾರೆ. ಉತ್ತಮ್​ಕುಮಾರ್​ ರೆಡ್ಡಿ, ಜನರೆಡ್ಡಿ, ರೇವಂತ ರೆಡ್ಡಿ, ಕೊಮಟಿ ರೆಡ್ಡಿ, ಗೀತಾ ರೆಡ್ಡಿ, ಡಿ ಕೆ ಅರುಣಾ ರೆಡ್ಡಿ ಹಾಗೂ ವಂಶಿ ಚಂದ್ರ ರೆಡ್ಡಿ ಸೇರಿದಂತೆ 10ಕ್ಕೂ ಅಧಿಕ ಮಂದಿ ಕಾಂಗ್ರೆಸ್ ​ಅಭ್ಯರ್ಥಿಗಳು ಸಿಎಂ ಆಕಾಂಕ್ಷಿಗಳಾಗಿದ್ದಾರೆ.

'ತೆಲಂಗಾಣದಲ್ಲಿ ಟಿಆರ್ ಎಸ್ 100 ಸೀಟು ಗೆಲ್ಲೋದು ಗ್ಯಾರಂಟಿ!''ತೆಲಂಗಾಣದಲ್ಲಿ ಟಿಆರ್ ಎಸ್ 100 ಸೀಟು ಗೆಲ್ಲೋದು ಗ್ಯಾರಂಟಿ!'

119 ಸದಸ್ಯ ಬಲದ ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆಯು ಒಂದೇ ಹಂತದಲ್ಲಿ ಡಿಸೆಂಬರ್​ 7 ರಂದು ನಡೆಯಲಿದ್ದು, ಈ ತಿಂಗಳ 19 ರಂದು ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದೆ. ಡಿಸೆಂಬರ್ 12ರಂದು ಫಲಿತಾಂಶ ಹೊರಬೀಳಲಿದೆ. ಕೆ ಚಂದ್ರಶೇಖರರಾವ್ ಅವರು ವಿಧಾನಸಭೆ ವಿಸರ್ಜಿಸಿದ್ದರಿಂದ ತೆಲಂಗಾಣದಲ್ಲಿ ಅವಧಿಗೆ ಮುನ್ನ ಚುನಾವಣೆ ಎದುರಿಸಬೇಕಾಗಿ ಬಂದಿದೆ.

English summary
The Congress has released its first list of 65 candidates for the December 7 Telangana Assembly polls The list was released after a marathon meeting of the party's Central Election Committee (CEC) chaired by party president Rahul Gandhi, by CEC General Secretary Mukul Wasnik.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X