ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆಗಳಿಗೂ ಅಚ್ಚರಿ ಮೂಡಿಸಿದ ತೆಲಂಗಾಣ ಫಲಿತಾಂಶ

|
Google Oneindia Kannada News

ಹೈದರಾಬಾದ್, ಡಿಸೆಂಬರ್ 11: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್ ಎಸ್) ಸರಳ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಚುನಾವಣಾ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು.

ಆದರೆ, ಚುನಾವಣಾ ಸಮೀಕ್ಷೆಗಳಿಗೂ ಅಚ್ಚರಿ ಮೂಡಿಸುವಂತೆ ಟಿಆರ್ ಎಸ್ ಭರ್ಜರಿ ಫಲಿತಾಂಶ ಪಡೆದುಕೊಂಡಿದೆ. ಕಾಂಗ್ರೆಸ್ ಮತ್ತು ಟಿಡಿಪಿ ಮೈತ್ರಿಕೂಟ ಈ ಬಾರಿ ಟಿಆರ್ ಎಸ್‌ಗೆ ಭಾರಿ ಪೈಪೋಟಿ ನೀಡಲಿವೆ ಎಂದು ಕೆಲವು ಸಮೀಕ್ಷೆಗಳು ಅಭಿಪ್ರಾಯಪಟ್ಟಿದ್ದವು. ಆದರೆ, ಹೆಚ್ಚಿನ ಸಮೀಕ್ಷೆಗಳು ತಲೆಕೆಳಗಾಗುವಂತೆ ಟಿ ಆರ್ಎಸ್ ಅಭೂತಪೂರ್ವ ಗೆಲುವು ದಾಖಲಿಸಿದೆ.

ಟಿಆರ್ ಎಸ್ ನ ಗೆಲುವು ನಿರೀಕ್ಷಿತವಾದರೂ ಕೆಲವೇ ಸಮೀಕ್ಷೆಗಳು ಇಷ್ಟು ಬೃಹತ್ ಮುನ್ನಡೆ ಪಡೆದುಕೊಳ್ಳುವುದನ್ನು ಹೇಳಿದ್ದವು.

ತೆಲಂಗಾಣ: ನಾಳೆಯೇ ಮುಖ್ಯಮಂತ್ರಿಯಾಗಿ ಕೆಸಿಆರ್ ಪ್ರಮಾಣವಚನತೆಲಂಗಾಣ: ನಾಳೆಯೇ ಮುಖ್ಯಮಂತ್ರಿಯಾಗಿ ಕೆಸಿಆರ್ ಪ್ರಮಾಣವಚನ

ಇಂಡಿಯಾ ಟುಡೆ-ಆಕ್ಸಿಸ್ ಇಂಡಿಯಾ, ಟಿವಿ9 ತೆಲುಗು-ಆರಾ ಮತ್ತು ಟಿವಿ9-ಸಿಪಿಎಸ್ ಸಮೀಕ್ಷೆಗಳು ಟಿಆರ್ ಎಸ್ ಭರ್ಜರಿ ಮೇಲುಗೈ ಸಾಧಿಸಲಿದೆ ಎಂದು ಅಂದಾಜಿಸಿದ್ದವು. ಅವುಗಳ ಸಮೀಕ್ಷೆಯಂತೆ ಟಿಆರ್ ಎಸ್ 85ಕ್ಕೂ ಅಧಿಕ ಸೀಟುಗಳನ್ನು ಗೆದ್ದುಗೊಂಡಿದೆ.

ಇಂಡಿಯಾ ಟುಡೆ-ಆಕ್ಸಿಸ್ ಇಂಡಿಯಾ

ಇಂಡಿಯಾ ಟುಡೆ-ಆಕ್ಸಿಸ್ ಇಂಡಿಯಾ

ಇಂಡಿಯಾ ಟುಡೆ-ಆಕ್ಸಿಸ್ ಸಹಭಾಗಿತ್ವದ ಸಮೀಕ್ಷೆಯು ತೆಲಂಗಾಣದಲ್ಲಿ ಟಿಆರ್ ಎಸ್ ಭಾರಿ ಬಹುಮತ ಪಡೆದುಕೊಳ್ಳಲಿದೆ ಎಂದು ಹೇಳಿತ್ತು. ಟಿಆರ್ ಎಸ್ 79-91 ಕಾಂಗ್ರೆಸ್ ಮತ್ತು ಟಿಡಿಪಿ ಮೈತ್ರಿಕೂಟ 21-33 ಬಿಜೆಪಿ 1-3 ಮತ್ತು ಇತರೆ 4-7 ಸೀಟುಗಳನ್ನು ಪಡೆದುಕೊಳ್ಳಲಿವೆ. ಟಿಆರ್ ಎಸ್ ಶೇ 46, ಕಾಂಗ್ರೆಸ್ ಶೇ 37 ಬಿಜೆಪಿ ಶೇ 7, ಎಐಎಂಐಎಂ ಶೇ 3 ಮತ್ತು ಇತರೆ ಪಕ್ಷಗಳು ಶೇ 7ರಷ್ಟು ಮತಗಳನ್ನು ಪಡೆದುಕೊಳ್ಳಲಿವೆ ಎಂದು ಸಮೀಕ್ಷೆ ಹೇಳಿತ್ತು.

ಟಿಆರ್ ಎಸ್ ಪಡೆದಿರುವ ಮತಗಳಿಗೆ ಅತಿ ಹೆಚ್ಚು ನಿಖರವಾದ ಸಮೀಕ್ಷೆಯನ್ನು ಇಂಡಿಯಾ ಟುಡೆ-ಆಕ್ಸಿಸ್ ನೀಡಿದೆ.

ಸೋನಿಯಾ ಗಾಂಧಿ ಕರೆಗೂ ಕ್ಯಾರೇ ಅನ್ನದ ತೆಲಂಗಾಣ ಮತದಾರ: ಕಾಂಗ್ರೆಸ್ ಧೂಳೀಪಟಸೋನಿಯಾ ಗಾಂಧಿ ಕರೆಗೂ ಕ್ಯಾರೇ ಅನ್ನದ ತೆಲಂಗಾಣ ಮತದಾರ: ಕಾಂಗ್ರೆಸ್ ಧೂಳೀಪಟ

ಟಿವಿ 9 ಸಮೀಕ್ಷೆ

ಟಿವಿ 9 ಸಮೀಕ್ಷೆ

ಟಿವಿ9 ತೆಲುಗು-ಆರಾ ಸಂಸ್ಥೆ ಮತ್ತು ಟಿವಿ9- ಸಿಪಿಎಸ್ ಸಂಸ್ಥೆಗಳು ನಡೆಸಿದ ಎರಡು ಪ್ರತ್ಯೇಕ ಸಮೀಕ್ಷೆಗಳು ಹೆಚ್ಚೂ ಕಡಿಮೆ ಈ ಫಲಿತಾಂಶಕ್ಕೆ ಸಮೀಪದ ಫಲಿತಾಂಶ ನೀಡಿದ್ದವು.

ಟಿವಿ9 ತೆಲುಗು-ಆರಾ ಸಮೀಕ್ಷೆ ಅನ್ವಯ ಟಿಆರ್ ಎಸ್ 75-85 ಕಾಂಗ್ರೆಸ್ 25-35 ಬಿಜೆಪಿ 2-3 ಮತ್ತು ಇತರೆ ಪಕ್ಷಗಳು 7-11 ಸ್ಥಾನಗಳನ್ನು ಗೆಲ್ಲಲಿವೆ ಎಂದು ಹೇಳಲಾಗಿತ್ತು.

ಟಿವಿ9- ಸಿಪಿಎಸ್ ಸಮೀಕ್ಷೆಯು ಟಿಆರ್ ಎಸ್ 84-89, ಕಾಂಗ್ರೆಸ್ 19-21, ಬಿಜೆಪಿ 2 ಮತ್ತು 9 ಸೀಟುಗಳನ್ನು ಪಡೆದುಕೊಳ್ಳಲಿವೆ ಎಂದು ಅತಿ ಹೆಚ್ಚು ನಿಖರವಾದ ಅಭಿಪ್ರಾಯ ವ್ಯಕ್ತಪಡಿಸಿತ್ತು.

ತೆಲಂಗಾಣ: ಟಿಆರ್‌ಎಸ್‌ಗೆ ಗೆಲುವು, ಕಾಂಗ್ರೆಸ್‌ಗೆ ಇವಿಎಂ ಮೇಲೆ ಅನುಮಾನತೆಲಂಗಾಣ: ಟಿಆರ್‌ಎಸ್‌ಗೆ ಗೆಲುವು, ಕಾಂಗ್ರೆಸ್‌ಗೆ ಇವಿಎಂ ಮೇಲೆ ಅನುಮಾನ

ಸಿ ವೋಟರ್ಸ್- ರಿಪಬ್ಲಿಕ್ ಟಿವಿ

ಸಿ ವೋಟರ್ಸ್- ರಿಪಬ್ಲಿಕ್ ಟಿವಿ

ಸಿ ವೋಟರ್ಸ್- ರಿಪಬ್ಲಿಕ್ ಟಿವಿ ಸಮೀಕ್ಷೆಯಲ್ಲಿ ಟಿಆರ್ ಎಸ್ 48-60, ಕಾಂಗ್ರೆಸ್ 47-59, ಬಿಜೆಪಿ 5 ಮತ್ತು 1-13 ಸೀಟುಗಳನ್ನು ಪಡೆದುಕೊಳ್ಳಲಿವೆ ಎಂದು ಹೇಳಲಾಗಿತ್ತು. ಈ ಸಮೀಕ್ಷೆಯಲ್ಲಿ ಟಿಆರ್ ಎಸ್ ಸರಳ ಬಹುಮತ ಪಡೆದುಕೊಳ್ಳುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿತ್ತು. ಅದೇ ರೀತಿ ರಿಪಬ್ಲಿಕ್ ಟಿವಿ-ಜನ್ ಕಿ ಬಾತ್ ಸಮೀಕ್ಷೆಯಲ್ಲಿಯೂ ಟಿಆರ್ ಎಸ್ ಈಗ ಪಡೆದಿರುವಷ್ಟು ಮತಗಳನ್ನು ಪಡೆದುಕೊಳ್ಳುವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯವಿತ್ತು. ಟಿಆರ್ ಎಸ್ 50-65, ಕಾಂಗ್ರೆಸ್ 38-52, ಬಿಜೆಪಿ 4-7 ಮತ್ತು ಇತರೆ ಪಕ್ಷಗಳು 8-14 ಸೀಟುಗಳನ್ನು ಪಡೆದುಕೊಳ್ಳಲಿವೆ ಎನ್ನಲಾಗಿತ್ತು.

ಸಮೀಕ್ಷೆಗಳ ಸಮೀಕ್ಷೆಯಲ್ಲೂ ಮುನ್ನಡೆ

ಸಮೀಕ್ಷೆಗಳ ಸಮೀಕ್ಷೆಯಲ್ಲೂ ಮುನ್ನಡೆ

ಚುನಾವಣೆ ಬಳಿಕ ನಡೆದ ಸಮೀಕ್ಷೆಗಳನ್ನು ಅಧ್ಯಯನ ಮಾಡಿ ಲೆಕ್ಕಾಚಾರ ಹಾಕಿದ ಸಮೀಕ್ಷೆಗಳ ಸಮೀಕ್ಷೆಯಲ್ಲಿಯೂ ಆಡಳಿತಾರೂಢ ಟಿಆರ್ ಎಸ್ ಸರಳ ಬಹುಮತ ಪಡೆದುಕೊಳ್ಳುವುದು ಖಾತರಿಯಾಗಿತ್ತು. ಟಿಆರ್ ಎಸ್ 57-67, ಕಾಂಗ್ರೆಸ್ 45-39 ಮತ್ತು ಬಿಜೆಪಿ ಹಾಗೂ ಇತರೆ ಪಕ್ಷಗಳು 13-17 ಸೀಟುಗಳನ್ನು ಪಡೆದುಕೊಳ್ಳಲಿವೆ ಎಂದು ಪೋಲ್ ಆಫ್ ಪೋಲ್ಸ್ ಹೇಳಿತ್ತು. ಅದನ್ನೂ ಮೀರಿ ಟಿಆರ್ ಎಸ್ ಜಯಗಳಿಸಿದೆ.

English summary
Ruling TRS won with a huge margin to gain the power successive second term in Telangana. Most of the exit polls predicted a easy win for TRS to form government. Here is the comparision of the result with exit poll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X