ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣದಲ್ಲಿ ಚಿತ್ರಮಂದಿರ ತೆರೆಯಲು ಒಪ್ಪಿಗೆ; ಷರತ್ತುಗಳು ಅನ್ವಯ

|
Google Oneindia Kannada News

ಹೈದರಾಬಾದ್, ನವೆಂಬರ್ 23: ತೆಲಂಗಾಣ ಸರ್ಕಾರ ಚಿತ್ರಮಂದಿರ ಮತ್ತು ಮಲ್ಟಿಫೆಕ್ಸ್‌ಗಳನ್ನು ತೆರೆಯಲು ಒಪ್ಪಿಗೆ ನೀಡಿದೆ. ಶೇ 50ರಷ್ಟು ಸೀಟುಗಳನ್ನು ಮಾತ್ರ ಭರ್ತಿ ಮಾಡಬೇಕು ಎಂದು ಷರತ್ತು ಹಾಕಿದೆ.

ಸೋಮವಾರ ಹೈದರಾಬಾದ್ ಮುನ್ಸಿಪಲ್ ಚುನಾವಣೆಗೆ ಟಿಆರ್‌ಎಸ್ ಪ್ರಣಾಳಿಕೆಯನ್ನು ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಬಿಡುಗಡೆ ಮಾಡಿದರು. ಈ ಕಾರ್ಯಕ್ರಮ ನಡೆದ ಕೆಲವೇ ಗಂಟೆಗಳಲ್ಲಿ ಚಿತ್ರಮಂದಿರ ತೆರೆಯಲು ಅನುಮತಿ ನೀಡಲಾಗಿದೆ.

ಕೆಸಿಆರ್‌ಗೆ ಮುಖಭಂಗ: ತೆಲಂಗಾಣ ಉಪ ಚುನಾವಣೆಯಲ್ಲಿ ಬಾವುಟ ಹಾರಿಸಿದ ಬಿಜೆಪಿಕೆಸಿಆರ್‌ಗೆ ಮುಖಭಂಗ: ತೆಲಂಗಾಣ ಉಪ ಚುನಾವಣೆಯಲ್ಲಿ ಬಾವುಟ ಹಾರಿಸಿದ ಬಿಜೆಪಿ

ಕಂಟೈನ್ಮೆಂಟ್ ಝೋನ್ ಹೊರಗಿನ ಪ್ರದೇಶದಲ್ಲಿರುವ ಚಿತ್ರಮಂದಿರಗಳನ್ನು ತೆರೆಯಬಹುದು ಶೇ 50ರಷ್ಟು ಸೀಟುಗಳನ್ನು ಮಾತ್ರ ಭರ್ತಿ ಮಾಡಬೇಕು ಎಂದು ಷರತ್ತು ಹಾಕಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ಸೂಚಿಸಲಾಗಿದೆ.

ತಮಿಳುನಾಡಿನಲ್ಲಿ ಶಾಲೆ-ಕಾಲೇಜು, ಚಿತ್ರಮಂದಿರ ಪುನಾರಂಭ ತಮಿಳುನಾಡಿನಲ್ಲಿ ಶಾಲೆ-ಕಾಲೇಜು, ಚಿತ್ರಮಂದಿರ ಪುನಾರಂಭ

Telangana Allowed To Open Theatres And Multiplexes

ಭಾನುವಾರ ತೆಲಗು ಚಿತ್ರರಂಗದ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿತ್ತು. ಚಿತ್ರಮಂದಿರಗಳು ಮುಚ್ಚಿರುವುದರಿಂದ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟಿತ್ತು.

ಅನ್‌ಲಾಕ್ 5.0 ಬಿಡುಗಡೆ: ಚಿತ್ರಮಂದಿರ ತೆರೆಯಲು ಅನುಮತಿಅನ್‌ಲಾಕ್ 5.0 ಬಿಡುಗಡೆ: ಚಿತ್ರಮಂದಿರ ತೆರೆಯಲು ಅನುಮತಿ

ಮಲ್ಟಿಫೆಕ್ಸ್‌ಗಳಲ್ಲಿ ಜನರು ಮಾಸ್ಕ್ ಧರಿಸಿರುವಂತೆ ನಿಗಾ ವಹಿಸಬೇಕು. ಮಾಲ್‌ಗಳ ಒಳಬರುವಾಗ, ಹೊರ ಹೋಗುವಾಗ ಸ್ಯಾನಿಟೈಸರ್ ಬಳಕೆಗೆ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.

ಪ್ರತಿ ಶೋ ಪೂರ್ಣಗೊಂಡ ಬಳಿಕ ಸ್ಯಾನಿಟೈಸ್ ಮಾಡಬೇಕು. ಹವಾನಿಯಂತ್ರಿತ ಚಿತ್ರಮಂದಿರಗಳಲ್ಲಿ ಉಷ್ಣಾಂಶ 24 ಡಿಗ್ರಿ ಇರಬೇಕು. ಸ್ಯಾನಿಟೈಸ್ ಮಾಡುವ ಕಾರ್ಯಕ್ಕಾಗಿಯೇ ಪ್ರದರ್ಶನದ ಸಮಯದಲ್ಲಿ ಪರಿಷ್ಕರಣೆ ಮಾಡಬೇಕು ಎಂದು ಸರ್ಕಾರ ಆದೇಶದಲ್ಲಿ ಹೇಳಿದೆ.

Recommended Video

ಪಬ್ ಜಿ ಆಟಗಾರರಿಗೆ 6 ಕೋಟಿ ಬಹುಮಾನ!! | Oneindia Kannada

ತೆಲಂಗಾಣದಲ್ಲಿ 602 ಹೊಸ ಕೋವಿಡ್ ಪ್ರಕರಣಗಳು ಸೋಮವಾರ ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 2,64,128. ಸಕ್ರಿಯ ಪ್ರಕರಣಗಳು 11,227.

English summary
Telangana government has allowed to open movie theatres and multiplexes in the state outside containment zones with up to 50% seating capacity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X