ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದ್ರಾಬಾದ್ ನಲ್ಲಿ ಪೊಲೀಸಪ್ಪನ ಆಸ್ತಿ 70 ಕೋಟಿ ರೂ.!

|
Google Oneindia Kannada News

ಹೈದ್ರಾಬಾದ್, ಸಪ್ಟೆಂಬರ್.24: ತೆಲಂಗಾಣದಲ್ಲಿ ಆದಾಯಕ್ಕೂ ಮೀರಿದ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ಆಯುಕ್ತ ಎಲ್ಮಕುರಿ ನರಸಿಂಹ ರೆಡ್ಡಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಜ್ಯದ ಹಲವೆಡೆ ಶೋಧ ಕಾರ್ಯ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ರಾಚಕೊಂಡ ಪೊಲೀಸ್ ಕಮಿಷನರೇಟ್ ಅಡಿಯಲ್ಲಿ ಮಲ್ಕಜ್ಗಿರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ನರಸಿಂಹ ರೆಡ್ಡಿ ಅಕ್ರಮ ಆಸ್ತಿ ಮೌಲ್ಯವು 70 ಕೋಟಿ ರೂಪಾಯಿಗೂ ಅಧಿಕ ಎಂಗು ಎಸಿಬಿ ದಾಳಿ ವೇಳೆ ಪತ್ತೆಯಾಗಿದೆ.

ಡ್ರಗ್ಸ್ ಕೇಸ್ ತನಿಖೆ; ಸಿಸಿಬಿ ಸಿಬ್ಬಂದಿಯಿಂದ ಆರೋಪಿಗೆ ಮಾಹಿತಿ ಲೀಕ್!ಡ್ರಗ್ಸ್ ಕೇಸ್ ತನಿಖೆ; ಸಿಸಿಬಿ ಸಿಬ್ಬಂದಿಯಿಂದ ಆರೋಪಿಗೆ ಮಾಹಿತಿ ಲೀಕ್!

ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಸುಳಿವು ಹಿಡಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಏಕಕಾಲಕ್ಕೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ 25 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದರು. ಈ ವೇಳೆ ವಶಕ್ಕೆ ಪಡೆದ ಆಸ್ತಿ ಮೌಲ್ಯವು 7.5 ಕೋಟಿ ರೂಪಾಯಿ ಎಂದು ಕಂಡು ಬಂದರೂ, ಅದರ ಒಟ್ಟು ಆಸ್ತಿ ಮೌಲ್ಯವು 70 ಕೋಟಿ ರೂಪಾಯಿಗೂ ಹೆಚ್ಚು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Telangana: 70 Crore Illegal Wealth Found At ACB Raids

ಆಂಧ್ರ ಪ್ರದೇಶದ 25 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ:

ತೆಲಂಗಾಣ ಜಿಲ್ಲೆಯ ಹೈದ್ರಾಬಾದ್, ವಾರಂಗಲ್, ಜಂಗೋನ್, ನಲಗೊಂದಾ, ಕರಿಮ್ ನಗರ್, ಜಿಲ್ಲೆ ಹಾಗೂ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆ ಸೇರಿದಂತೆ 25 ಕಡೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದರು. ಎಸಿಬಿ ಅಧಿಕಾರಿಗಳ ದಾಳಿ ವೇಳೆ ಅನಂತಪುರದಲ್ಲಿ 55 ಎಕರೆ ಕೃಷಿ ಭೂಮಿ, 1960 ಚದರ ಮೀ ವಿಸ್ತೀರ್ಣದ ನಾಲ್ಕು ಪ್ಲಾಟ್, ಮಾಧಾಪುರದಲ್ಲಿ 2 ಪ್ಲಾಟ್, ಹಫೀಜ್ ಪೇಟ್ ನಲ್ಲಿ 3 ಅಂತಸ್ತಿನ ಒಂದು ವಾಣಿಜ್ಯ ಮಳಿಗೆ, ಎರಡು ನಿವಾಸ, ಬ್ಯಾಂಕ್ ಖಾತೆಯಲ್ಲಿ 15 ಲಕ್ಷ ರೂಪಾಯಿ ಮತ್ತು ರಿಯಲ್ ಎಸ್ಟೇಟ್ ನಲ್ಲೂ ಹಣ ಹೂಡಿಕೆ ಮಾಡಿರುವ ಬಗ್ಗೆ ದಾಖಲೆ ಪತ್ರಗಳು ಪತ್ತೆಯಾಗಿವೆ.

English summary
Telangana: 70 Crore Illegal Wealth Found At ACB Raids. Read Here To Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X