• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಿಸ್ ಇಂಡಿಯಾ ಕಿರೀಟ ಧರಿಸಿದ ತೆಲಂಗಾಣದ ಇಂಜಿನಿಯರ್

|

ಹೈದರಾಬಾದ್, ಫೆಬ್ರುವರಿ 11: ತೆಲಂಗಾಣದ 23 ವರ್ಷದ ಮಾನಸಾ ವಾರಣಾಸಿ ಮಿಸ್ ಇಂಡಿಯಾ ವರ್ಲ್ಡ್‌ 2020 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಬುಧವಾರ ನಡೆದ ವಿಎಲ್ ಸಿಸಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಮಾನಸಾ ವಾರಣಾಸಿ ಮಿಸ್ ಇಂಡಿಯಾ ವರ್ಲ್ಡ್‌ 2020 ಕಿರೀಟವನ್ನು ತಮ್ಮದಾಗಿಸಿಕೊಂಡರು. ಹರಿಯಾಣದ ಮಾಣಿಕಾ ಮಿಸ್ ಇಂಡಿಯಾ ಗ್ರ್ಯಾಂಡ್ 2020 ಆಗಿ ಹೊರಹೊಮ್ಮಿದ್ದರೆ, ಉತ್ತರ ಪ್ರದೇಶದ ಮಾನ್ಯ ಸಿಂಗ್ ರನ್ನರ್ ಅಪ್ ಆಗಿದ್ದಾರೆ.

ರಾಜಸ್ತಾನದ ಸುಮನ್ ರಾವ್ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2019

ತೆಲಂಗಾಣದ ಹೈದರಾಬಾದ್ ನಲ್ಲಿ ಜನಿಸಿರುವ ಮಾನಸಾ, ಗ್ಲೋಬಲ್ ಇಂಡಿಯನ್ ಶಾಲೆಯಲ್ಲಿ ಓದಿ ವಾಸವಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. ಆರ್ಥಿಕ ಮಾಹಿತಿ ವಿನಿಮಯ ವಿಶ್ಲೇಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಫೆಮಿನಾ ಮಿಸ್ ಇಂಡಿಯಾ ತೆಲಂಗಾಣ 2020 ಎಂದೂ ಬಿರುದು ಪಡೆದುಕೊಂಡಿದ್ದಾರೆ.

ಇದೇ ಡಿಸೆಂಬರ್ ನಲ್ಲಿ ನಡೆಯಲಿರುವ 70ನೇ ಮಿಸ್ ವರ್ಲ್ಡ್‌ ಸ್ಪರ್ಧೆಯಲ್ಲಿ ಭಾರತವನ್ನು ಮಾನಸಾ ಪ್ರತಿನಿಧಿಸಲಿದ್ದಾರೆ.

ಸ್ಪರ್ಧೆಯಲ್ಲಿ ನಟಿಯರಾದ ನೇಹಾ ಧೂಪಿಯಾ, ಚಿತ್ರಾಂಗದಾ ಸಿಂಗ್, ಪುಲ್ಕತ್ ಸಾಮ್ರಾಟ್, ವಿನ್ಯಾಸಕರಾದ ಪಾಲ್ಗುಣಿ ಹಾಗೂ ಶೇಕ್ ಪಿಕಾಕ್ ತೀರ್ಪುಗಾರರಾಗಿ ಭಾಗವಹಿಸಿದ್ದರು.

English summary
Telangana's 23 year old Manasa Varanasi became Miss India World 2020,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X