ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣದಲ್ಲಿ ದುರಂತ: ಮಣ್ಣು ಕುಸಿದು 10 ಮಹಿಳಾ ಕಾರ್ಮಿಕರು ಜೀವಂತ ಸಮಾಧಿ

|
Google Oneindia Kannada News

ಹೈದರಾಬಾದ್, ಏಪ್ರಿಲ್ 11: ಮಣ್ಣು ಕುಸಿದು ಬಿದ್ದು ಹತ್ತು ಮಹಿಳಾ ಕಾರ್ಮಿಕರು ಜೀವಂತ ಸಮಾಧಿಯಾದ ಹೃದಯವಿದ್ರಾವಕ ಘಟನೆ ತೆಲಂಗಾಣದ ನಾರಾಯಣ ಪೇಟೆ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.

ನಾರಾಯಣ ಪೇಟೆಯ ಮರಿಕಲ್ ಎಂಬ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕಾಲುವೆ ತೆಗೆಯುವ ಕಾಮಗಾರಿ ನಡೆಯುತ್ತಿತ್ತು. ತಳಭಾಗದಲ್ಲಿ ಮಹಿಳಾ ಕಾರ್ಮಿಕರು ಮಣ್ಣು ಹೊತ್ತು ಸಾಗಿಸುತ್ತಿದ್ದರು. ಬೆಳಿಗ್ಗೆ 11.15ರ ವೇಳೆ ಮಹಿಳೆಯರು ಊಟ ಮಾಡುವುದಕ್ಕಾಗಿ ಕುಳಿತಿದ್ದರು. ಆಗ ಇದ್ದಕ್ಕಿದ್ದಂತೆ ಕಾಲುವೆಯ ಮೇಲಿನ ದಿಬ್ಬದ ಮಣ್ಣು ಮೇಲಿನಿಂದ ಕುಸಿದು ಕಾರ್ಮಿಕರ ಮೇಲೆ ಬಿದ್ದಿದೆ. ಭಾರಿ ಪ್ರಮಾಣದ ಮಣ್ಣು ಬಿದ್ದಿದ್ದರಿಂದ ಕನಿಷ್ಠ ಹತ್ತು ಮಹಿಳೆಯರು ಜೀವಂತ ಸಮಾಧಿಯಾಗಿದ್ದಾರೆ.

Telangana: 10 women workers killed in mudslide at Narayanpet

ಕುಡಿದ ನಶೆಯಲ್ಲಿ ಮಹಡಿಯಿಂದ ಹಾರಿ ಯುವಕ ಸಾವುಕುಡಿದ ನಶೆಯಲ್ಲಿ ಮಹಡಿಯಿಂದ ಹಾರಿ ಯುವಕ ಸಾವು

12 ಮಹಿಳಾ ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಿದ್ದು, ಇನ್ನಿಬ್ಬರು ಮಹಿಳೆಯರಲ್ಲಿ ಒಬ್ಬರು ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಬ್ಬ ಮಹಿಳೆ ಅದೃಷ್ಟವಶಾತ್ ಯಾವುದೇ ಅಪಾಯಕ್ಕೆ ಒಳಗಾಗದೆ ಪಾರಾಗಿದ್ದಾರೆ.

'ಮಹಿಳೆಯರು ಇನ್ನೂ ಊಟದ ಡಬ್ಬಿ ತೆರೆದಿರಲಿಲ್ಲ. ಆಗ ಏಕಾಏಕಿ ಮಣ್ಣಿನ ದಂಡೆ ಕುಸಿದು ಅವರ ಮೇಲೆ ಬಿದ್ದಿದೆ. ಅವರೆಲ್ಲರೂ ಸಣ್ಣ ಮಣ್ಣಿನ ದಿಬ್ಬದ ಬಳಿ ಕುಳಿತಿದ್ದರು. ಅವರ ಮೇಲೆ 7-8 ಅಡಿಗಳಷ್ಟು ಮಣ್ಣು ಬಿದ್ದಿತು. ಇದರಿಂದ ಅವರಿಗೆ ಉಸಿರಾಡಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ' ಎಂದು ಜಿಲ್ಲೆಯ ಅಧಿಕಾರಿಗಳು ತಿಳಿಸಿದ್ದಾರೆ.

ರಾಯಚೂರಿನಲ್ಲಿ ಅಣ್ಣ-ತಂಗಿ ಮೇಲೆ ಹರಿದ ಲಾರಿ, ಓರ್ವ ಪಾರು ರಾಯಚೂರಿನಲ್ಲಿ ಅಣ್ಣ-ತಂಗಿ ಮೇಲೆ ಹರಿದ ಲಾರಿ, ಓರ್ವ ಪಾರು

ಮಂಗಳವಾರ ಈ ಪ್ರದೇಶದಲ್ಲಿ ಮಳೆ ಸುರಿದಿತ್ತು. ಈ ಕಾರಣದಿಂದ ತೇವಗೊಂಡಿದ್ದ ಮಣ್ಣಿನ ದಿಬ್ಬ ಕುಸಿದಿರಬಹುದು ಎಂದು ಹೇಳಲಾಗಿದೆ.

English summary
At least 10 women workers who were part of trenching work project under MGNREGA died on Wednesday afternoon after they got buried alive under a mound of mud in Narayanpet District of Telangana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X