ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನಸಿಕ ಖಿನ್ನತೆಗೆ ಒಳಗಾಗಿ ಇನ್ಫೋಸಿಸ್ ಟೆಕ್ಕಿ ಆತ್ಮಹತ್ಯೆಗೆ ಶರಣು

|
Google Oneindia Kannada News

ಹೈದರಾಬಾದ್, ಅಕ್ಟೋಬರ್ 15: ತೀವ್ರವಾದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಇನ್ಫೋಸಿಸ್ ಸಂಸ್ಥೆಯ ಉದ್ಯೋಗಿಯೊಬ್ಬರು ಗಚ್ಚಿಬೌಲಿ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರದಂದು ನಡೆದಿದೆ.

ಮೃತ ವ್ಯಕ್ತಿಯನ್ನು 35 ವರ್ಷ ವಯಸ್ಸಿನ ಪಿ ರಘುರಾಮ್ ಎಂದು ಗುರುತಿಸಲಾಗಿದ್ದು ಪ್ರತಿಷ್ಠಿತ ಇನ್ಫೋಸಿಸ್ ಸಂಸ್ಥೆಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ರಘುರಾಮ್ ಪತ್ನಿ ಶ್ರೀದೇವಿ ಕೂಡಾ ಇನ್ಪಿ ಉದ್ಯೋಗಿಯಾಗಿದ್ದಾರೆ. ಇಬ್ಬರು ಒಟ್ಟಿಗೆ ಕಚೇರಿಯಿಂದ ತಮ್ಮ ಅಪಾರ್ಟ್ಮೆಂಟ್ ಗೆ ಬಂದಿದ್ದಾರೆ. ನಂತರ ಅಪಾರ್ಟ್ಮೆಂಟ್ ನಿಂದ ಕೆಳಗೆ ಹಾರಿ ರಘುರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Recommended Video

ಶುಭಶ್ರಿ ಗೆ ಸಿಗುತ್ತಾ ನ್ಯಾಯ| Shubhashri | Oneindia Kannada

"ತೀವ್ರವಾಗಿ ಮಾನಸಿಕ ಖಿನ್ನತೆ ಅಸಮತೋಲನ ಸ್ಥಿತಿ(bipolar disorder)ಯನ್ನು ಪಿ ರಘುರಾಮ್ ಹೊಂದಿದ್ದರು" ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ, ಅವರು ವಾಸವಿದ್ದ ಮಂತ್ರಿ ಅಪಾರ್ಟ್ಮೆಂಟ್ ನ ಕೊನೆ ಮಹಡಿಗೆ ತೆರಳಿ ಅಲ್ಲಿಂದ ಕೆಳಗೆ ಹಾರಿ ಪ್ರಾಣ ಬಿಟ್ಟಿದ್ದಾರೆ' ಎಂದು ಗಚ್ಚಿಬೌಲಿ ಠಾಣೆ ಪೊಲೀಸರು ಹೇಳಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Techie working with Infosys jumps to death from apartment

ಆಂಧ್ರಪ್ರದೇಶದ ವಿಜಯವಾಡ ಮೂಲದ ರಘುರಾಮ್ ಹಾಗೂ ಶ್ರೀದೇವಿ 8 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇಬ್ಬರಿಗೂ 6 ವರ್ಷ ವಯಸ್ಸಿನ ಮಗಳಿದ್ದಾಳೆ. ಚಂದಾನಗರ್ ನಲ್ಲಿ ನೆಲೆಸಿದ್ದ ರಘುರಾಮ್ ಅವರು ದೈನಂದಿನ ಚಟುವಟಿಕೆಯಲ್ಲೂ ಆಸಕ್ತಿ ಕಳೆದುಕೊಳ್ಳುತ್ತಿದ್ದರು. ಅವರ ಮಾನಸಿಕ ಸ್ಥಿತಿ ಸದಾಕಾಲ ತೀವ್ರವಾಗಿ ಚಂಚಲವಾಗಿರುತ್ತಿತ್ತು. ಖಿನ್ನತೆಯಿಂದ ಸರಿಯಾಗಿ ನಿದ್ದೆ ಕೂಡಾ ಮಾಡುತ್ತಿರಲಿಲ್ಲ ಎಂದು ತಿಳಿದು ಬಂದಿದೆ.

English summary
A techie committed suicide by jumping from an apartment building in information technology cluster Gachibowli here on Monday, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X