ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಕ್ಕಿ ಡೆತ್‌ನೋಟ್‌ನಿಂದ ತೆಲಂಗಾಣದ ಐಟಿ ವಲಯದ ಪರಿಸ್ಥಿತಿ ಬಹಿರಂಗ

|
Google Oneindia Kannada News

ಹೈದರಾಬಾದ್, ನವೆಂಬರ್ 26: ಮಹಿಳಾ ಟೆಕ್ಕಿ ಆತ್ಮಹತ್ಯೆಯು ತೆಲಂಗಾಣದ ಐಟಿ ವಲಯದ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಾಗಿದೆ.

ಆಕೆ ಪರದಿಟ್ಟ ಡೆತ್‌ನೋಟ್‌ ಗಮನಿಸಿದಾಗ ಎಂಜಿನಿಯರ್‌ಗಳು ಅನುಭವಿಸುತ್ತಿರುವ ಒತ್ತಡಗಳು ಅರಿವಿಗೆ ಬರುತ್ತದೆ.ಸುಮಾರು ಶೇ.18ರಷ್ಟು ಟೆಕ್ಕಿಗಳನ್ನು 4ನೇ ರೇಟಿಂಗ್‌ಗೆ ಸೇರಿಸಲಾಗುತ್ತದೆ. ಎಷ್ಟೇ ಆರ್ಥಿಕ ಒತ್ತಡವನ್ನು ಅನುಭವಿಸಿದರೂ ಕೂಡ ಯಾರೂ ಕೂಡ ಸಹಾಯಕ್ಕೆ ಬರುತ್ತಿಲ್ಲ ಎನ್ನುವುದು ಎಂಜಿನಿಯರ್‌ಗಳ ಅಳಲಾಗಿದೆ.

ಕೆಲಸ ಹೋಗುತ್ತೆ ಎನ್ನುವ ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಟೆಕ್ಕಿ ಕೆಲಸ ಹೋಗುತ್ತೆ ಎನ್ನುವ ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಟೆಕ್ಕಿ

ಇತ್ತೀಚೆಗಷ್ಟೇ ಕೆಲಸದಿಂದ ತೆಗೆದು ಹಾಕುವ ಭಯದಿಂದ 24 ವರ್ಷದ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅರ ಡೆತ್‌ನೋಟ್‌ನಲ್ಲಿ ತನ್ನ ಅಂಗಾಂಗಳನ್ನು ದಾನ ಮಾಡಿ ಎಂದು ಕೇಳಿಕೊಂಡಿದ್ದಳು. ಜೊತೆಗೆ ಐಟಿ ವಲಯದಲ್ಲಿ ತಾವು ಅನುಭವಿಸುತ್ತಿರುವ ಸಮಸ್ಯೆ, ಇಲ್ಲದ ಭದ್ರತೆ ಎಲ್ಲವನ್ನೂ ಆಕೆ ವಿವರಿಸಿದ್ದಳು.

Techie Deathnote Reveals The IT Sector Situation In Telangana

ಕೆಲವರನ್ನು ಲಿಸ್ಟ್‌ಗೆ ಸೇರಿಸಿ ಇನ್ನೂ ಕೆಲವರನ್ನು ಕೆಟ್ಟದಾಗಿ ಹೊರಹೋಗುವಂತೆ ಹೇಳುತ್ತಾರೆ, ಆರ್ಥಿಕ ಹಿಂಜರಿತದ ಒತ್ತಡ ನಿಭಾಯಿಸಲು ತೆಲಂಗಾಣದ ಕಂಪನಿಗಳು ಹೆಣಗಾಡುತ್ತಿವೆ.

ಕಾರ್ಯಕ್ಷಮತೆಯನ್ನು ಸುಧಾರಿಸಲು ಅವರಿಗೆ 45-60 ದಿನಗಳನ್ನು ನೀಡಲಾಗುತ್ತದೆ. ಅವರು ಸುಧಾರಿಸದಿದ್ದರೆ ಅವರಿಗೆ ಕೆಲಸದಿಂದ ಬಿಟ್ಟು ಹೋಗುವಂತೆ ಕೇಳಿಕೊಳ್ಳಲಾಗುತ್ತದೆ.

ಐಟಿ ಸಂಘಟನೆಗಳನ್ನು ಕೂಡ ಸಮಸ್ಯೆಗಳ ಮಧ್ಯೆ ಪ್ರವೇಶಿಸಲು ಅವಕಾಶಮಾಡಿಕೊಡುತ್ತಿಲ್ಲ. ನಿಮ್ಹಾನ್ಸ್ ಮಾಹಿತಿ ಪ್ರಕಾರ ಐಟಿ ವಲಯದಲ್ಲಿರುವ ಅತಿ ಹೆಚ್ಚು ಮಂದಿ ಖಿನ್ನತೆಗೆ ಒಳಗಾಗುತ್ತಿದ್ದಾರೆ, ಇನ್ನಿತರೆ ಮಾನಸಿಕ ಕಾಯಿಲೆಗಳಿಗೆ ಗುರಿಯಾಗುತ್ತಿದ್ದಾರೆ.

English summary
Techie suicide is like a mirror to the situation in the IT sector of Telangana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X