ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರಪ್ರದೇಶದಲ್ಲಿ 10ಸಾವಿರ ಕೋಟಿ ರೂ ಹಣದ ಹೊಳೆ ಹರಿಸಿದ ಪಕ್ಷಗಳು

|
Google Oneindia Kannada News

ಹೈದರಾಬಾದ್,ಏ.23: ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿ 10ಸಾವಿರ ಕೋಟಿಗೂ ಅಧಿಕ ಹಣ ಖರ್ಚು ಮಾಡಲಾಗಿದೆ ಎಂದು ಟಿಡಿಪಿ ಸಂಸದರೊಬ್ಬರು ಆಘಾತಕಾರಿ ಹೇಳಿಕೆ ನೀಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆಂಧ್ರ ಚುನಾವಣೆ ಸಂದರ್ಭದಲ್ಲಿ ಪ್ರತಿಯೊಬ್ಬ ಮತದಾರರಿಗೂ 2,500ಸಾವಿರದಿಂದ 5 ಸಾವಿರ ರೂವರೆಗೆ ಹಣ ಹಂಚಲಾಗಿದೆ. ತೆಲುಗು ದೇಶಂ ಪಕ್ಷ ಸೇರಿ ಎಲ್ಲಾ ಪಕ್ಷಗಳು ಮತದಾರರಿಗೆ ಎಥೇಚ್ಚವಾಗಿ ಹಣ ನೀಡಿದೆ. ಕನಿಷ್ಠವೆಂದರೂ 2500 ಕೆಲವೊಬ್ಬರಿಗೆ 5 ಸಾವಿರ ರೂವರೆಗೂ ನೀಡಲಾಗಿದೆ ಎಂದು ಟಿಡಿಪಿ ಸಂಸದ ಜೆಸಿ ದಿವಾಕರ್ ರೆಡ್ಡಿ ಹೇಳಿಕೆ ನೀಡಿದ್ದಾರೆ.

ಆಂಧ್ರ: ಟಿಡಿಪಿ ಸಂಸದನ ಮೇಲೆ ಐಟಿ ದಾಳಿ, ಪಕ್ಷದ ಮುಖಂಡರಿಂದ ಪ್ರತಿಭಟನೆಆಂಧ್ರ: ಟಿಡಿಪಿ ಸಂಸದನ ಮೇಲೆ ಐಟಿ ದಾಳಿ, ಪಕ್ಷದ ಮುಖಂಡರಿಂದ ಪ್ರತಿಭಟನೆ

ತಮಿಳುನಾಡಿನಲ್ಲಿ ಚುನಾವಣೆಯಲ್ಲಿ ಹಣದ ಹೊಳೆ ಹರಿಸಲಾಗಿದೆ ಎನ್ನುವ ಸುದ್ದಿ ಹಾಗೂ ವೆಲ್ಲೂರು ಲೋಕಸಭಾ ಚುನಾವಣೆ ರದ್ದಾದ ಬೆನ್ನಲ್ಲೇ ಈ ಹೇಳಿಕೆ ಮತ್ತೊಂದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

TDP MP Says Rs 2 500 is Rate For One Vote in AP

ಅನಂತ್​ಪುರದ ಸಂಸದರಾಗಿರುವ ದಿವಾಕರ್ ರೆಡ್ಡಿ ಅವರ ಮಗ ಜೆ.ಸಿ. ಪವನ್ ರೆಡ್ಡಿ ಕೂಡ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ನಾನು ಯಾವುದೇ ಪಕ್ಷವನ್ನು ದೂರುತ್ತಿಲ್ಲ. ಆದರೆ, ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲೂ ಕಡಿಮೆಯೆಂದರೂ 50 ಕೋಟಿ ರೂ. ಹಂಚಲಾಗಿದೆ ಎಂದು ಹೇಳುತ್ತಿದ್ದೇನೆ ಅಷ್ಟೆ. ಬೇರೆ ರಾಜ್ಯಗಳಲ್ಲಿ ಹೇಗೋ ಗೊತ್ತಿಲ್ಲ. ಆದರೆ, ಆಂಧ್ರದಲ್ಲಂತೂ ಒಂದು ಮತದ ಬೆಲೆ 2ರಿಂದ 2,000 ರೂ. ಕೂಲಿಕಾರ್ಮಿಕರು, ಬಡವರ್ಗದವರು ಹೆಚ್ಚಾಗಿರುವ ಕ್ಷೇತ್ರಗಳಲ್ಲಿ ಒಂದು ಮತದ ಬೆಲೆ 5 ಸಾವಿರ ದಾಟಿದ್ದೂ ಇದೆ ಎಂದು ದಿವಾಕರ್ ರೆಡ್ಡಿ ತಿಳಿಸಿದ್ದಾರೆ. ಇದೇ ಏ. 11ರಂದು ಆಂಧ್ರಪ್ರದೇಶದಲ್ಲಿ ಲೋಕಸಭಾ ಚುನಾವಣೆ ನಡೆದಿತ್ತು.

English summary
Telugu Desam Party MP JC Diwakar Reddy on Monday said that every party in Andhra Pradesh buys votes and the going rate for a single vote in this election was Rs 2,500. All the parties, including the TDP, had together spent at least Rs 10,000 crore in the recent Assembly and Lok Sabha polls, he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X