• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಾವಯವ ವಸ್ತುಗಳಿಂದ ಸ್ಯಾನಿಟರಿ ಪ್ಯಾಡ್ ಸಿದ್ಧಪಡಿಸಿದ ತೆಲಂಗಾಣ ವಿದ್ಯಾರ್ಥಿಗಳು

|

ಹೈದರಾಬಾದ್, ಜನವರಿ 05: ತೆಲಂಗಾಣದ ಯಾದದ್ರಿ ಭುವನಗರಿ ಜಿಲ್ಲೆಯ ಶಾಲೆಯೊಂದರ ವಿದ್ಯಾರ್ಥಿಗಳು ತ್ಯಾಜ್ಯದ ಸಮಸ್ಯೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಶೂನ್ಯ ತ್ಯಾಜ್ಯ ನೈರ್ಮಲ್ಯ ಸ್ಯಾನಿಟರಿ ಪ್ಯಾಡ್ ಕಲ್ಪನೆಯನ್ನು ಹೊರತಂದಿದ್ದಾರೆ.

ಈ ಪ್ಯಾಡ್‌ಗಳನ್ನು ಸ್ತ್ರೀ ರಕ್ಷಾ ಪ್ಯಾಡ್ಸ್ ಎಂದು ಕರೆದಿದ್ದಾರೆ.ಜಿಲ್ಲಾ ಪರಿಷತ್ ಹೈಸ್ಕೂಲಿನ ಮಕ್ಕಳು ಮೆಂತ್ಯೆ, ಅರಿಶಿನ, ಬೇವನ್ನು ಬಳಸಿ ಸಾವಯವ ಪ್ಯಾಡ್‌ಗಳನ್ನು ಸಿದ್ಧಪಡಿಸಿದ್ದಾರೆ.

ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ಯಾಡ್‌ಗಳು ಸುಲಭವಾಗಿ ಕೊಳೆಯುವುಇಲ್ಲ, ಈ ಸಮಸ್ಯೆಯನ್ನು ಪರಿಹರಿಸಲುನಾವು ಈ ವಸ್ತುಗಳನ್ನು ಸಾವಯವ ವಸ್ತುಗಳಿಂದ ಮಾಡಿದ್ದೇವೆ ಎಂದು ಹೇಳುತ್ತಾರೆ ವಿದ್ಯಾರ್ಥಿಗಳು.

ಈಗ ಬಳಸುತ್ತಿರುವ ಸ್ಯಾನಿಟರಿ ಪ್ಯಾಡ್‌ಗಳು ಪೆಟ್ರೋಲಿಯಂ ಜೆಲ್ಲಿಗಳನ್ನು ಒಳಗೊಂಡಿರುತ್ತದೆ. ಇದು ಅನೇಕ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ. ಹಾಗೂ ಪರಿಸರದ ಮೇಲೂ ಕೂಡ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ.

ಬೇವಿನ ಎಲೆಗಳು, ಮೆಂತ್ಯೆ ಹಾಗೂ ಅರಿಶಿನದೊಂದಿಗೆ ಬೆರೆಸಿದ ನೀರಿನೊಂದಿಗೆ ಹಯದಿಂತ್ ಬೆರೆಸಿ ಗಟ್ಟಿಯಾಗುವವರೆಗೆ ಒಣಗಿಸಿ ಸ್ಯಾನಿಟರಿ ಪ್ಯಾಡ್ ಗಾತ್ರಕ್ಕೆ ಕತ್ತರಿಸಲಾಗುತ್ತದೆ, ಜೇನು ಅಂಟನ್ನು ಬೆರೆಸಲಾಗುತ್ತದೆ. ಹತ್ತಿ ಪಟ್ಟಿಯ ನಡುವೆ ಇರಿಸಲಾಗುತ್ತದೆ.

ಸಾಕಷ್ಟು ಪ್ರದೇಶಗಳಲ್ಲಿ ಸ್ಯಾನಿಟರಿ ಪ್ಯಾಡ್‌ಗಳು ಲಭ್ಯವಿಲ್ಲ, ಅಂತಹ ಸಂರ್ಭದಲ್ಲಿ ಅವರೇ ಖುದ್ದಾಗಿ ಈ ಪ್ಯಾಡ್‌ಗಳನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ ಎಂದಿದ್ದಾರೆ.

English summary
The students of a school in Yadadri Bhuvanagiri district of Telangana have come up with an innovative idea of ‘zero waste’ sanitary napkins in order to find a solution to the problem of sanitary waste.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X