ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಮಲ್, ರಜನಿ ರಾಜಕೀಯದಿಂದ ದೂರ ಇರಿ ಎಂದ ಚಿರಂಜೀವಿ

|
Google Oneindia Kannada News

ಹೈದರಾಬಾದ್, ಸೆಪ್ಟೆಂಬರ್ 27: ನೀವು ಸೂಕ್ಷ್ಮ ಸಂವೇದನೆಯ ವ್ಯಕ್ತಿಯಾದರೆ ರಾಜಕಾರಣದಲ್ಲಿ ಇರುವುದು ಉಪಯೋಗ ಇಲ್ಲ ಎಂದು ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಅಭಿಪ್ರಾಯ ಪಟ್ಟಿದ್ದಾರೆ. ಇದು ರಜನೀಕಾಂತ್ ಹಾಗೂ ಕಮಲ್ ಹಾಸನ್ ಗೆ ಅವರು ನೀಡಿರುವ ಸಂದೇಶ. "ರಾಜಕೀಯದಿಂದ ದೂರ ಇರಿ" ಎಂದು ಚಿರಂಜೀವಿ ಇಬ್ಬರಿಗೂ ಸಲಹೆ ಮಾಡಿದ್ದಾರೆ.

ತಮಿಳು ನಿಯತಕಾಲಿಕೆ ಆನಂದ ವಿಕಟನ್ ಗೆ ಸಂದರ್ಶನ ನೀಡಿದ ಅವರು, ಒಳ್ಳೆಯ ಕೆಲಸ ಮಾಡುವ ಉದ್ದೇಶದಿಂದ ರಾಜಕಾರಣಕ್ಕೆ ಬರುವುದಕ್ಕೆ ನಿರ್ಧರಿಸಿದಾಗ ಸಿನಿಮಾ ಬದುಕಿನಲ್ಲಿ ನಂಬನ್ ಒನ್ ಸ್ಥಾನದಲ್ಲಿದ್ದೆ ಎಂದು ಅವರು ಹೇಳಿದ್ದಾರೆ.

ಚಿರಂಜೀವಿಗಿಂತ ಹೀನಾಯ ಸ್ಥಿತಿ ತಲುಪಿದ ಪವನ್ ಕಲ್ಯಾಣ್ಚಿರಂಜೀವಿಗಿಂತ ಹೀನಾಯ ಸ್ಥಿತಿ ತಲುಪಿದ ಪವನ್ ಕಲ್ಯಾಣ್

"ರಾಜಕಾರಣ ಅನ್ನೋದು ಈಗ ಹಣ ಇರುವವರಿಗೆ ಆಗಿದೆ. ಕೋಟ್ಯಂತರ ರುಪಾಯಿ ಹಣ ಖರ್ಚು ಮಾಡಿ, ನನ್ನ ಸ್ವಂತ ಕ್ಷೇತ್ರದಲ್ಲೇ ಸೋಲಿಸಲಾಯಿತು. ಇತ್ತೀಚೆಗಿನ ಚುನಾವಣೆಯಲ್ಲಿ ನನ್ನ ತಮ್ಮ ಪವನ್ ಕಲ್ಯಾಣ್ ಗೂ ಅದೇ ಆಯಿತು" ಎಂದು ಚಿರಂಜೀವಿ ಹೇಳಿದ್ದಾರೆ.

Stay Away From Politics, Chiranjeevi Suggestion To Kamal, Rajini

ನೀವು ರಾಜಕಾರಣದಲ್ಲಿ ಇರಬೇಕು ಅಂದರೆ ಸೋಲು, ನಿರಾಸೆ ಹಾಗೂ ಅವಮಾನವನ್ನು ಎದುರಿಸಬೇಕು. ರಜನೀಕಾಂತ್ ಹಾಗೂ ಕಮಲ್ ಹಾಸನ್ ಜನರಿಗಾಗಿ ಕೆಲಸ ಮಾಡಬೇಕು ಅಂದುಕೊಂಡರೆ ಅಂಥ ಎಲ್ಲ ಸವಾಲು, ನಿರಾಸೆ ಎದುರಿಸಬೇಕು ಎಂದು ಹೇಳಿದ್ದಾರೆ.

ಇತ್ತೀಚೆಗೆ ಲೋಕಸಭಾ ಚುನಾವಣೆಯಲ್ಲಿ ಕಮಲ್ ಹಾಸನ್ ಅವರ ಪಕ್ಷ ಸ್ಪರ್ಧಿಸಿತ್ತು. ಆದರೆ ಕಮಲ್ ಸ್ಪರ್ಧೆ ಮಾಡಿರಲಿಲ್ಲ. ಇನ್ನು ರಜನೀಕಾಂತ್ ಇನ್ನೂ ರಾಜಕೀಯ ಪಕ್ಷವನ್ನು ರಚನೆ ಮಾಡಿಲ್ಲ ಹಾಗೂ ಯಾವುದೇ ಚುನಾವಣೆ ಎದುರಿಸಿಲ್ಲ. ಅಂದ ಹಾಗೆ ಚಿರಂಜೀವಿ ಪ್ರಜಾ ರಾಜ್ಯಂ ಪಾರ್ಟಿಯನ್ನು ಆಂಧ್ರಪ್ರದೇಶದಲ್ಲಿ ಸ್ಥಾಪಿಸಿದ್ದರು. ಅದು 2008ರಲ್ಲಿ ಸ್ಥಾಪಿಸಿದ ಪಕ್ಷ. 2009ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 294 ಸ್ಥಾನಗಳ ಪೈಕಿ 18ರಲ್ಲಿ ಅವರ ಪಕ್ಷ ಗೆಲುವು ಸಾಧಿಸಿತು.

ಟಿಡಿಪಿ ಜತೆ ಕೈ ಮೈತ್ರಿ, ಪಕ್ಷ ತೊರೆಯಲು ಚಿರಂಜೀವಿ ನಿರ್ಧಾರಟಿಡಿಪಿ ಜತೆ ಕೈ ಮೈತ್ರಿ, ಪಕ್ಷ ತೊರೆಯಲು ಚಿರಂಜೀವಿ ನಿರ್ಧಾರ

ತಿರುಪತಿ ಹಾಗೂ ಪಲಕೋಲ್ ಎರಡು ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದ ಚಿರಂಜೀವಿ, ಎರಡೂ ಕ್ಷೇತ್ರಗಳಲ್ಲಿ ಸೋಲುಂಡಿದ್ದರು.

English summary
Telugu mega star Chiranjeevi in an interview suggests that, Kamal and Rajini stay away from politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X