ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ "ಸಮಾನತೆ ಪ್ರತಿಮೆ" ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು

|
Google Oneindia Kannada News

ಹೈದ್ರಾಬಾದ್, ಫೆಬ್ರವರಿ 5: ಹೈದರಾಬಾದ್‌ನಲ್ಲಿ 216 ಅಡಿ ಎತ್ತರದ 'ಸಮಾನತೆಯ ಪ್ರತಿಮೆ' ಲೋಕಾರ್ಪಣೆಗೆ ಸಜ್ಜಾಗಿದೆ. 11 ನೇ ಶತಮಾನದ ಸಂತ ಶ್ರೀ ರಾಮಾನುಜಾಚಾರ್ಯರ ಸ್ಮರಣಾರ್ಥ ಈ ದೈತ್ಯ ಪ್ರತಿಮೆಯನ್ನು ನಿರ್ಮಿಸಲಾಗಿದೆ.

ಹಿಂದೂ ಸುಧಾರಣಾವಾದಿ ಸಂತನ ಜನನದ 1,000 ವರ್ಷಗಳನ್ನು ಗುರುತಿಸಲು ಪಂಚ-ಲೋಹದಿಂದ ಮಾಡಿದ ಈ ಸಮಾನತೆ ಪ್ರತಿಮೆಯನ್ನು "ಜಗತ್ತಿಗೆ ಸಮರ್ಪಿಸಲಾಗುತ್ತಿದೆ." ಸಮಾನತೆಯ ಪ್ರತಿಮೆಯು ಶಂಶಾಬಾದ್‌ನಲ್ಲಿರುವ ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮತ್ತು ಹೈದರಾಬಾದ್-ಬೆಂಗಳೂರು ಹೆದ್ದಾರಿಯಿಂದ ಪೂರ್ವಕ್ಕೆ 3 ಕಿಲೋಮೀಟರ್ ದೂರದಲ್ಲಿದೆ.

ಭಾರತದಲ್ಲಿ 11ನೇ ಶತಮಾನದ ಭಕ್ತಿ ಸಂತ ಶ್ರೀ ರಾಮಾನುಜಾಚಾರ್ಯರ ಸ್ಮರಣಾರ್ಥ 216 ಅಡಿ ಎತ್ತರದ 'ಸಮಾನತೆಯ ಪ್ರತಿಮೆ'ಯನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಂಜೆ 5 ಗಂಟೆ ವೇಳೆಗೆ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ 11ನೇ ಶತಮಾನದ ರಾಮಾನುಜಾಚಾರ್ಯರು ಮತ್ತು ಅವರ ಸ್ಮರಣಾರ್ಥ ನಿರ್ಮಿಸಲಾಗಿರುವ 216 ಅಡಿ ಎತ್ತರದ ದೈತ್ಯ ಸಮಾನತೆ ಪ್ರತಿಮೆ ಬಗ್ಗೆ ತಿಳಿದುಕೊಳ್ಳಬೇಕಾದ ವಿಶೇಷ ಅಂಶಗಳ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

Statue of Equality: What You Need To Know About Saint Ramanujacharya And 216-Feet Tall Structure

ಯಾರು ಈ ಸಂತ ಶ್ರೀ ರಾಮಾನುಜಾಚಾರ್ಯರು?:

1. 1017 ರಲ್ಲಿ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಜನಿಸಿದ ಸಂತ ರಾಮಾನುಜಾಚಾರ್ಯರು ಭಕ್ತಿ ಚಳುವಳಿ ಪುನರುಜ್ಜೀವನಗೊಳಿಸಿದ ವೈದಿಕ ತತ್ವಜ್ಞಾನಿ

2. ಪ್ರಾಚೀನ ಗ್ರಂಥಗಳ ಪ್ರಕಾರ, ಅವರು 120 ವರ್ಷಗಳ ಕಾಲ ಬದುಕಿದ್ದು, ಆಧುನಿಕ ವಿದ್ವಾಂಸರು ಮತ್ತು ಇತಿಹಾಸಕಾರರು ಇದನ್ನು ಹೆಚ್ಚಾಗಿ ಪ್ರಶ್ನಿಸುತ್ತಾರೆ.

3. 11 ನೇ ಮತ್ತು 12 ನೇ ಶತಮಾನದ ಆರಂಭದಲ್ಲಿ, ಸಂತರು ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಉತ್ತೇಜಿಸಲು ದೇಶದ ಉದ್ದಗಲಕ್ಕೂ ಸಂಚರಿಸಿದರು ಎಂದು ಹೇಳಲಾಗುತ್ತದೆ.

4. ಅವರ ಅನುಯಾಯಿಗಳ ಪ್ರಕಾರ, ಸಾಮಾಜಿಕ, ಸಾಂಸ್ಕೃತಿಕ, ಲಿಂಗ, ಶೈಕ್ಷಣಿಕ ಮತ್ತು ಆರ್ಥಿಕ ತಾರತಮ್ಯದ ವಿರುದ್ಧ ಹೋರಾಡಿದವರಲ್ಲಿ ರಾಮಾನುಜಾಚಾರ್ಯರು ಮೊದಲಿಗರು.

5. ಅವರು ರಾಷ್ಟ್ರೀಯತೆ, ಲಿಂಗ, ಜನಾಂಗ, ಜಾತಿ ಅಥವಾ ಧರ್ಮವನ್ನು ಲೆಕ್ಕಿಸದೆ ಪ್ರತಿಯೊಬ್ಬ ಮಾನವರಲ್ಲಿ ಸಮಾನತೆಯಂತಹ ಬೋಧನೆಗಳನ್ನು ಹರಡಿದರು ಎಂದು ಹೇಳಲಾಗುತ್ತದೆ.

6. ಹಲವಾರು ವಿದ್ವಾಂಸರು ಅವರ ಮಾರ್ಗವನ್ನು ಅನುಸರಿಸಿದರು. ಅನ್ನಮಾಚಾರ್ಯ, ಭಕ್ತ ರಾಮದಾಸ್, ತ್ಯಾಗರಾಜ, ಕಬೀರ್ ಮತ್ತು ಮೀರಾಬಾಯಿಯಂತಹ ಅನೇಕ ಪ್ರಾಚೀನ ಕವಿಗಳ ಕೃತಿಗಳು ಅವರಿಂದ ಸ್ಫೂರ್ತಿ ಪಡೆದವು.

7. ಪ್ರಪಂಚದಾದ್ಯಂತದ ಸಮಾಜ ಸುಧಾರಕರಿಗೆ ಅವರು ಸಮಾನತೆಯ ಕಾಲಾತೀತ ಐಕಾನ್ ಎಂದು ಪರಿಗಣಿಸಲಾಗಿದೆ.

8. ಆ ದಿನಗಳಲ್ಲಿ ಶಿಕ್ಷಣ ವಂಚಿತರಿಗೆ ಶಿಕ್ಷಣವನ್ನು ಸಿಗುವಂತೆ ಮಾಡಿದರು, 'ವಸುಧೈವ ಕುಟುಂಬಕಂ' ಎಂಬ ಪರಿಕಲ್ಪನೆಯನ್ನು ಹುಟ್ಟುಹಾಕಿದರು, ಅಂದರೆ ವಿಶ್ವವೆಲ್ಲ ಒಂದೇ ಕುಟುಂಬ.

9. ತೀವ್ರ ತಾರತಮ್ಯಕ್ಕೆ ಒಳಗಾದವರೂ ಸೇರಿದಂತೆ ಎಲ್ಲಾ ಜನರಿಗೆ ದೇವಾಲಯಗಳಲ್ಲಿ ಮುಕ್ತ ಪ್ರವೇಶಕ್ಕೆ ಅವಕಾಶ ಒದಗಿಸಿದರು.

10. ರಾಮಾನುಜಾಚಾರ್ಯರು ಪ್ರಕೃತಿಯ ರಕ್ಷಣೆ ಮತ್ತು ಅದರ ಸಂಪನ್ಮೂಲಗಳಾದ ಗಾಳಿ, ನೀರು ಮತ್ತು ಮಣ್ಣಿನ ಬಗ್ಗೆ ಬೋಧಿಸಿದರು ಎಂದು ನಂಬಲಾಗಿದೆ.

ಸಮಾನತೆ ಪ್ರತಿಮೆ ವಿಶೇಷತೆಗಳೇನು?:

1. ಈ ಪ್ರತಿಮೆಯು ಕುಳಿತ ಭಂಗಿಯಲ್ಲಿ ವಿಶ್ವದ ಎರಡನೇ ಅತಿ ಎತ್ತರದ ಪ್ರತಿಮೆಯಾಗಿದೆ. ಥೈಲ್ಯಾಂಡ್‌ನಲ್ಲಿರುವ 301 ಅಡಿ ಎತ್ತರದ ಬುದ್ಧನ ಪ್ರತಿಮೆಯು ವಿಶ್ವದ ಅತಿ ಎತ್ತರದ 'ಕುಳಿತುಕೊಳ್ಳುವ' ಪ್ರತಿಮೆಯಾಗಿದೆ.

2. 54 ಅಡಿ ಎತ್ತರದ ಬೇಸ್ ಕಟ್ಟಡದ ಮೇಲೆ ಆರೋಹಿಸಲಾಗಿದ್ದು, 'ಭದ್ರ ವೇದಿಕೆ' ಎಂದು ಹೆಸರಿಸಲಾಗಿದೆ, ನೆಲಮಾಳಿಗೆಯು ವೈದಿಕ ಡಿಜಿಟಲ್ ಲೈಬ್ರರಿ ಮತ್ತು ಸಂಶೋಧನಾ ಕೇಂದ್ರವನ್ನು ಹೊಂದಿದೆ.

3. ಈ ಕಟ್ಟಡವು ಹಲವಾರು ಪ್ರಾಚೀನ ಭಾರತೀಯ ಗ್ರಂಥಗಳು, ರಂಗಮಂದಿರ, ರಾಮಾನುಜಾಚಾರ್ಯರ ಅನೇಕ ಕೃತಿಗಳನ್ನು ವಿವರಿಸುವ ಶೈಕ್ಷಣಿಕ ಗ್ಯಾಲರಿಯನ್ನು ಸಹ ಹೊಂದಿದೆ.

4. ಸುಮಾರು 300,000 ಚದರ ಅಡಿ ವಿಸ್ತೀರ್ಣದಲ್ಲಿ ರಾಮಾನುಜಾಚಾರ್ಯರ ದೇವಾಲಯವನ್ನು ಸಹ ನಿರ್ಮಿಸಲಾಗಿದೆ ಎಂದು ತಿಳಿದುಬಂದಿದೆ, ಅಲ್ಲಿ 120 ಕೆಜಿ ಚಿನ್ನದ ವಿಗ್ರಹವನ್ನು ಪ್ರತಿನಿತ್ಯ ಪೂಜೆಗೆ ಇರಿಸಲಾಗುತ್ತದೆ. 120 ಕೆ.ಜಿ. ತೂಕವು ಸಂತರು ಬದುಕಿದ್ದರು ಎಂದು ಹೇಳಲಾಗುವ 120 ವರ್ಷಗಳ ಸಂಕೇತವಾಗಿದೆ.

5. ಈ ಪ್ರತಿಮೆಯು ಶ್ರೀ ರಾಮಾನುಜಾಚಾರ್ಯ ಆಶ್ರಮದ ಶ್ರೀ ಚಿನ್ನಜೀಯರ್ ಸ್ವಾಮಿಗಳ ಪರಿಕಲ್ಪನೆ ಆಗಿದೆ.

6. ತೆಲಂಗಾಣದ ಮುಚಿಂತಲ್ ಎಂಬ ಹಳ್ಳಿಯಲ್ಲಿ ನಿರ್ಮಿಸಲಾದ ಈ ಪ್ರತಿಮೆಯು ಶಂಶಾಬಾದ್‌ನಲ್ಲಿರುವ ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇದೆ.

7. ಶ್ರೀ ರಾಮಾನುಜಾಚಾರ್ಯ ಆಶ್ರಮದ ಶ್ರೀ ಚಿನ್ನ ಜೀಯರ್ ಸ್ವಾಮಿಗಳ ಪರಿಕಲ್ಪನೆಯಲ್ಲಿ, ಈ ರಚನೆಗೆ 2014ರಲ್ಲಿ ಅಡಿಪಾಯ ಹಾಕಲಾಯಿತು.

8. 1,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈ ಯೋಜನೆಯು ಪೂರ್ಣಗೊಂಡಿದೆ ಎಂದು ನಂಬಲಾಗಿದೆ, ಇದನ್ನು ಸಂಪೂರ್ಣವಾಗಿ ದೇಣಿಗೆಯಿಂದ ನೀಡಲಾಗಿದೆ.

9. ತಿರುಪತಿ, ಶ್ರೀರಂಗಂ, ದ್ವಾರಕಾ, ಬದರಿನಾಥ ಸೇರಿದಂತೆ ದೇಶದ ಹಲವು ಭಾಗಗಳ 108 ಪವಿತ್ರ ದೇವಾಲಯಗಳ ಪ್ರತಿಕೃತಿಗಳಿಂದ ದೈತ್ಯ ಪ್ರತಿಮೆಯನ್ನು ಸುತ್ತುವರೆದಿದೆ.

10. 45 ಎಕರೆ ಸಂಕೀರ್ಣವನ್ನು ಒಳಗೊಂಡಿರುವ ಈ ಯೋಜನೆಗೆ 1,000 ಕೋಟಿ ರೂಪಾಯಿ ವೆಚ್ಚವಾಗಿದ್ದು, ಅದಕ್ಕಾಗಿ ಜಾಗತಿಕ ಮಟ್ಟದಲ್ಲಿ ಭಕ್ತರಿಂದ ಸಂಪೂರ್ಣ ದೇಣಿಯನ್ನು ಸಂಗ್ರಹಿಸಲಾಗಿತ್ತು ಎಂದು ಹೇಳಲಾಗುತ್ತಿದೆ.

Recommended Video

ಯೋಗಿ ಆದಿತ್ಯನಾಥ್ ಕಿವಿ ಓಲೆ ಮತ್ತು ರುದ್ರಾಕ್ಷಿ ಮಾಲೆಯ ಬೆಲೆ ಎಷ್ಟು ಗೊತ್ತಾ? | Oneindia Kannada

English summary
Statue of Equality in Hyderabad: What You Need To Know About Saint Ramanujacharya And His 216-Feet Tall Structure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X