ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಲಿರುವ ಹೊಸ ಕ್ಷಿಪಣಿ ಶಕ್ತಿ

ಭಾರತದ ಹೈದರಾಬಾದ್ ನಲ್ಲಿ ಇಸ್ರೇಲಿ ಕ್ಷಿಪಣಿಯ ರೂಪಾಂತರದ ತಯಾರಿಕೆ. ಇಸ್ರೇಲ್ ಹಾಗೂ ಭಾರತದ ತಜ್ಞರ ಜಂಟಿ ಸಹಭಾಗಿತ್ವದಲ್ಲಿ ತಿಂಗಳಿಗೆ 200 ಕ್ಷಿಪಣಿ ತಯಾರಿಸುವ ಗುರಿ. ಈ ಕ್ಷಿಪಣಿಯಿಂದ ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿ ಎಂದು ಹೇಳಿದ ಮೂಲಗಳು.

|
Google Oneindia Kannada News

ಹೈದರಾಬಾದ್, ಆಗಸ್ಟ್ 4: ಭಾರತೀಯ ಸೇನಗೆ ಹೊಸತೊಂದು ಕ್ಷಿಪಣಿ ಶಕ್ತಿ ಸೇರ್ಪಡೆಗೊಳ್ಳಲಿದೆ. ಇಸ್ರೇಲ್ ನಿರ್ಮಿತ 'ಸ್ಪೈಕ್ ಎಂ.ಆರ್.' ಕ್ಷಿಪಣಿಯನ್ನೇ ಹೋಲುವ ಹೊಸ ಕ್ಷಿಪಣಿಯು ಇದಾಗಲಿದ್ದು, ಇದನ್ನು ಇಸ್ರೇಲ್ ತಂತ್ರಜ್ಞರ ಮಾರ್ಗದರ್ಶನದಲ್ಲೇ ತಯಾರಿಸಲಾಗುತ್ತದೆ ಎಂದು ಹೇಳಲಾಗಿದೆ.

ಹೈದಾರಾಬಾದ್ ನಲ್ಲಿ ಈ ಕ್ಷಿಪಣಿಯ ತಯಾರಿಕೆ ನಡೆಯಲಿದೆ ಎಂದು ಮೂಲಗಳು ತಿಳಿಸಿದ್ದು, ಇದರ ತಯಾರಿಕೆಯಲ್ಲಿ ಇಸ್ರೇಲ್ ನ ರಾಫೆಲ್ ಅಡ್ವಾನ್ಸ್ ಡ್ ಡಿಫೆನ್ಸ್ ಸಿಸ್ಟಂ ಹಾಗೂ ಕಲ್ಯಾಣಿ ರಾಫೆಲ್ ಅಡ್ವಾನ್ಸ್ ಡ್ ಸಿಸ್ಟಮ್ಸ್ ಜಂಟಿಯಾಗಿ ತೊಡಗಿಸಿಕೊಳ್ಳಲಿವೆ.

Spike adds to Hyderabad fire power: Rafael's 'fire and forget' missile hub sets shop

ಈ ಎರಡೂ ಸಂಸ್ಥೆಗಳು ಈ ಕ್ಷಿಪಣಿ ತಯಾರಿಕೆಗಾಗಿ ಪ್ರತ್ಯೇಕ ತಯಾರಿಕಾ ಘಟಕವೊಂದನ್ನು ಸ್ಥಾಪಿಸಿದ್ದು, ತಿಂಗಳಿಗೆ 200 ಕ್ಷಿಪಣಿಗಳನ್ನು ತಯಾರಿಸುವ ಗುರಿ ಹೊಂದಿವೆ.

ವಿಶೇಷತೆಗಳು: ಈ ಕ್ಷಿಪಣಿಯು 2.5 ಕಿ.ಮೀ.ವರೆಗೆ ಹಾರಿಹೋಗಿ, ಎದುರಾಳಿಗಳ ನೆಲೆಗಳನ್ನು ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದೆ. ಇಸ್ರೇಲ್ ದೇಶದ ಸೈನ್ಯದಲ್ಲಿದ್ದ ಇಂಥ ಕೆಲವಾರು ಕ್ಷಿಪಣಿಗಳನ್ನು ಈಗಾಗಲೇ ಭಾರತಕ್ಕೆ ತಂದು ಅವನ್ನು ಸಮತಟ್ಟು, ಡೊಂಕು ಮುಂತಾದ ಮೇಲ್ಮೈಗಳ ಮೇಲಿನಿಂದ ಉಡಾವಣೆ ಮಾಡಿ ಪರೀಕ್ಷೆ ನಡೆಸಲಾಗಿದೆ.

ಎಲ್ಲಾ ಪರೀಕ್ಷೆಗಳಲ್ಲೂ ಅದು ಉತ್ತೀರ್ಣವಾಗಿರುವುದರಿಂದ ಭಾರತೀಯ ಸೇನೆಗೆ ಇದನ್ನು ಸೇರ್ಪಡೆಗೊಳಿಸಬೇಕೆಂದು ತೀರ್ಮಾನಿಸಲಾಗಿದೆ.

English summary
The city, which is the hub of India's missile power, is now gearing up to give the nation's defence forces the best available fire power in the world with Israel's anti-tank guided missile Spike MR' to be manufactured Hyderabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X