ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ರಾಜ್ಯಗಳ ನಿರ್ಲಕ್ಷಿಸಿ ಸಮಗ್ರ ಭಾರತದ ಪ್ರಗತಿ ಅಸಾಧ್ಯ: ಅಮಿತ್ ಶಾ

|
Google Oneindia Kannada News

ಹೈದರಾಬಾದ್, ನವೆಂಬರ್ 15: "ದಕ್ಷಿಣ ಭಾರತದ ರಾಜ್ಯಗಳ ಕೊಡುಗೆಯನ್ನು ನಿರ್ಲಕ್ಷಿಸಿ ಭಾರತದ ಸಮಗ್ರ ಪ್ರಗತಿಯನ್ನು ಆಲೋಚಿಸಲು ಸಾಧ್ಯವೇ ಇಲ್ಲ," ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ತಿರುಪತಿಯಲ್ಲಿ ದಕ್ಷಿಣ ವಲಯ ಮಂಡಳಿಯ 29ನೇ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, "ದಕ್ಷಿಣ ಭಾರತದ ರಾಜ್ಯಗಳ ಪ್ರಾಚೀನ ಸಂಸ್ಕೃತಿ, ಪರಂಪರೆ ಮತ್ತು ಭಾಷೆಗಳು ಭಾರತದ ಸಂಸ್ಕೃತಿ ಮತ್ತು ಇತಿಹಾಸದ ಮೌಲ್ಯವನ್ನು ಹೆಚ್ಚಿಸಿವೆ," ಎಂದು ತಿಳಿಸಿದರು.

ಸಭೆಯಲ್ಲಿ ಆಂಧ್ರ ಪ್ರದೇಶ, ತಮಿಳುನಾಡು, ಕರ್ನಾಟಕ, ಕೇರಳ ಮತ್ತು ತೆಲಂಗಾಣ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳು ದಕ್ಷಿಣ ವಲಯ ಮಂಡಳಿಯ ಸದಸ್ಯ ರಾಜ್ಯಗಳಾಗಿವೆ. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

South Indias Contribution To the Development of Integrated India Is Immense; Amit Shah

"ಕೊವಿಡ್-19 ಲಸಿಕಾಕರಣದ ವೇಗ ಹೆಚ್ಚಿಸಬೇಕು, ಮುಖ್ಯಮಂತ್ರಿಗಳೇ ಸ್ವತಃ ಈ ವಿಚಾರದ ನಿಗಾ ವಹಿಸಬೇಕು ಎಂದು ಅಮಿತ್ ಶಾ ವಿವಿಧ ರಾಜ್ಯಗಳ ಆಡಳಿತ ಮುಖ್ಯಸ್ಥರಿಗೆ ಸೂಚಿಸಿದರು. ಮಾದಕ ದ್ರವ್ಯಗಳ ಜಾಲವನ್ನು ಹತ್ತಿಕ್ಕಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಭಾರತೀಯ ದಂಡಸಂಹಿತೆ ಮತ್ತು ಅಪರಾಧ ಪ್ರಕ್ರಿಯಾ ನಿಯಮಗಳಲ್ಲಿ ಬದಲಾವಣೆಗಳನ್ನು ಸೂಚಿಸುವಂತಿದ್ದರೆ ತಿಳಿಸಿ," ಎಂದು ಕೇಂದ್ರ ಗೃಹ ಅಮಿತ್ ಶಾ ಹೇಳಿದರು.

"ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದ ಅವರು, ಪೊಲೀಸ್ ಇಲಾಖೆಯಲ್ಲಿ ವಿಚಾರಣೆಗಾಗಿ ನಿರ್ದೇಶನಾಲಯ ಸ್ಥಾಪಿಸಬೇಕು. ಉತ್ತಮ ತನಿಖೆ ನಡೆಯುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸ್ಥಳೀಯ ಭಾಷೆಗಳಲ್ಲಿ ಪಾಠ ಮಾಡುವ ಒಂದಾದರೂ ವಿಧಿವಿಜ್ಞಾನ (ಫೊರೆನ್ಸಿಕ್) ಕಾಲೇಜು ಆರಂಭಿಸಬೇಕು. ಆಗ ಉತ್ತಮ ತನಿಖೆ ನಿರ್ವಹಿಸಲು ಸೂಕ್ತ ರೀತಿಯಲ್ಲಿ ಸಜ್ಜುಗೊಂಡ ಮಾನವ ಸಂಪನ್ಮೂಲ ಸಿದ್ಧವಾಗುತ್ತದೆ," ಎಂದು ಅಭಿಪ್ರಾಯಪಟ್ಟರು.

South Indias Contribution To the Development of Integrated India Is Immense; Amit Shah

ಸ್ಥಳೀಯ ಸಂಸ್ಕೃತಿ ಮತ್ತು ಭಾಷೆಗಳಿಗೆ ಗೌರವ
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸ್ಥಳೀಯ ಸಂಸ್ಕೃತಿ ಮತ್ತು ಭಾಷೆಗಳನ್ನು ಗೌರವಿಸುತ್ತದೆ. ಈ ಸಭೆಯಲ್ಲಿಯೂ ವಿವಿಧ ರಾಜ್ಯಗಳ ಭಾಷೆಗೆ ಅನುವಾದದ ಸೌಕರ್ಯ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ರಾಜ್ಯಗಳ ಪ್ರತಿನಿಧಿಗಳು ಸ್ಥಳೀಯ ಭಾಷೆಗಳಲ್ಲಿಯೇ ಮಾತನಾಡಿದರೆ ನನಗೆ ಹೆಚ್ಚು ಸಂತೋಷವಾಗುತ್ತದೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ವಿಚಾರ ವಿನಿಮಯ ನಡೆಸಲು ವಲಯ ಮಂಡಳಿ ಸಭೆಗಳು ಅತ್ಯುತ್ತಮ ವೇದಿಕೆಗಳಾಗಿವೆ. ಭಾನುವಾರದ ಸಭೆಯಲ್ಲಿ ಚರ್ಚೆಗೆ ಬಂದ 51 ವಿಷಯಗಳ ಪೈಕಿ 30 ಅಂಶಗಳನ್ನು ಪರಿಹರಿಸಲಾಗಿದೆ. ವಲಯ ಮಂಡಳಿ ಸಭೆಗಳು ಸಲಹಾತ್ಮಕವಾಗಿದ್ದರೂ ಹಲವು ಪ್ರಮುಖ ವಿಚಾರಗಳನ್ನು ಪರಿಹರಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಸದಸ್ಯ ರಾಜ್ಯಗಳ ಅತ್ಯುನ್ನತ ಹಂತದ ಆಡಳಿತ ಪ್ರತಿನಿಧಿಗಳು ಪರಸ್ಪರ ಭೇಟಿಯಾಗಿ ಚರ್ಚಿಸಲು ಇಂಥ ಸಭೆಗಳು ಅವಕಾಶ ಮಾಡಿಕೊಡುತ್ತವೆ ಎಂದು ಅಮಿತ್ ಶಾ ನುಡಿದರು.

South Indias Contribution To the Development of Integrated India Is Immense; Amit Shah

ವಲಯ ಮಂಡಳಿ ಸಭೆಗಳಲ್ಲಿ ರಾಜ್ಯಗಳ ಗಡಿಗಳಿಗೆ ಸಂಬಂಧಿಸಿದ ವಿವಾದಗಳು, ಭದ್ರತೆ, ಮೂಲಸೌಕರ್ಯ ಸಮಸ್ಯೆಗಳು, ಪರಿಸರ, ವಸತಿ, ಶಿಕ್ಷಣ, ಆಹಾರ, ಪ್ರವಾಸೋದ್ಯಮ ಮತ್ತು ಸಾರಿಗೆ ಕುರಿತು ಚರ್ಚೆಗೆ ಅವಕಾಶವಿದೆ.

English summary
Union Home Minister Amit Shah has said that it is not possible to think of India's overall progress by ignoring the contribution of the states of South India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X