ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರೇಟರ್ ಹೈದರಾಬಾದ್ ಮೊದಲ ಮಹಿಳಾ ಮೇಯರ್ ಸಿಂಧು ರೆಡ್ಡಿ?

|
Google Oneindia Kannada News

ಹೈದರಾಬಾದ್, ಡಿ. 7: ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) ಈಗ ಮೇಯರ್ ನೇಮಕಕ್ಕೆ ಮುಂದಾಗಿದೆ. ಲಭ್ಯ ಮಾಹಿತಿಯಂತೆ ಎರಡು ಬಾರಿ ಕಾರ್ಪೊರೇಟರ್ ಸಿಂಧು ಆದರ್ಶ ರೆಡ್ಡಿ ಅವರಿಗೆ ಮೇಯರ್ ಆಗುವ ಯೋಗ ಒಲಿದು ಬಂದಿದೆ.

ಈ ಮೂಲಕ ಸಿಂಧು ರೆಡ್ಡಿ ಅವರು ಗ್ರೇಟರ್ ಹೈದರಾಬಾದ್ ನಗರದ ಮೊಟ್ಟ ಮೊದಲ ಮಹಿಳಾ ಮೇಯರ್ ಎನಿಸಿಕೊಳ್ಳಲಿದ್ದಾರೆ. 1951ರಿಂದ ಹೈದರಾಬಾದ್ ಕಾರ್ಪೊರೇಷನ್ ಇದ್ದು, ಆಂಧ್ರ -ತೆಲಂಗಾಣ ವಿಭಜನೆಗೂ ಮುನ್ನ ಮಹಿಳಾ ಪ್ರಥಮ ಪ್ರಜೆಯನ್ನು ಮುತ್ತಿನನಗರಿ ಕಂಡಿತ್ತು.

ಹೈದರಾಬಾದ್ ಚುನಾವಣೆ: ಅತಿ ಹೆಚ್ಚು ಸ್ಥಾನ ಗಳಿಸಿದ ಟಿಆರ್‌ಎಸ್ಹೈದರಾಬಾದ್ ಚುನಾವಣೆ: ಅತಿ ಹೆಚ್ಚು ಸ್ಥಾನ ಗಳಿಸಿದ ಟಿಆರ್‌ಎಸ್

ಆದರೆ, 2009ರಿಂದ ಗ್ರೇಟರ್ ಹೈದರಾಬಾದ್ ಪಾಲಿಕೆ ರೂಪುಗೊಂಡಿದೆ. 2009ರಲ್ಲಿ ಕಾಂಗ್ರೆಸ್ಸಿನ ಬಂಡ ಕಾರ್ತಿಕ್ ರೆಡ್ಡಿ, 2012ರಲ್ಲಿ ಎಐಎಂಐಎಂನ ಮೊಹಮ್ಮದ್ ಮಾಜಿದ್ ಹುಸೇನ್ ಹಾಗೂ 2016ರಿಂದ ಟಿಆರ್‌ಎಸ್ ಪಕ್ಷದ ಬೊಂಥು ರಾಮ್ ಮೋಹನ್ ಅವರು ಮೇಯರ್ ಆಗಿದ್ದಾರೆ. ಸಿಂಧು ಅವರು ಭಾರತಿನಗರ ಡಿವಿಷನ್ ನಿಂದ ಗೆಲುವು ಸಾಧಿಸಿದ್ದು, ಹಾಲಿ ಮೇಯರ್ ಬೊಂಥು ರಾಮ್ ಮೋಹನ್ ಅವರ ಸ್ಥಾನವನ್ನು ತುಂಬಲಿದ್ದಾರೆ.

Sindu Adarsh Reddy set to become First women Mayor of GHMC

ಡಿ.1ರಂದು 150 ಸ್ಥಾನಕ್ಕಾಗಿ ಗ್ರೇಟರ್ ಹೈದರಾಬಾದಿನ ವಿವಿಧ ವಲಯಗಳಲ್ಲಿ ಮತದಾನ ನಡೆಸಲಾಗಿತ್ತು. ಡಿ. 4ರಂದು ಫಲಿತಾಂಶ ಪ್ರಕಟವಾಗಿತ್ತು. ಹಾಲಿ ಪಾಲಿಕೆ ಅವಧಿ ಫೆಬ್ರವರಿ 10, 2021ರಂದು ಕೊನೆಗೊಳ್ಳಲಿದೆ. ಸಾಮಾನ್ಯ ವರ್ಗದ ಮಹಿಳೆಗೆ ಈ ಬಾರಿ ಮೇಯರ್ ಸ್ಥಾನ ಮೀಸಲಾಗಿದೆ.

ಜಿಎಚ್‌ಎಂಸಿ ಚುನಾವಣೆಯಲ್ಲಿ ಆಡಳಿತಾರೂಢ ಟಿಆರ್‌ಎಸ್ 150 ವಾರ್ಡ್‌ಗಳ ಪೈಕಿ 55 ವಾರ್ಡ್‌ಗಳಲ್ಲಿ ಗೆಲುವು ಕಂಡಿದೆ. ಬಿಜೆಪಿ 48 ಮತ್ತು ಎಐಎಂಐಎಂ 44 ಕ್ಷೇತ್ರಗಳಲ್ಲಿ ಜಯಗಳಿಸಿವೆ. 2016ರಲ್ಲಿನಡೆದ ಚುನಾವಣೆಯಲ್ಲಿ ಟಿಆರ್‌ಎಸ್ 99 ಸೀಟುಗಳಲ್ಲಿ ಗೆದ್ದು ಭರ್ಜರಿ ಬಹುಮತ ಪಡೆದುಕೊಂಡಿತ್ತು. ಆಗ ಬಿಜೆಪಿ ಕೇವಲ ನಾಲ್ಕು ಕಡೆ ಗೆಲುವು ಕಂಡಿತ್ತು. ಈ ಬಾರಿ ಟಿಆರ್‌ಎಸ್ ಶೇ 40ರಷ್ಟು ಸೀಟುಗಳನ್ನು ಕಳೆದುಕೊಂಡಿದೆ.

Recommended Video

ಎತ್ತರದ ಶಿಖರ Mt Everest , ಪುನಃ ಅಳತೆ ಮಾಡ್ಬೇಕಂತೆ | Oneindia Kannada

ಮೇಯರ್ ಸ್ಥಾನಕ್ಕೆ ಸಿಂಧು: ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಪ್ರಗತಿ ಭವನಕ್ಕೆ ಕಾರ್ಪೊರೇಟರ್ ಸಿಂಧು ರೆಡ್ಡಿ ಅವರನ್ನು ಕರೆಸಿಕೊಂಡು ಅಭಿನಂದಿಸಿದ್ದಾರೆ. ಸಿಂಧು ಅವರ ಅಂಕಲ್ ಭೂಪಾಲ್ ರೆಡ್ಡಿ ಅವರು ಟಿಆರ್‌ಎಸ್ ಎಂಎಲ್ಸಿಯಾಗಿದ್ದರು.

English summary
Sindu Adarsh Reddy of Bharathinagar division is set to become First women Mayor of Greater Hyderabd Muncipal Corporation(GHMC).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X