ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈದ್ಯೆ ಅತ್ಯಾಚಾರ: ಆರೋಪಿಗಳ ಪರವಾಗಿ ವಾದಿಸದಿರಲು ವಕೀಲರ ನಿರ್ಧಾರ

|
Google Oneindia Kannada News

ಹೈದರಾಬಾದ್, ನವೆಂಬರ್ 30: ತೆಲಂಗಾಣದಲ್ಲಿ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಅವರ ಮೇಲೆ ನಡೆದ ಅತ್ಯಾಚಾರಕ್ಕೆ ಸಂಬಂಧಿಸಿದಂತೆ, ಆರೋಪಿಗಳ ಪರವಾಗಿ ವಾದ ಮಾಡದಿರಲು ಹೈದರಾಬಾದ್ ವಕೀಲರ ಸಂಘ ತೀರ್ಮಾನಿಸಿದೆ.

ತೆಲಂಗಾಣದಲ್ಲಿ ಪಶು ವೈದ್ಯೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿ ಬೆಂಕಿ ಹಚ್ಚಿ ಕೊಂದಿದ್ದರು.

ಪಂಕ್ಚರ್ ಆಯಿತೆಂದು ಗಾಡಿ ನಿಲ್ಲಿಸಿದ ಪಶುವೈದ್ಯೆ, ಸಿಕ್ಕಿದ್ದು ಸುಟ್ಟ ಶವವಾಗಿಪಂಕ್ಚರ್ ಆಯಿತೆಂದು ಗಾಡಿ ನಿಲ್ಲಿಸಿದ ಪಶುವೈದ್ಯೆ, ಸಿಕ್ಕಿದ್ದು ಸುಟ್ಟ ಶವವಾಗಿ

ವೈದ್ಯೆ ಕೆಲಸದ ನಿಮಿತ್ತ ಸ್ಕೂಟಿಯಲ್ಲಿ ತೆರಳಿದ್ದಳು ಬಳಿಕ ಅಲ್ಲಿಂದ ಕ್ಯಾಬಿನಲ್ಲಿ ಹೋಗಿ ಕೆಲಸ ಮುಗಿಸಿಕೊಂಡು ಮತ್ತೆ ಸ್ಕೂಟಿ ಹತ್ತಿ ಹಿಂದಿರುಗುವಾಗ ಮಾರ್ಗದಲ್ಲಿ ಸ್ಕೂಟಿ ಪಂಕ್ಚರ್ ಆಗಿತ್ತು. ಆಗ ಮನೆಗೆ ಕರೆ ಮಾಡಿ ವಿಷಯ ತಿಳಿಸಿದ್ದಳು. ಇಲ್ಲಿ ಯಾರೂ ಇಲ್ಲ ಕತ್ತಲಿದೆ, ಲಾರಿಗಳು ನಿಂತಿವೆ ಎಂದಷ್ಟೇ ಮಾಹಿತಿ ನೀಡಿದ್ದಳು. ಆದರೆ ರಾತ್ರಿ ಆಕೆ ಮನೆಗೆ ಬಾರಲೇ ಇಲ್ಲ.

ತೆಲಂಗಾಣದ ಪಶುವೈದ್ಯೆಯ ಅತ್ಯಾಚಾರ, ಹತ್ಯೆಗೆ ಮೊದಲೇ ನಡೆದಿತ್ತಾ ಪ್ಲಾನ್?ತೆಲಂಗಾಣದ ಪಶುವೈದ್ಯೆಯ ಅತ್ಯಾಚಾರ, ಹತ್ಯೆಗೆ ಮೊದಲೇ ನಡೆದಿತ್ತಾ ಪ್ಲಾನ್?

ಮರುದಿನ ಪೊಲೀಸರನ್ನು ಕರೆದುಕೊಂಡು ಪೋಷಕರು ಅಲ್ಲಿಗೆ ತೆರಳಿದಾಗ ಆಕೆಯ ಸುಟ್ಟ ದೇಹ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಅವರ ಪರವಾಗಿ ಯಾವ ವಕೀಲರು ವಾದ ಮಾಡದೆ ಇರಲು ನಿರ್ಧರಿಸಿದ್ದಾರೆ.

ಅತ್ಯಾಚಾರ ಆರೋಪಿಗಳ ಬಂಧನ

ಅತ್ಯಾಚಾರ ಆರೋಪಿಗಳ ಬಂಧನ

ಪ್ರಿಯಾಂಕಾರೆಡ್ಡಿ ಮೇಲೆ ಅತ್ಯಾಚಾರವೆಸಗಿದ್ದ ನಾಲ್ವರು ಆರೋಪಿಗಳನ್ನು 24 ಗಂಟೆಗಳಲ್ಲೇ ಪೊಲೀಸರು ಬಂಧಿಸಿದ್ದಾರೆ.ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳು ಮತ್ತು ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸಿದ ಸೈಬರಾಬಾದ್ ಪೊಲೀಸರು ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಅವರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಶಂಕಿತ ಆರೋಪಿಗಳನ್ನು ಅನಂತಪುರದಲ್ಲಿ ಬಂಧಿಸಿದ್ದು, ಹೈದರಾಬಾದ್‌ಗೆ ಕರೆತಂದಿದ್ದಾರೆ. ಪ್ರಿಯಾಂಕಾ ಅವರ ಶವ ಪತ್ತೆಯಾಗಿದ್ದ ಜಾಗದಲ್ಲೇ ಮತ್ತೊಂದು ಮಹಿಳೆಯ ಶವ ಪತ್ತೆಯಾಗಿರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.

ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಕೊಲೆ

ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಕೊಲೆ

ವೈದ್ಯೆ ತನ್ನ ಕೆಸಲ ಮುಗಿಸಿ ಸಂಜೆ 9 ಗಂಟೆ ಸುಮಾರಿಗೆ ತನ್ನ ಸ್ಕೂಟರ್ ಏರಿದ್ದಳು. ಆದರೆ ಮಾರ್ಗ ಮಧ್ಯದಲ್ಲಿ ಸ್ಕೂಟಿ ಕೈಕೊಟ್ಟಿತ್ತು. ಆದರೆ ಅದನ್ನು ಆರೋಪಿಗಳು ಬೇಕಂತಲೇ ಆ ರೀತಿ ಮಾಡಿದ್ದರು. ಅವರನ್ನು ಟೋಲ್ ಪ್ಲಾಜಾದಿಂದ ಹೆಚ್ಚೆಂದರೆ 50 ಮೀಟರ್ ದೂರದಲ್ಲಿರುವ ನಿರ್ಜನ ಪ್ರದೇಶಕ್ಕೆ ಎಳೆದೊಯ್ದಿದ್ದಾರೆ. ಅಲ್ಲಿ ಅವರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ.

ಪಶುವೈದ್ಯೆ ಅತ್ಯಾಚಾರ, ಕೊಲೆ: 24 ಗಂಟೆಯಲ್ಲೇ ದುಷ್ಕರ್ಮಿಗಳ ಬಂಧನಪಶುವೈದ್ಯೆ ಅತ್ಯಾಚಾರ, ಕೊಲೆ: 24 ಗಂಟೆಯಲ್ಲೇ ದುಷ್ಕರ್ಮಿಗಳ ಬಂಧನ

ಆರೋಪಿಗಳ ಪರ ವಕೀಲರು ವಾದ ಮಾಡುವುದಿಲ್ಲ

ಆರೋಪಿಗಳ ಪರ ವಕೀಲರು ವಾದ ಮಾಡುವುದಿಲ್ಲ

ಆರೋಪಿಗಳ ಪರವಾಗಿ ನಾವ್ಯಾರು ವಾದ ಮಾಡುವುದಿಲ್ಲ ಎಂದು ವಕೀಲರ ಸಂಘ ತಿಳಿಸಿದೆ. ಅವರು ಮಾಡಿರುವ ಕೃತ್ಯಕ್ಕೆ ಕ್ಷಮೆಯೇ ಇಲ್ಲ, ಹಾಗಾಗಿ ಹೈದರಾಬಾದಿನ ವಕೀಲರ್ಯಾರು ಕೂಡ ಆರೋಪಿಗಳಪರ ವಾದ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಆರೋಪಿಗಳು ಯಾರು?

ಆರೋಪಿಗಳು ಯಾರು?

ಬಂಧಿತರಲ್ಲಿ ಪ್ರಮುಖ ಶಂಕಿತ ಆರೋಪಿ ಮೊಹಮ್ಮದ್ ಪಾಶಾ ಮಹಬೂಬನಗರದ ನಾರಾಯಣಪೇಟೆ ಮೂಲದವನಾಗಿದ್ದು, ಲಾರಿ ಚಾಲಕನ ಕೆಲಸ ಮಾಡುತ್ತಿದ್ದ. ಆತನ ಜತೆಗೆ ರಂಗಾರೆಡ್ಡಿ ಮತ್ತು ಮಹಬೂಬನಗರದ ಕ್ಲೀನರ್ ಹಾಗೂ ಇನ್ನಿಬ್ಬರನ್ನು ಬಂಧಿಸಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ಯಾರೂ ಇಲ್ಲದ ಜಾಗಕ್ಕೆ ಪ್ರಿಯಾಂಕಾ ಅವರನ್ನು ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಆ ಜಾಗದಲ್ಲಿ ಪ್ರಿಯಾಂಕಾ ಅವರ ಬಟ್ಟೆಯ ತುಂಡುಗಳು ಹಾಗೂ ಮದ್ಯದ ಬಾಟಲಿಗಳು ಕಂಡುಬಂದಿವೆ.

English summary
Shadnagar Bar Association to not lend any kind of legal support to the four accused involved in the alleged rape and murder of a woman veterinary doctor in Telangana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X