• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಜನಿಕಾಂತ್ "ಅಣ್ಣಾತ್ತೆ" ಸಿನಿಮಾ ತಂಡದ ಏಳು ಮಂದಿಗೆ ಕೊರೊನಾ

|

ಹೈದರಾಬಾದ್, ಡಿಸೆಂಬರ್ 23: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸುತ್ತಿರುವ "ಅಣ್ಣಾತ್ತೆ" ಸಿನಿಮಾ ತಂಡದ ಏಳು ಮಂದಿಯಲ್ಲಿ ಕೊರೊನಾ ವೈರಸ್ ದೃಢಪಟ್ಟಿದ್ದು, ಹೈದರಾಬಾದ್ ನಲ್ಲಿ ನಡೆಯುತ್ತಿದ್ದ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ.

ಹೈದರಾಬಾದ್ ನಲ್ಲಿ ಡಿ.15ರಿಂದ ಅಣ್ಣಾತ್ತೆ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಏಳು ದಿನಗಳ ಚಿತ್ರೀಕರಣದ ನಂತರ ತಂಡದ ಏಳು ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ತಿಳಿದುಬಂದಿದೆ. ಹೀಗಾಗಿ ತಕ್ಷಣವೇ ಚಿತ್ರೀಕರಣ ನಿಲ್ಲಿಸಲಾಗಿದೆ.

ತೂತುಕುಡಿ ಪೊಲೀಸ್ ಫೈರಿಂಗ್ ಕುರಿತು ವಿವಾದಾತ್ಮಕ ಹೇಳಿಕೆ: ನಟ ರಜನೀಕಾಂತ್‌ಗೆ ಎರಡನೇ ಬಾರಿ ಸಮನ್ಸ್

ಸಿನಿಮಾ ಚಿತ್ರೀಕರಣದಲ್ಲಿ ರಜನಿಕಾಂತ್ ಕೂಡ ಭಾಗವಹಿಸಿದ್ದರು. ತಂಡದ ಸದಸ್ಯರಿಗೆ ಸೋಂಕು ಕಾಣಿಸಿಕೊಂಡಿದ್ದು, ಚೆನ್ನೈಗೆ ಹಿಂತಿರುಗಿದ್ದಾರೆ. ರಜನಿಕಾಂತ್ ‌ಗೆ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎನ್ನಲಾಗಿದೆ. ಸೋಂಕು ದೃಢಪಟ್ಟ ಇತರೆ ಸದಸ್ಯರ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಚಿತ್ರ ತಂಡದ ಸದಸ್ಯರಿಗೆ ಸೋಂಕು ತಗುಲಿರುವ ಮಾಹಿತಿ ಹೊರಬೀಳುತ್ತಿದ್ದಂತೆ, ಅಭಿಮಾನಿಗಳು ರಜನಿಕಾಂತ್ ಅವರಿಗೆ ಚಿತ್ರೀಕರಣದಲ್ಲಿ ಭಾಗಿಯಾಗದಂತೆ ಮನವಿ ಮಾಡಿದ್ದಾರೆ.

ಇನ್ನೊಂದೆಡೆ ರಾಜಕೀಯಕ್ಕೂ ಕಾಲಿಟ್ಟಿರುವ ರಜನಿಕಾಂತ್, ಡಿಸೆಂಬರ್ 31ಕ್ಕೆ ತಮ್ಮ ಪಕ್ಷವನ್ನು ಅಧಿಕೃತವಾಗಿ ಘೋಷಣೆ ಮಾಡಲಿರುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರೀಕರಣವನ್ನು ಶೀಘ್ರವೇ ಮುಗಿಸಲು ತೀರ್ಮಾನಿಸಿದ್ದರು ಎಂದು ತಿಳಿದುಬಂದಿದೆ.

English summary
At least seven members of actor Rajinikanth's film shooting crew test coronavirus positive in Hyderabad and shooting has stopped
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X