• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಪ್ತಗಿರಿ ಒಡೆಯನ ನೋಡಲು ನೂಕುನುಗ್ಗಲು

|

ತಿರುಮಲ, ಆ.18 : ಸಾಲು-ಸಾಲು ರಜೆಗಳ ಹಿನ್ನಲೆಯಲ್ಲಿ ತಿರುಪತಿಗೆ ಕಳೆದ ಎರಡು ದಿನಗಳಿಂದ ಜನಸಾಗರ ಹರಿದುಬರುತ್ತಿದೆ. ದೇವರ ದರ್ಶನ ಪಡೆಯಲು ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ಕಾಯುವುದು ಅನಿವಾರ್ಯವಾಗಿದೆ. ವಿಐಪಿ ಪಾಸ್ ಪಡೆದು ಹೋಗುವ ಭಕ್ತಾದಿಗಳಿಗೂ ಕಾಯುವ ಸಂಕಷ್ಟ ತಪ್ಪಿದ್ದಲ್ಲ.

ಶುಕ್ರವಾರದಿಂದ ಸಾಲು-ಸಾಲು ರಜೆಗಳು ಆರಂಭವಾದ ಹಿನ್ನಲೆಯಲ್ಲಿ ಲಕ್ಷಾಂತರ ಭಕ್ತಾದಿಗಳು ಸಪ್ತಗಿರಿ ಒಡೆಯ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಆಗಮಿಸಿದ್ದಾರೆ. ಇದರಿಂದ ದೇವರ ದರ್ಶನಕ್ಕೆ ನೂಕುನುಗ್ಗಲು ಉಂಟಾಗಿದ್ದು, ಭಕ್ತಾದಿಗಳು ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ಕಾಯುವಂತಾಗಿದೆ. ಶನಿವಾರದಿಂದ ಇಂತಹ ಪರಿಸ್ಥಿತಿ ಉಂಟಾಗಿದ್ದು, ಸೋಮವಾರದ ತನಕ ಮುಂದುವರೆಯುವ ಸಾಧ್ಯತೆ ಇದೆ.

ಸಾಮಾನ್ಯ ಭಕ್ತಾದಿಗಳು ದೇವರ ದರ್ಶನ ಪಡೆಯಲು ಸುಮಾರು 16 ಗಂಟೆ ಕಾದು ನಿಂತಿದ್ದರೆ, 300 ರೂ. ನೀಡಿ ವಿಶೇಷ ಪಾಸ್‌ಪಡೆದು ದರ್ಶನಕ್ಕೆ ಆಗಮಿಸಿದ ಜನರು 10 ಗಂಟೆಗಳ ಕಾಲ ಕಾಯಬೇಕಾಯಿತು. [ತಿಮ್ಮಪ್ಪ 5 ಸಾವಿರ ಕೆಜಿ ಚಿನ್ನದೊಡೆಯ] ಚಿತ್ರಗಳಲ್ಲಿ ನೋಡಿ ತಿರುಪತಿಯಲ್ಲಿ ಜನಸಾಗರ

ಮೂರು ದಿನಗಳಿಂದ ತಿರುಪತಿಯಲ್ಲಿ ಜನಸಾಗರ

ಮೂರು ದಿನಗಳಿಂದ ತಿರುಪತಿಯಲ್ಲಿ ಜನಸಾಗರ

ಸಾಲು-ಸಾಲು ರಜೆಗಳ ಹಿನ್ನಲೆಯಲ್ಲಿ ಮೂರು ದಿನಗಳಿಂದ ತಿರುಪತಿಗೆ ಭಕ್ತಸಾಗರವೇ ಹರಿದುಬರುತ್ತಿದ್ದು, ದೇವರ ದರ್ಶನ ಪಡೆಯಲು ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ಕಾಯುವಂತಾಗಿದೆ.

ಭಕ್ತಾದಿಗಳ ಪರದಾಟ

ಭಕ್ತಾದಿಗಳ ಪರದಾಟ

ಶನಿವಾರ ಮುಂಜಾನೆಯಿಂದ ತಿರುಪತಿಯಲ್ಲಿ ಜನಸಾಗರ ಹೆಚ್ಚಾಗಿದೆ. ಸೋಮವಾರದ ಸಂಜೆಯ ತನಕ ಪರಿಸ್ಥಿತಿ ಹೀಗೆಯೇ ಮುಂದುವರೆಯುವ ಸಾಧ್ಯತೆ ಇದೆ.

ಸಪ್ತಗಿರಿ ಒಡೆಯನ ದರ್ಶನಕ್ಕೆ ನೂಕುನುಗ್ಗಲು

ಸಪ್ತಗಿರಿ ಒಡೆಯನ ದರ್ಶನಕ್ಕೆ ನೂಕುನುಗ್ಗಲು

ಲಕ್ಷಾಂತರ ಭಕ್ತರು ತಿರುಪತಿಗೆ ಆಗಮಿಸುತ್ತಿರುವುದರಿಂದ ಸಪ್ತಗಿರಿ ಒಡೆಯ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಭಕ್ತಾದಿಗಳು ಪರದಾಟಬೇಕಾಗಿದೆ. ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ಕಾಯುವಂತಾಗಿದೆ.

ವಿಐಪಿ ಪಾಸ್‌ಪಡೆದರೂ ದರ್ಶನ ಕಷ್ಟ

ವಿಐಪಿ ಪಾಸ್‌ಪಡೆದರೂ ದರ್ಶನ ಕಷ್ಟ

ಸಾಮಾನ್ಯ ಜನರು 16 ಗಂಟೆ ಮತ್ತು 300 ರೂ. ನೀಡಿ ವಿಶೇಷ ಪಾಸ್ ಪಡೆದರು ಕನಿಷ್ಠ 10 ಗಂಟೆ ತಿಮ್ಮಪ್ಪನ ದರ್ಶನಕ್ಕಾಗಿ ಕಾದು ನಿಲ್ಲಬೇಕಾಗಿದೆ.

ವಿಶೇಷ ಪಾಸ್ ಸ್ಥಗಿತ

ವಿಶೇಷ ಪಾಸ್ ಸ್ಥಗಿತ

ಭಕ್ತಾದಿಗಳ ಸಂಖ್ಯೆ ಗಮನಿಸಿದ ತಿರುಪತಿ ದೇವಾಲಯ ಆಡಳಿತ ಮಂಡಳಿ ಭಾನುವಾರ ಮುಂಜಾನೆಯಿಂದಲೇ 300ರೂ.ಗಳ ವಿಶೇಷ ಪಾಸ್ ನೀಡುವುದನ್ನು ಸ್ಥಗಿತಗೊಳಿಸಿದೆ.

ವಿಐಪಿ ಪ್ರವೇಶಕ್ಕೆ ತಡೆ

ವಿಐಪಿ ಪ್ರವೇಶಕ್ಕೆ ತಡೆ

ಭಕ್ತರ ಸಂಖ್ಯೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ದೇವಾಲಯದ ಆಡಳಿತ ಮಂಡಳಿ ಸೋಮವಾರ ವಿಐಪಿ ಪ್ರವೇಶವನ್ನು ರದ್ದುಗೊಳಿಸಿದ್ದು, ಆಗಮಿಸಿರುವ ಭಕ್ತಾದಿಗಳ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಟ್ಟಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The hill town of Tirumala has been witnessing heavy pilgrim rush owning to series of Holidays from the past three days. On Sunday with all the serpentine queue lines extending up to few miles from the main temple complex.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more