ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಯಂಘೋಷಿತ ದೇವ ಮಾನವ ಬಾಲ ಸಾಯಿಬಾಬಾ ಹೃದಯ ಸ್ತಂಭನದಿಂದ ನಿಧನ

|
Google Oneindia Kannada News

ಹೈದರಾಬಾದ್, ನವೆಂಬರ್ 28: ಸ್ವಯಂ ಘೋಷಿತ ದೇವಮಾನವ ಬಾಲ ಸಾಯಿಬಾಬಾ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ. ಹೃದಯ ಸ್ತಂಭನದಿಂದ ಆತ ಮೃತಪಟ್ಟಿದ್ದಾರೆ ಎಂದು ವರದಿಯಾಗಿದ್ದು, ಅವರಿಗೆ 58 ವರ್ಷ ವಯಸ್ಸಾಗಿತ್ತು. ಬಾಲ ಸಾಯಿಬಾಬಾ ಜನವರಿ 14, 1960ರಂದು ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ಜನಿಸಿದ್ದರು.

ಕೆಲವು ಭಕ್ತರು ಅವರನ್ನು 'ಮ್ಯಾಜಿಕ್ ಬಾಬಾ' ಅಂತಲೇ ಕರೆಯುತ್ತಿದ್ದರು. ಪ್ರತಿ ವರ್ಷದ ಶಿವರಾತ್ರಿಯಂದು ಬಾಲ ಸಾಯಿಬಾಬಾ ತಮ್ಮ ಬಾಯಿಯಿಂದ ಶಿವಲಿಂಗ ಉಗುಳುತ್ತಿದ್ದರು. ಜತೆಗೆ ಗಾಳಿಯಲ್ಲಿ ಸಣ್ಣ-ಪುಟ್ಟ ಆಭರಣಗಳನ್ನು ಸೃಷ್ಟಿಸುತ್ತಿದ್ದರು. ಹಲವು ಪ್ರಗತಿಪರರು, ಇದು ತಂತ್ರಗಾರಿಕೆ ಅಷ್ಟೇ ಎಂದು ಆಕ್ಷೇಪ ಕೂಡ ವ್ಯಕ್ತಪಡಿಸಿದ್ದರು.

ಕರ್ತರ್ ಪುರ್ ಕಾರಿಡಾರ್ ಯೋಜನೆಗೆ ತಕರಾರು ಏಕೆ ಗೊತ್ತೆ? ಇಲ್ಲಿದೆ ವಿಶ್ಲೇಷಣೆಕರ್ತರ್ ಪುರ್ ಕಾರಿಡಾರ್ ಯೋಜನೆಗೆ ತಕರಾರು ಏಕೆ ಗೊತ್ತೆ? ಇಲ್ಲಿದೆ ವಿಶ್ಲೇಷಣೆ

ಬಾಲ ಸಾಯಿಬಾಬಾ ವಿರುದ್ಧ ಭೂ ಒತ್ತುವರಿ ಹಾಗೂ ಚೆಕ್ ಬೌನ್ಸ್ ಪ್ರಕರಣಗಳ ಆರೋಪಗಳು ಸಹ ಇದ್ದವು. ಆತ ಎರಡು ಆಶ್ರಮಗಳನ್ನು ಸ್ಥಾಪಿಸಿದ್ದರು. ಒಂದು ಕರ್ನೂಲ್ ನಲ್ಲಿದ್ದರೆ, ಮತ್ತೊಂದು ಹೈದರಾಬಾದ್ ನಲ್ಲಿತ್ತು. ಆದರೆ ಇವರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ವಿದೇಶಗಳಲ್ಲೇ.

Self styled Godman Bala Sai Baba dies in Hyderabad

ಕರ್ನೂಲ್ ಹೊರವಲಯದಲ್ಲಿ ಇರುವ ಬಾಲಸಾಯಿ ಅಂತರರಾಷ್ಟ್ರೀಯ ಶಾಲೆಯಲ್ಲಿ ಬುಧವಾರ ಅಂತಿಮ ವಿಧಿ ವಿಧಾನ ನೆರವೇರಿಸಲು ವ್ಯವಸ್ಥೆ ಮಾಡಲಾಯಿತು.

English summary
Bala Sai Baba, a self-styled Godman from Andhra Pradesh, died at a private hospital in Hyderabad on Tuesday reportedly due to cardiac arrest. He was 58.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X