ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್‌ನಲ್ಲಿ ಅಸ್ಸಾಂ ಸಿಎಂ ರ್‍ಯಾಲಿಯಲ್ಲಿ ಭದ್ರತಾ ಲೋಪ

|
Google Oneindia Kannada News

ಹೈದರಾಬಾದ್‌, ಸೆಪ್ಟೆಂಬರ್ 09: ಹೈದರಾಬಾದ್‌ನಲ್ಲಿ ಶುಕ್ರವಾರ ನಡೆದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಭಾಗಿಯಾಗಿದ್ದ ರ್‍ಯಾಲಿಯಲ್ಲಿ ವ್ಯಕ್ತಿಯೊಬ್ಬರು ಮೈಕ್‌ ಬಳಿ ಬಂದು ಸ್ಟ್ಯಾಂಡ್‌ನಿಂದ ಕೀಳಲು ಯತ್ನಿಸಿದ್ದರಿಂದ ಕೆಲಕಾಲ ವಾತಾವರಣ ಬಿಗಿಯಾಗಿತ್ತು.

ಆ ವ್ಯಕ್ತಿ ಸಿಎಂ ಹಿಮಾಂತ ಬಿಸ್ವಾ ಶರ್ಮಾ ಅವರತ್ತ ಕಣ್ಣು ಹಾಯಿಸುತ್ತಾ ಏನೋ ಹೇಳುತ್ತಿದ್ದರು. ಕೆಸಿಆರ್ ಪಕ್ಷದ ಬಣ್ಣದ ಸ್ಕಾರ್ಫ್ ಧರಿಸಿದ್ದ ವ್ಯಕ್ತಿಯನ್ನು ಹಠಾತ್ತಾಗಿ ಮೈಕ್‌ ಕಿತ್ತುಕೊಂಡು ವೇದಿಕೆಯಿಂದ ಕೆಳಗಿಳಿಸಲಾಯಿತು. ಹಿಮಂತ ಬಿಸ್ವಾ ಶರ್ಮಾ ಅವರು ಗಣೇಶ ಹಬ್ಬ ಮತ್ತು ಇತರ ಕಾರ್ಯಕ್ರಮಗಳಿಗೆ ಭಾಗ್ಯನಗರ ಗಣೇಶ ಉತ್ಸವ ಸಮಿತಿಯ ಅತಿಥಿಯಾಗಿ ಹೈದರಾಬಾದ್‌ಗೆ ಬಂದಿದ್ದರು. ಆಗ ಘಟನೆ ನಡೆಯಿತು.

ಹೈದರಾಬಾದ್: 'ಹುಸೇನ್‌ ಸಾಗರ'ಕ್ಕೆ 'ವಿನಾಯಕ ಸಾಗರ' ಎಂದ ತೆಲಂಗಾಣ ಬಿಜೆಪಿ ಅಧ್ಯಕ್ಷಹೈದರಾಬಾದ್: 'ಹುಸೇನ್‌ ಸಾಗರ'ಕ್ಕೆ 'ವಿನಾಯಕ ಸಾಗರ' ಎಂದ ತೆಲಂಗಾಣ ಬಿಜೆಪಿ ಅಧ್ಯಕ್ಷ

ಮುಂಜಾನೆ ನಗರದ ಪ್ರಮುಖ ದೇವಸ್ಥಾನವೊಂದಕ್ಕೆ ಭೇಟಿ ನೀಡಿದ ಅಸ್ಸಾಂ ಮುಖ್ಯಮಂತ್ರಿ ತೆಲಂಗಾಣ ಮುಖ್ಯಮಂತ್ರಿಯ ವಿರುದ್ಧ ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿ ಕೆಸಿಆರ್ ಅವರು ಬಿಜೆಪಿ ಮುಕ್ತ ರಾಜಕೀಯದ ಬಗ್ಗೆ ಮಾತನಾಡುತ್ತಾರೆ. ಆದರೆ ನಾವು ರಾಜವಂಶ ಮುಕ್ತ ರಾಜಕೀಯದ ಬಗ್ಗೆ ಮಾತನಾಡುತ್ತೇವೆ. ನಾವು ಇನ್ನೂ ಹೈದರಾಬಾದ್‌ನಲ್ಲಿ ಕೆಸಿಆರ್‌ ಅವರ ಮಗ ಮತ್ತು ಮಗಳ ಚಿತ್ರಗಳನ್ನು ನೋಡುತ್ತೇವೆ. ದೇಶದ ರಾಜಕೀಯವು ರಾಜವಂಶದ ರಾಜಕೀಯದಿಂದ ಮುಕ್ತವಾಗಿರಬೇಕು ಎಂದು ಅಸ್ಸಾ ಸಿಎಂ ಶರ್ಮಾ ತಿಳಿಸಿದರು.

Security lapse at Assam CM Himanta Biswa Sharma MJ Market Rally

ಸರ್ಕಾರವು ದೇಶಕ್ಕಾಗಿ, ಜನರಿಗಾಗಿ ಇರಬೇಕೋ ಹೊರತು ಎಂದಿಗೂ ಒಂದು ಕುಟುಂಬಕ್ಕಾಗಿ ಇರಬಾರದು. ದೇಶವು ವಂಶಾಡಳಿತದ ಸಾಂಪ್ರದಾಯಿಕತೆಯನ್ನು ಹೊಂದಿದೆ. ಈ ಎರಡರ ನಡುವೆ ಧ್ರುವೀಕರಣವು ಯಾವಾಗಲೂ ಅಸ್ತಿತ್ವದಲ್ಲಿದೆ ಎಂದರು. ಬಿಜೆಪಿ ಮತ್ತು ಕೆಸಿಆರ್‌ನ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗಳು ಮತ್ತು 2024ರಲ್ಲಿ ಲೋಕಸಭಾ ಚುನಾವಣೆಗೆ ಮುನ್ನ ಇತ್ತೀಚಿನ ಪರಸ್ಪರ ವಾಗ್ದಾಳಿಗಳನ್ನು ನಡೆಸುತ್ತಿವೆ.

Security lapse at Assam CM Himanta Biswa Sharma MJ Market Rally

ವಿರೋಧ ಪಕ್ಷಗಳನ್ನು ಒಟ್ಟುಗೂಡಿಸಲು ಮತ್ತು ಸಾರ್ವತ್ರಿಕ ಚುನಾವಣೆಗೆ ಐಕ್ಯರಂಗವನ್ನು ರೂಪಿಸಲು ಕೆಸಿಆರ್ ಅವರು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಮಾತಿನ ದಾಳಿ ಮುಂದುವರೆಸಿದ್ದಾರೆ.

English summary
At a rally attended by Assam Chief Minister Himanta Biswa Sharma in Hyderabad on Friday, the atmosphere was tense for some time as a man approached the microphone and tried to snatch it from the stand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X