• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

2ನೇ ಹಂತದ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಹೈದರಾಬಾದ್‌ಗೆ ಆಗಮನ

|
Google Oneindia Kannada News

ಹೈದರಾಬಾದ್, ಮೇ 16; 2ನೇ ಹಂತದ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯು ಭಾರತಕ್ಕೆ ಆಗಮಿಸಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಸ್ಪುಟ್ನಿಕ್ ವಿ ಲಸಿಕೆ ಅತ್ಯಂತ ಪರಿಣಾಮಕಾಗಿಯಾಗಿದೆ ಎಂದು ರಷ್ಯಾದ ತಜ್ಞರು ಘೋಷಣೆ ಮಾಡಿದ್ದಾರೆ.

ಭಾನುವಾರ ಹೈದರಾಬಾದ್ಗೆ ಸ್ಪುಟ್ನಿಕ್ ವಿ ಲಸಿಕೆಯ ಆಗಮಿಸಿದೆ. ಭಾರತದಲ್ಲಿನ ರಷ್ಯಾ ರಾಯಭಾರಿ ಎನ್. ಕುಡಶೇವ್ ಲಸಿಕೆ ಆಗಮನದ ಕುರಿತು ಮಾತನಾಡಿದ್ದಾರೆ.

ರಷ್ಯಾದಿಂದ ಆಮದಾಗಿರುವ ಸ್ಪುಟ್ನಿಕ್ ವಿ ಲಸಿಕೆ ಬೆಲೆ ಇಷ್ಟಿದೆ! ರಷ್ಯಾದಿಂದ ಆಮದಾಗಿರುವ ಸ್ಪುಟ್ನಿಕ್ ವಿ ಲಸಿಕೆ ಬೆಲೆ ಇಷ್ಟಿದೆ!

"ಸ್ಪುಟ್ನಿಕ್ ವಿ ಲಸಿಕೆ ಪರಿಣಾಮದ ಬಗ್ಗೆ ಜಗತ್ತಿಗೆ ತಿಳಿದಿದೆ. 2020ರ ದ್ವಿತಿಯಾರ್ಧದಲ್ಲಿಯೇ ರಷ್ಯಾದಲ್ಲಿ ಇದರ ಬಳಕೆಯನ್ನು ಆರಂಭಿಸಲಾಗಿದೆ. ಜನರ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಇದು ಬೀರಿದೆ" ಎಂದು ಎನ್. ಕುಡಶೇವ್ ಹೇಳಿದ್ದಾರೆ.

ಮುಂದಿನ ವಾರದಿಂದ ಸ್ಪುಟ್ನಿಕ್ ವಿ ಮಾರುಕಟ್ಟೆಯಲ್ಲಿ ಲಭ್ಯ ಮುಂದಿನ ವಾರದಿಂದ ಸ್ಪುಟ್ನಿಕ್ ವಿ ಮಾರುಕಟ್ಟೆಯಲ್ಲಿ ಲಭ್ಯ

ಹೈದರಾಬಾದ್‌ನ ರೆಡ್ಡೀಸ್ ಸಂಸ್ಥೆ ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆಯನ್ನು ವಿತರಣೆ ಮಾಡುತ್ತದೆ. ಈಗಾಗಲೇ ಹೈದರಾಬಾದ್‌ನಲ್ಲಿ ಇದನ್ನು ಜನರಿಗೆ ನೀಡಲಾಗುತ್ತಿದೆ. ಇದರ ತಯಾರಿ ಸಹ ಭಾರತದಲ್ಲಿ ನಡೆಯಲಿದೆ.

2022 ರೊಳಗೆ ರಷ್ಯಾದಿಂದ ಭಾರತಕ್ಕೆ 361 ಮಿಲಿಯನ್ ಡೋಸ್ ಸ್ಪುಟ್ನಿಕ್ ವಿ ಕೊರೊನಾ ಲಸಿಕೆ 2022 ರೊಳಗೆ ರಷ್ಯಾದಿಂದ ಭಾರತಕ್ಕೆ 361 ಮಿಲಿಯನ್ ಡೋಸ್ ಸ್ಪುಟ್ನಿಕ್ ವಿ ಕೊರೊನಾ ಲಸಿಕೆ

"ಸ್ಪುಟ್ನಿಕ್ ವಿ ರಷ್ಯಾ-ಭಾರತದ ಲಸಿಕೆಯಾಗಿದೆ. ಇದರ ಉತ್ಪಾದನೆಯನ್ನು ಪ್ರತಿವರ್ಷಕ್ಕೆ 850 ಮಿಲಿಯನ್ ಡೋಸ್‌ಗೆ ಹೆಚ್ಚಿಸಲಾಗುತ್ತದೆ. ಭಾರತದಲ್ಲಿ ಲಸಿಕೆಯ ಒಂದು ಡೋಸ್ ಮಾತ್ರ ಪರಿಚಯಿಸುವ ಉದ್ದೇಶವಿದೆ" ಎಂದು ಎನ್. ಕುಡಶೇವ್ ತಿಳಿಸಿದ್ದಾರೆ.

ಭಾರತದಲ್ಲಿ ಕೋವಿಡ್ ವಿರುದ್ಧ ಹೋರಾಟದಲ್ಲಿ ಕೋವಿಶೀಲ್ಡ್, ಕೊವ್ಯಾಕ್ಸಿನ್ ಮತ್ತು ಸ್ಪುಟ್ನಿಕ್ ವಿ ಲಸಿಕೆಯನ್ನು ನೀಡಲಾಗುತ್ತಿದೆ. ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಎರಡು ಡೋಸ್ ಪಡೆಯಬೇಕಾಗಿದೆ.

English summary
Second consignment of Sputnik V arrives in Hyderabad. Russian Ambassador to India N. Kudashev said that efficacy of Sputnik V is well-known in world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X