• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಕ್ತ ಚಂದನ ಮಾಫಿಯ ಜೊತೆ ನಟಿ ನಂಟು, ನಾಪತ್ತೆ!

By Mahesh
|

ಹೈದರಾಬಾದ್, ಏ.23: ಆಂಧ್ರಪ್ರದೇಶದ ಚಿತ್ತೂರಿನ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಎನ್ ಕೌಂಟರ್ ಪ್ರಕರಣ ದಿನೇ ದಿನೇ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ನಡುವೆ ರಕ್ತಚಂದನ ಮಾಫಿಯಾ ಜೊತೆಗೆ ಟಾಲಿವುಡ್ ನಂಟಿರುವುದು ಪತ್ತೆಯಾಗಿದೆ. ಸ್ಲಗಲಿಂಗ್ ಕಿಂಗ್ ಪಿನ್ ಮಸ್ತನ್ ವಾಲಿ ಸಂಪರ್ಕ ಹೊಂದಿದ್ದ ನಟಿ ಸದ್ಯಕ್ಕೆ ನಾಪತ್ತೆಯಾಗಿದ್ದಾರೆ.

ರಕ್ತ ಚಂದನ ಸ್ಲಗಲರ್ಸ್ ಮೇಲೆ ದಾಳಿ ನಡೆದ ದಿನದಿಂದ ತೆಲುಗು ಚಿತ್ರರಂಗದ ನಟಿ ನೀತು ಅಗರವಾಲ್ ಅವರು ನಾಪತ್ತೆಯಾಗಿದ್ದಾರೆ. ಮಸ್ತನ್ ವಾಲಿ ಜೊತೆ ಯಾವ ರೀತಿ ಸಂಪರ್ಕ ಹೊಂದಿದ್ದಾರೆ ಎಂದು ಪ್ರಶ್ನಿಸಲು ಹೈದರಾಬಾದ್ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.[ಆಂಧ್ರ -ತಮಿಳುನಾಡು ಸಂಬಂಧಕ್ಕೆ ಬೆಂಕಿ ಹಚ್ಚಿದ ರಕ್ತ ಚಂದನ]

ಪ್ರೇಮ ಪ್ರಣಯಂ ಚಿತ್ರದಲ್ಲಿ ನಟಿಸಿರುವ ನಟಿ ನೀತು ಮೇಲೂ ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಲಾಗಿದೆ. ಕರ್ನೂಲ್ ಜಿಲ್ಲೆ ರುದ್ರಾವರಂ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ನೀತುಗಾಗಿ ಬೆಂಗಳೂರು, ಹೈದರಾಬಾದ್, ಮುಂಬೈನಲ್ಲಿ ಶೋಧ ಕಾರ್ಯ ಜಾರಿಯಲ್ಲಿದೆ.

ನೀತು ಅಗರವಾಲ್ ಗೆ ಹೇಗೆ ನಂಟು?

ನೀತು ಅಗರವಾಲ್ ಗೆ ಹೇಗೆ ನಂಟು?

ರಕ್ತ ಚಂದನ ಮಾಫಿಯಾ ಕಿಂಗ್ ಪಿನ್ ಮಸ್ತಾನ್ ವಾಲಿ ಜೊತೆ ನಟಿ ನೀತು ಅಗರವಾಲ್ ಗೆ ಅಕ್ರಮ ಸಂಬಂಧ ಇರುವ ಬಗ್ಗೆ ಅನೇಕ ಬಾರಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅದರೆ, ಸೂಕ್ತ ಸಾಕ್ಷಿಗಳು ಸಿಕ್ಕಿರಲಿಲ್ಲ. ನೀತುಗಾಗಿ 35 ಲಕ್ಷ ರು ಮೌಲ್ಯದ ಒಂದು ಫ್ಲಾಟ್ ಕೂಡಾ ನೀಡಿದ್ದ ಎಂಬ ಮಾಹಿತಿ ಇದೆ. ಪ್ರೇಮ ಪ್ರಣಯಂ ಎಂಬ ತೆಲುಗು ಚಿತ್ರದಲ್ಲಿ ನೀತು ನಟಿಸಿದ್ದರು.ಇದಕ್ಕೆ ಮಸ್ತಾನ್ ವಾಲಿಯೇ ಹಣ ಹೂಡಿದ್ದ.

ಯಾರೀತ ಮಸ್ತಾನ್ ವಾಲಿ?

ಯಾರೀತ ಮಸ್ತಾನ್ ವಾಲಿ?

ನಿಂಬೆಹಣ್ಣು ಮಾರಾಟಗಾರನಾಗಿ ಆಂಧ್ರಪ್ರದೇಶದಲ್ಲಿ ಜೀವನೋಪಾಯ ಕಂಡು ಕೊಂಡಿದ್ದ ಮಸ್ತಾನ್ ಗೆ ಒಮ್ಮೆ ತಿರುಪತಿ ಬಳಿ ಸ್ಮಗ್ಲರ್ ಗಳ ಗುಂಪು ಪರಿಚಯವಾಗುತ್ತದೆ. ನಂತದ ದಂಧೆಗಿಳಿದು ಕೋಟಿಗಟ್ಟಲೇ ಹಣ ಬಾಚುತ್ತಾನೆ.ವೈಎಸ್ಸಾರ್ ಪಕ್ಷದ ಸಂಪರ್ಕ ಸಾಧಿಸಿ ಸಂಸದನಾಗಲು ಯತ್ನಿಸಿ ವಿಫಲನಾಗಿದ್ದ. ಏ.13ರಂದು ಕರ್ನೂಲ್ ಜಿಲ್ಲೆಯಲ್ಲಿ ಬಂಧಿತನಾಗಿದ್ದ ಮಸ್ತಾನ್ ನಂತರ ಜಾಮೀನು ಪಡೆದು ಹೊರಬಂದವನು ಸದ್ಯ ತಲೆಮರೆಸಿಕೊಂಡಿದ್ದಾನೆ.

ಎಸ್‌ಟಿಎಫ್ ಸಿಬ್ಬಂದಿಗಳ ವಿರುದ್ಧ ಎಫ್ ಐಆರ್

ಎಸ್‌ಟಿಎಫ್ ಸಿಬ್ಬಂದಿಗಳ ವಿರುದ್ಧ ಎಫ್ ಐಆರ್

ತಮಿಳುನಾಡು ಮೂಲದ ಕೂಲಿ ಕಾರ್ಮಿಕ ಹತ್ಯೆ ಆರೋಪದ ಮೇಲೆ ಸ್ಪೆಷಲ್ ಟಾಸ್ಕ್ ಫೋರ್ಸ್ ಪೊಲೀಸರ ಮೇಲೆ ಕೊಲೆ ಆರೋಪ ಹೊರೆಸಿ ಪ್ರಕರಣ ದಾಖಲಿಸಲಾಗಿದೆ. ಎಫ್ ಐಆರ್ ಹಾಕಿ ತನಿಖೆ ಕೈಗೊಳ್ಳಲಾಗಿದೆ ಎಂದು ಚಿತ್ತೂರು ಪೊಲೀಸರು ಆಂಧ್ರಪ್ರದೇಶ ಹೈಕೋರ್ಟಿಗೆ ಹೇಳಿದ್ದಾರೆ.

ಎಸ್‌ಟಿಎಫ್ ಸಿಬ್ಬಂದಿಗಳ ವಿರುದ್ಧ ಐಪಿಸಿಯ ಕಲಂ 302,364 ಮತ್ತು 34ರಡಿ ಎಫ್‌ಐಆರ್ ದಾಖಲಾಗಿದೆ. ತನಿಖೆಯನ್ನು ವಿಶೇಷ ತಂಡ ಕೈಗೊಳ್ಳಲಿದೆ

ತಮಿಳುನಾಡಿನಲ್ಲಿ ಇನ್ನೂ ಆಕ್ರೋಶ

ತಮಿಳುನಾಡಿನಲ್ಲಿ ಇನ್ನೂ ಆಕ್ರೋಶ

ತಿರುನಲ್ವೇಲಿ, ತಿರುವಣ್ಣಾಮಲೈ, ಸೇಲಂ ಮೂಲದ ಮೃತ ಕೂಲಿ ಕಾರ್ಮಿಕರಿಗೆ ತಮಿಳುನಾಡಿನ ಪನ್ನೀರ್ ಸೆಲ್ವಂ ಸರ್ಕಾರ ತಲಾ 3 ಲಕ್ಷ ರು ಪರಿಹಾರ ಧನ ಘೋಷಿಸಿತ್ತು. ಈ ಎನ್ ಕೌಂಟರ್ ಬಗ್ಗೆ ತಮಿಳುನಾಡಿನಲ್ಲಿ ಇನ್ನೂ ಆಕ್ರೋಶ ತಣ್ಣಗಾಗಿಲ್ಲ.

ರಕ್ತಚಂದನದ ಬೆಲೆ ಪ್ರತಿ ಟನ್ನಿಗೆ

ರಕ್ತಚಂದನದ ಬೆಲೆ ಪ್ರತಿ ಟನ್ನಿಗೆ

ವಿದೇಶದಲ್ಲಿ ರಕ್ತಚಂದನದ ಬೆಲೆ ಪ್ರತಿ ಟನ್ನಿಗೆ 25 ಲಕ್ಷದಿಂದ 1 ಕೋಟಿ ರು ತನಕ ರೇಟ್ ಇದೆ. ಕಳೆದ ವರ್ಷ ರಕ್ತಚಂದನದ ಜಾಗತಿಕ ಹರಾಜಿನಲ್ಲಿ ಆಂಧ್ರಪ್ರದೇಶಕ್ಕೆ 1,000 ಕೋಟಿ ರು ಆದಾಯ ಬಂದಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Earlier it was reported that controversial sandalwood smuggling case might have some connection with Telugu film industry. Now, it has been revealed that it was actress Neetu Agarwal who was associated with red sander smuggler Mastan Vali.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more