• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತಕ್ಕೆ ಬಂತು ರಷ್ಯಾದ ಸ್ಪುಟ್ನಿಕ್ V ಕೊರೊನಾ ವೈರಸ್ ಲಸಿಕೆ

|

ಹೈದರಾಬಾದ್, ನವೆಂಬರ್ 11: ಜಗತ್ತಿನ ಗಮನ ಸೆಳೆದಿರುವ ರಷ್ಯಾದ ಸ್ಪುಟ್ನಿಕ್ V ಕೊರೊನಾ ವೈರಸ್ ಲಸಿಕೆ ಭಾರತಕ್ಕೆ ಬಂದಿದೆ. ಹೈದರಾಬಾದ್ ಮೂಲದ ಔಷಧೀಯ ಕಂಪೆನಿ ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ಭಾರತದಲ್ಲಿ 2/3 ಹಂತದ ಮಾನವ ಪ್ರಯೋಗಗಳನ್ನು ನಡೆಸಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸ್ಪುಟ್ನಿಕ್ ಲಸಿಕೆಗಳು ಭಾರತಕ್ಕೆ ಸರಬರಾಜಾಗಿವೆ.

ಡಾ. ರೆಡ್ಡೀಸ್ ಮತ್ತು ಸ್ಪುಟ್ನಿಕ್ V ಚಿಹ್ನೆಗಳನ್ನು ಒಳಗೊಂಡ ಸಣ್ಣ ಕಂಟೇನರ್‌ಗಳನ್ನು ವಾಹನವೊಂದರಿಂದ ಇಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಸಂಪರ್ಕಿಸಿದಾಗ ಡಾ. ರೆಡ್ಡೀಸ್‌ನ ಹಿರಿಯ ಅಧಿಕಾರಿಯೊಬ್ಬರು ಸ್ಪುಟ್ನಿಕ್ ಲಸಿಕೆಗಳು ಭಾರತಕ್ಕೆ ಬಂದಿರುವುದನ್ನು ಖಚಿತಪಡಿಸಿದರು. ಹಾಗೆಯೇ ಭಾರತದಲ್ಲಿ ಶೀಘ್ರದಲ್ಲಿಯೇ ಕ್ಲಿನಿಕಲ್ ಪ್ರಯೋಗಗಳನ್ನು ಆರಂಭಿಸುವುದಾಗಿ ತಿಳಿಸಿದರು ಎಂದು 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ಸ್ಪುಟ್ನಿಕ್ ವಿ ಲಸಿಕೆಯು ಶೇ. 92 ರಷ್ಟು ಪರಿಣಾಮಕಾರಿದೆ. ಲಸಿಕೆ ಹಾಕಿಸಿಕೊಂಡ ವ್ಯಕ್ತಿಗಳು ಮತ್ತು ಪ್ಲಾಸ್ಮಾ ಚಿಕಿತ್ಸೆ ಪಡೆದವರ ನಡುವೆ ನಡೆಸಲಾದ 20 ದೃಢೀಕರಿಸಿದ ಕೊವಿಡ್ ಪ್ರಕರಣಗಳ ಆಧಾರದ ಮೇಲೆ ಲೆಕ್ಕಾಚಾರ ಹಾಕಲಾಗಿದೆ ಎಂದು ರಷ್ಯಾ ಡೈರೆಕ್ಟ್ ಇವೆಸ್ಟ್ ಮೆಂಟ್ ಫಂಡ್ ಹಾಗೂ ಗಮಾಲಿಯಾ ರೋಗಶಾಸ್ತ್ರ ಮತ್ತು ಸೂಕ್ಷ್ಮ ಜೀವಶಾಸ್ತ್ರ ರಾಷ್ಟ್ರೀಯ ಸಂಶೋಧನಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದ್ದವು. ಮುಂದೆ ಓದಿ.

ಸುರಕ್ಷಿತ ಅಧ್ಯಯನ

ಸುರಕ್ಷಿತ ಅಧ್ಯಯನ

ಭಾರತದ ಬಹು ಕೇಂದ್ರಗಳಲ್ಲಿ ಮತ್ತು ಯಾದೃಚ್ಛಿಕ ನಿಯಂತ್ರಿತ ಅಧ್ಯಯನ ನಡೆಸಲಾಗುವುದು. ಇದು ಸುರಕ್ಷತೆ ಮತ್ತು ಪ್ರತಿರೋಧಕ ಶಕ್ತಿ ಅಧ್ಯಯನವನ್ನು ಕೂಡ ಒಳಗೊಂಡಿರಲಿದೆ ಎಂದು ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ಮಾಹಿತಿ ನೀಡಿದೆ.

10 ಕೋಟಿ ಡೋಸ್ ಪೂರೈಕೆ

10 ಕೋಟಿ ಡೋಸ್ ಪೂರೈಕೆ

ಭಾರತದಲ್ಲಿ ಸ್ಪುಟ್ನಿಕ್ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಮತ್ತು ಹಂಚಿಕೆ ಮಾಡುವ ಸಂಬಂಧ ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ರಷ್ಯಾದ ಆರ್‌ಡಿಐಎಫ್ ಜತೆ ಸೆಪ್ಟೆಂಬರ್‌ನಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದ ಪ್ರಕಾರ ಆರ್‌ಡಿಐಎಫ್, ಡಾ. ರೆಡ್ಡೀಸ್ ಸಂಸ್ಥೆಗೆ ಔಷಧ ಪ್ರಾಧಿಕಾರದ ಅನುಮೋದನೆ ಆಧಾರದಲ್ಲಿ 10 ಕೋಟಿ ಡೋಸ್‌ಗಳಷ್ಟು ಲಸಿಕೆ ಪೂರೈಸಲು ಒಪ್ಪಿಕೊಂಡಿತ್ತು.

ಮೊದಲ ಲಸಿಕೆ

ಮೊದಲ ಲಸಿಕೆ

ಆಗಸ್ಟ್ 11 ರಂದು ವಿಶ್ವದ ಮೊದಲ ಕೊವಿಡ್ -19 ಲಸಿಕೆಯನ್ನು ನೋಂದಾಯಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ರಷ್ಯಾ ಪಾತ್ರವಾಯಿತು. ರಷ್ಯಾದ ಆರೋಗ್ಯ ಸಚಿವಾಲಯ ವ್ಯಾಪ್ತಿಯ ಮಾಲಿಯಾ ರೋಗಶಾಸ್ತ್ರ ಮತ್ತು ಸೂಕ್ಷ್ಮ ಜೀವಶಾಸ್ತ್ರ ರಾಷ್ಟ್ರೀಯ ಸಂಶೋಧನಾ ಸಂಸ್ಥೆ ಈ ಸ್ಪುಟ್ನಿಕ್ ವಿ ಲಸಿಕೆ ತಯಾರಿಸಿದೆ.

ಪರಿಣಾಮಕಾರಿ ಲಸಿಕೆ

ಪರಿಣಾಮಕಾರಿ ಲಸಿಕೆ

ಲಸಿಕೆಯ ಬಳಕೆ ಮತ್ತು ಕ್ಲಿನಿಕಲ್ ಪ್ರಯೋಗಗಳಲ್ಲಿ ದೊರಕಿರುವ ಫಲಿತಾಂಶಗಳು, ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯಲು ಪರಿಣಾಮಕಾರಿ ಪರಿಹಾರವಾಗಿದೆ ಎಂಬುದನ್ನು ತೋರಿಸುತ್ತದೆ ಮತ್ತು ಸಾಂಕ್ರಾಮಿಕ ರೋಗವನ್ನು ಹಿಮ್ಮೆಟ್ಟಿಸುವ ಅತ್ಯಂತ ಯಶಸ್ವಿ ಮಾರ್ಗವಾಗಿದೆ ಎಂದು ರಷ್ಯಾದ ಆರೋಗ್ಯ ಸಚಿವ ಮಿಖಾಯಿಲ್ ಮುರಾಶ್ಕೊ ಹೇಳಿದ್ದಾರೆ.

English summary
Russia's Sputnik V coronavirus vaccine has arrived in India to Reddy's Laboratories in Hyderabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X