ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮನುಸ್ಮೃತಿ ಇರಾನಿ'ಗೆ ಪಾಠ ಕಲಿಸಲು ವೇಮುಲಾ ತಾಯಿ ಕಣಕ್ಕಿಳಿಯಲಿ: ಮೇವಾನಿ

By ಮಾಧುರಿ ಅದ್ನಾಳ್
|
Google Oneindia Kannada News

ಹೈದರಾಬಾದ್, ಜನವರಿ 18: 2019ರ ಲೋಕಸಭೆ ಚುನಾವಣೆಯಲ್ಲಿ ರೋಹಿತ್ ವೇಮುಲಾ ತಾಯಿ ರಾಧಿಕಾ ವೇಮುಲಾ ಕಣಕ್ಕಿಳಿಯಬೇಕು ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಜಿಗ್ನೇಶ್, "2019ರ ಚುನಾವಣೆಯಲ್ಲಿ ಕಣಕ್ಕಿಳಿಯಬೇಕು ಎಂದು ನಮ್ಮ ಸ್ಪೂರ್ಥಿ ರಾಧಿಕಾ ವೆಮುಲಾ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಮತ್ತು ಈ ಮೂಲಕ ಸಂಸತ್ತಿನಲ್ಲಿ ಮನುಸ್ಮೃತಿ ಇರಾನಿಗೆ ಪಾಠ ಕಲಿಸಬೇಕು," ಎಂದು ಅವರು ಕರೆ ನೀಡಿದ್ದಾರೆ.

28 ವರ್ಷದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಜನವರಿ 17, 2016ರಲ್ಲಿ ಹೈದರಾಬಾದ್ ವಿವಿಯ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದು ರಾಷ್ಟ್ರದಾದ್ಯಂತ ಭಾರೀ ಸಂಚಲನವನ್ನು ಸೃಷ್ಟಿಸಿತ್ತು. ಇದೀಗ ವೇಮುಲಾ ಆತ್ಮಹತ್ಯೆಯನ್ನು 'ಸಂಸ್ಥೆಯ ಕೊಲೆ' ಎಂದು ಮೇವಾನಿ ಆರೋಪಿಸಿದ್ದಾರೆ.

Rohith Vemula's mother must contest 2019 polls to teach 'Manusmriti Irani' a lesson: Jignesh Mevani

ಮಾತ್ರವಲ್ಲದೆ ಕೇಂದ್ರ ಸಚಿವೆ ಸ್ಮೃತಿ ಇರಾನಿಯನ್ನು 'ಮನುಸ್ಮೃತಿ ಇರಾನಿ' ಎಂದು ಕರೆದಿರುವ ಮೇವಾನಿ, ಅವರಿಗೆ ಪಾಠ ಕಲಿಸಬೇಕು ಎಂದು ಒತ್ತಾಯಿಸಿದ್ದಾರೆ.

English summary
Dalit MLA from Gujarat, Jignesh Mewani on Thursday urged that Rohith Vemula's mother Radhika Vemula, must contest the 2019 Lok Sabha elections and teach BJP leader Smriti Irani a lesson.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X