ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಪಬ್ಲಿಕ್ ಟಿವಿ ರೇಟಿಂಗ್: ತೆಲಂಗಾಣದಲ್ಲಿ ಕೆಸಿಆರ್ ಕಿಂಗ್, ಆಂಧ್ರದಲ್ಲಿ ಜಗನ್ ಮೇನಿಯಾ!

|
Google Oneindia Kannada News

ಹೈದರಾಬಾದ್, ನವೆಂಬರ್ 02: ರಿಪಬ್ಲಿಕ್ ಟಿವಿ ಮತ್ತು ಸಿವೋಟರ್ ನಡೆಸಿದ ನ್ಯಾಷನಲ್ ಅಪ್ರೂವಲ್ ರೇಟಿಂಗ್ ಸಮೀಕ್ಷೆಯಲ್ಲಿ ಲೋಕಸಭೆ ಚುನಾವಣೆ ಬಗ್ಗೆ ಮುನ್ಸೂಚನೆ ಸಿಕ್ಕಿದೆ. ಇಂದು ಚುನಾವಣೆ ನಡೆದರೆ, ಲೋಕಸಭೆ ಅತಂತ್ರವಾಗಲಿದೆ ಎಂದು ಫಲಿತಾಂಶ ಬಂದಿದೆ. ಆಂಧ್ರಪ್ರದೇಶದ ಹಾಗೂ ತೆಲಂಗಾಣದಲ್ಲಿ ಯಾರು ಮೇಲುಗೈ ಸಾಧಿಸಬಹುದು ಎಂಬ ಅಂಶ ಬಹಿರಂಗಗೊಂಡಿದೆ.

ಲೋಕಸಭೆ ಚುನಾವಣೆ ಈಗ ನಡೆದರೆ, ಎನ್ ಡಿಎ ಮೈತ್ರಿಕೂಟವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು. ಆದರೆ, ಬಹುಮತಕ್ಕೆ ಅಗತ್ಯವಿರುವ ಮ್ಯಾಜಿಕ್ ನಂಬರ್ 272 ಅನ್ನು ತಲುಪಲು ವಿಫಲವಾಗಲಿದೆ.

ರಿಪಬ್ಲಿಕ್ ಸಮೀಕ್ಷೆ: ಯಾವ ರಾಜ್ಯದಲ್ಲಿ ಯಾರಿಗೆಷ್ಟು ಸೀಟು?ರಿಪಬ್ಲಿಕ್ ಸಮೀಕ್ಷೆ: ಯಾವ ರಾಜ್ಯದಲ್ಲಿ ಯಾರಿಗೆಷ್ಟು ಸೀಟು?

ಯುಪಿಎ ಸರ್ಕಾರ 119 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದ್ದು, ಇತರರು 163 ಕ್ಷೇತ್ರಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.

ರಾಜಸ್ಥಾನದಲ್ಲಿ ಮುದುಡಲಿದೆ ಕಮಲ, ಕೈಗೆ ಬಹುಮತದ ಬಲ!ರಾಜಸ್ಥಾನದಲ್ಲಿ ಮುದುಡಲಿದೆ ಕಮಲ, ಕೈಗೆ ಬಹುಮತದ ಬಲ!

ಈ ಬಾರಿಯ ಚುನಾವಣೆಯಲ್ಲಿ ಯಾವ್ಯಾವ ರಾಜ್ಯಗಳಲ್ಲಿ ಯಾರು, ಎಷ್ಟು ಸ್ಥಾನ ಗೆಲ್ಲಲಿದ್ದಾರೆ ಎಂಬ ರಿಪಬ್ಲಿಕ್ ಸಮೀಕ್ಷೆಯ ವಿವರ ಇಲ್ಲಿದೆ. ತೆಲಂಗಾಣದಲ್ಲಿ ಆಡಳಿತಾರೂಢ ಕೆ ಚಂದ್ರಶೇಖರರಾವ್ ಅವರ ಟಿಆರ್ ಎಸ್ ಮುನ್ನಡೆ ಪಡೆದರೆ, ಆಂಧ್ರದಲ್ಲಿ ಈ ಬಾರಿ ವೈಎಸ್ಸಾರ್ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ಹೇಳಿದೆ.

ಆಂಧ್ರಪ್ರದೇಶ (ಸೀಟು ಗಳಿಕೆ ಪ್ರೊಜೆಕ್ಷನ್)

ಆಂಧ್ರಪ್ರದೇಶ (ಸೀಟು ಗಳಿಕೆ ಪ್ರೊಜೆಕ್ಷನ್)

ಲೋಕಸಭೆ (ಸೀಟು ಗಳಿಕೆ ಪ್ರೊಜೆಕ್ಷನ್)
ವೈಎಸ್ಸಾರ್ ಕಾಂಗ್ರೆಸ್ ಪಕ್ಷ : 20
ತೆಲುಗು ದೇಶಂ ಪಕ್ಷ : 5

ಮತ ಗಳಿಕೆ ಶೇಕಡಾವಾರು ಮತಪಾಲು
ಯುಪಿಎ: 9.3%
ಎನ್ಡಿಎ: 11.3%
ವೈಎಸ್ಸಾರ್ ಕಾಂಗ್ರೆಸ್ ಪಕ್ಷ : 41.3%
ಟಿಡಿಪಿ: 31.2 %
ಇತರೆ : 6.8%

ತೆಲಂಗಾಣದಲ್ಲಿ 17 ಸ್ಥಾನಗಳು

ತೆಲಂಗಾಣದಲ್ಲಿ 17 ಸ್ಥಾನಗಳು

ಸ್ಥಾನಗಳಿಕೆ ಪ್ರೊಜೆಕ್ಷನ್
ಯುಪಿಎ: 08
ಎನ್ ಡಿಎ: 01
ಟಿಆರ್ ಎಸ್ : 7
ಎಐಎಂಐಎಂ : 1

ಮತ ಗಳಿಕೆ ಶೇಕಡಾವಾರು
ಯುಪಿಎ: 32.2%
ಎನ್ಡಿಎ: 19%
ಟಿಆರ್ ಎಸ್: 30.4%
ಎಐಎಂಐಎಂ : 3.9 %
ಇತರೆ : 14.6 %

ತೆಲಂಗಾಣದಲ್ಲಿ ಪರಿಸ್ಥಿತಿ ಬದಲಾಗಿಲ್ಲ

ತೆಲಂಗಾಣದಲ್ಲಿ ಪರಿಸ್ಥಿತಿ ಬದಲಾಗಿಲ್ಲ

ತೆಲಂಗಾಣದಲ್ಲಿ ಆಡಳಿತ ವಿರೋಧಿ ಅಲೆ ಎದ್ದಿದೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ಅವಧಿಗೆ ಮುನ್ನ ಬಂದಿರುವ ವಿಧಾನಸಭೆ ಚುನಾವಣೆಯಲ್ಲಿ ಕೆ ಚಂದ್ರಶೇಖರ್ ರಾವ್ ಅವರಿಗೆ ಮತ್ತೆ ಅಧಿಕಾರ ಲಭಿಸುವುದು ಖಾತ್ರಿಯಾಗಿದೆ. ಬಿಜೆಪಿಗೆ ಯಾವುದೇ ಸ್ಥಾನ ಸಿಗುವುದು ಕಷ್ಟ ಎನಿಸುತ್ತಿದೆ. ಟಿಡಿಪಿ ಕೂಡಾ ತನ್ನ ಪ್ರಾಬಲ್ಯವನ್ನು ಕಳೆದುಕೊಳ್ಳುತ್ತಿದೆ.ಕಾಂಗ್ರೆಸ್ ಕೂಡಾ ಅಸ್ತಿತ್ವ ಉಳಿಸುಕೊಳ್ಳುತ್ತಿಲ್ಲ.

ಟಿಡಿಪಿ -ಎನ್ಡಿಎ ಕದನದಲ್ಲಿ ವೈಎಸ್ಸಾರ್ ಕಾಂಗ್ರೆಸ್ ಗೆ ಲಾಭ

ಟಿಡಿಪಿ -ಎನ್ಡಿಎ ಕದನದಲ್ಲಿ ವೈಎಸ್ಸಾರ್ ಕಾಂಗ್ರೆಸ್ ಗೆ ಲಾಭ

2014ರಲ್ಲಿ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಹಾಗೂ ಬಿಜೆಪಿ 2 ಸೀಟು ಸೇರಿಸಿ ಎನ್ಡಿಎಗೆ 17 ಸ್ಥಾನ ಲಭಿಸಿತ್ತು. ಆದರೆ, ರಿಪಬ್ಲಿಕ್ ಪ್ರೊಜೆಕ್ಷನ್ ನಂತೆ ಟಿಡಿಪಿ 15 ರಿಂದ 5 ಸ್ಥಾನಕ್ಕೆ ಕುಸಿದಿದೆ. ಬಿಜೆಪಿ ಹಾಗೂ ಟಿಡಿಪಿ ಕದನದಿಂದ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಸಾರ್ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಲಿದ್ದು, 2014ರಲ್ಲಿ 8 ಸ್ಥಾನ ಗಳಿಸಿತ್ತು. ಈ ಬಾರಿ 20 ಸ್ಥಾನ ಗಳಿಸುವ ನಿರೀಕ್ಷೆಯಿದೆ.

English summary
Republic TV National Approval rating survey : In Andhra Pradesh, the survey indicated a 41.3 percent vote share for the YSRCP and 31.2 percent for the Telugu Desam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X