ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾನದ ನಡುವೆ ಬಿಜೆಪಿ ಅಧ್ಯಕ್ಷರ ಹತ್ಯೆ ಯತ್ನದ ಗಾಳಿಸುದ್ದಿ!

|
Google Oneindia Kannada News

ಹೈದರಾಬಾದ್, ಡಿ.1: ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗಾಗಿ ಮತದಾನ ನಡೆಯುವ ವೇಳೆಯಲ್ಲೇ ಗಾಳಿ ಸುದ್ದಿಯೊಂದು ಭಾರಿ ಸಂಚಲನ ಮೂಡಿಸಿತ್ತು. ತೆಲಂಗಾಣದ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಅವರ ಮೇಲೆ ಹತ್ಯೆ ಯತ್ನ ನಡೆದಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ಭಾರಿ ಗೊಂದಲ, ಗಾಬರಿ, ಆತಂಕಕ್ಕೆ ಕಾರಣವಾಗಿತ್ತು.

ಆದರೆ, ಕೆಲ ಮಾಧ್ಯಮಗಳಲ್ಲಿ ಬಂದಿದ್ದ ಈ ವರದಿಗಳನ್ನು ಸಂಪೂರ್ಣವಾಗಿ ಸುಳ್ಳು ಸುದ್ದಿ ಎಂದು ಹೈದರಾಬಾದ್ ಕೇಂದ್ರ ವಲಯದ ಜಂಟಿ ಪೊಲೀಸ್ ಆಯುಕ್ತ ಪಿ ವಿಶ್ವಪ್ರಸಾದ್ ಅವರು ಸ್ಪಷ್ಟಪಡಿಸಿದ್ದಾರೆ.

ಹೈದರಾಬಾದನ್ನು ನಿಜಾಮ್ ಸಂಸ್ಕೃತಿ ಮುಕ್ತಗೊಳಿಸಿ: ಅಮಿತ್ ಶಾ ಹೈದರಾಬಾದನ್ನು ನಿಜಾಮ್ ಸಂಸ್ಕೃತಿ ಮುಕ್ತಗೊಳಿಸಿ: ಅಮಿತ್ ಶಾ

'' ಬಂಡಿ ಸಂಜಯ್ ಅವರ ಮೇಲೆ ಹತ್ಯೆ ನಡೆದಿದೆ ಎಂದು ಕೆಲವು ಖಾಸಗಿ ಸುದ್ದಿ ಮಾಧ್ಯಮಗಳಲ್ಲಿ ವರದಿಗಳು ಬಂದಿವೆ. ಇದು ಸಂಪೂರ್ಣ ತಪ್ಪು ಮಾಹಿತಿ ಹಾಗೂ ಇಂಥ ಗಾಳಿಸುದ್ದಿಯನ್ನು ನಂಬಬೇಡಿ'' ಎಂದು ವಿಶ್ವಪ್ರಸಾದ್ ಅವರು ಹೇಳಿದರು.

Reports of attempt to murder BJP leader Bandi Sanjay baseless: Hyderabad Police

ಮಾದಾಪುರದಲ್ಲಿ ಎರಡು ರಾಜಕೀಯ ಗುಂಪುಗಳ ಜೊತೆ ಮಾತಿನ ಚಕಮಕಿ, ಸಂಘರ್ಷಗಳು ದಾಖಲಾಗಿವೆ. ಈ ಸಂದರ್ಭದಲ್ಲಿ ಕಾರಿನ ಗಾಜೊಂದನ್ನು ಪುಡಿ ಮಾಡಲಾಗಿದೆ. ಈ ಕುರಿತಂತೆ ಕೇಂದ್ರ ವಲಯದಲ್ಲಿ ದೂರು ದಾಖಲಾಗಿದೆ ಎಂದರು.

ಗಾಳಿಸುದ್ದಿ ನಂತರ ಭದ್ರತೆ
ಗಾಳಿ ಸುದ್ದಿ ಹಬ್ಬುತ್ತಿದ್ದಂತೆ ನೆಕ್ಲೆಸ್ ರಸ್ತೆಯ ಬಳಿ ಇದ್ದ ಬಂಡಿ ಸಂಜಯ್ ಬಳಿ ರಾಮ್ ಗೋಪಾಲ್ ಪೇಟ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ತೆರಳಿ ಮನೆಗೆ ತೆರಳಲು ಮನವಿ ಮಾಡಿಕೊಂಡಿದ್ದಾರೆ. ಮನೆಗೆ ಭದ್ರತೆ ಒದಗಿಸಲಾಗಿದೆ. ಆದರೆ ಬಂಡಿ ಸಂಜಯ್ ಬೆಂಬಲಿಗರ ಕಾರಿನ ಮೇಲೆ ಎಐಎಂಐಎಂ ಗೂಂಡಾಗಳು ದಾಳಿ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದರೆ, ಇದು ಬಂಡಿ ಸಂಜಯ್ ಮಾಡಿರುವ ಡ್ರಾಮಾ ಎಂದು ಅಲ್ಲಗೆಳೆದಿದೆ.

2016ರಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಪಕ್ಷ 150ರಲ್ಲಿ 99 ಸ್ಥಾನಗಳಿಸಿ ಆಡಳಿತ ವಹಿಸಿಕೊಂಡಿತ್ತು. ಹಾಲಿ ಪಾಲಿಕೆ ಅವಧಿ ಫೆಬ್ರವರಿ 10, 2021ರಂದು ಕೊನೆಗೊಳ್ಳಲಿದೆ. 150 ಸದಸ್ಯರ ಆಯ್ಕೆಗಾಗಿ ಡಿಸೆಂಬರ್ 01ರಂದು ಬೆಳಗ್ಗೆ 7 ರಿಂದ ಸಂಜೆ 6 ತನಕ ಮತದಾನದ ನಡೆಸಲಾಗಿದೆ. ಸುಮಾರು 74.67 ಲಕ್ಷ ಮತದಾರರಿದ್ದು, ಸಂಜೆ 4 ಗಂಟೆ ವೇಳೆ ಶೇ 30ರಷ್ಟು ಮತದಾನ ದಾಖಲಾಗಿತ್ತು. ಡಿಸೆಂಬರ್ 4ರಂದು ಮತ ಎಣಿಕೆ ನಡೆಯಲಿದೆ.

English summary
The joint commissioner of Police for Central Hyderabad P viswaprasad on Monday denied reports of an attempt to murder BJP Telangana unit president Bandi Sanjay.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X