ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲುಗಿನ ಖ್ಯಾತ ಕವಿ, ಜ್ಞಾನಪೀಠ ಪುರಸ್ಕೃತ ನಾರಾಯಣ ರೆಡ್ಡಿ ನಿಧನ

|
Google Oneindia Kannada News

ಹೈದರಾಬಾದ್, ಜೂನ್ 12: ತೆಲುಗಿನ ಹೆಸರಾಂತ ಕವಿ, ಜ್ಞಾನಪೀಠ ಪುರಸ್ಕೃತ ಸಿಂಗಿರೆಡ್ಡಿ ನಾರಾಯಣ ರೆಡ್ಡಿ ಅವರು ಹೈದರಾಬಾದ್ ನಲ್ಲಿ ಸೋಮವಾರ ನಿಧನರಾಗಿದ್ದಾರೆ. ಮೃತರಿಗೆ ಎಂಬತ್ತೈದು ವರ್ಷ ವಯಸ್ಸಾಗಿತ್ತು.

ಅಮೆರಿಕಾದಲ್ಲಿ ತೆಲಂಗಾಣ ವಿದ್ಯಾರ್ಥಿ ಮೇಲೆ ಗುಂಡಿನ ದಾಳಿಅಮೆರಿಕಾದಲ್ಲಿ ತೆಲಂಗಾಣ ವಿದ್ಯಾರ್ಥಿ ಮೇಲೆ ಗುಂಡಿನ ದಾಳಿ

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 1931ರಲ್ಲಿ ಹನುಮಾಜಿ ಪೇಟ್ ನಲ್ಲಿ ಜನಿಸಿದ ನಾರಾಯಣ ರೆಡ್ಡಿ ಅವರು ತೆಲುಗು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಅವರ ವಿಶ್ವಂಬರ ಎಂಬ ಸಾಹಿತ್ಯಕೃತಿಗೆ 1988ರಲ್ಲಿ ಜ್ಞಾನಪೀಠ ಪುರಸ್ಕೃತರಾದರು.

Renowned Telugu poet and Jnanpith awardee Dr C Narayana Reddy passes away in Hyderabad

ರೆಡ್ಡಿ ಅವರು ತುಂಬ ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯ ಕೃಷಿ ಆರಂಭಿಸಿದವರು. ತೆಲುಗು ಸಿನಿಮಾಗಳಿಗಾಗಿ ಹಲವು ಹಾಡುಗಳನ್ನು ಸಹ ರಚಿಸಿದ್ದಾರೆ. ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ತೆಲುಗು ಸಾಹಿತ್ಯದಲ್ಲಿ ಎಂಎ., ಪಿಎಚ್.ಡಿ ಪೂರ್ಣಗೊಳಿಸಿದ ರೆಡ್ಡಿ ಅವರು, ಅದೇ ವಿವಿಯ ಕಲಾ ಕಾಲೇಜಲ್ಲಿ ಪ್ರೊಫೆಸರ್ ಆಗಿ ವೃತ್ತಿ ಅರಂಭಿಸಿದರು.

ಜೂನ್ 26ಕ್ಕೆ ದಾವಣಗೆರೆಯಲ್ಲಿ ಸಾಹಿತಿ ಎಸ್ ಎಲ್ ಭೈರಪ್ಪ ಜತೆಗೆ ಸಂವಾದಜೂನ್ 26ಕ್ಕೆ ದಾವಣಗೆರೆಯಲ್ಲಿ ಸಾಹಿತಿ ಎಸ್ ಎಲ್ ಭೈರಪ್ಪ ಜತೆಗೆ ಸಂವಾದ

ಆ ನಂತರ ನಿಜಾಮ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿದರು. ಅಧ್ಯಾಪಕ ವೃತ್ತಿಯಲ್ಲಿರುವಾಗಲೂ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾದರು. ಜ್ಞಾನಪೀಠ ಪಡೆದ ತೆಲುಗಿನ ಎರಡನೇ ಸಾಹಿತಿ ನಾರಾಯಣ ರೆಡ್ಡಿ ಅವರು. ರಾಜ್ಯ ಸಭಾ ಸದಸ್ಯರಾಗಿಯೂ ಅವರು ಗಮನ ಸೆಳೆದಿದ್ದರು.

English summary
Renowned Telugu poet Cingireddy Narayana Reddy passed away in Hyderabad in the early hours of Monday. The 85-year-old was reported to be battling a long-term Illness, and passed away in a private hospital in a city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X