ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನೂ- ನಾಯ್ಡು ಪರಸ್ಪರ ಇಷ್ಟಪಡುತ್ತೇವೆ: ರಾಹುಲ್ ಗಾಂಧಿ

|
Google Oneindia Kannada News

Recommended Video

ನಾನೂ- ನಾಯ್ಡು ಪರಸ್ಪರ ಇಷ್ಟಪಡುತ್ತೇವೆ: ರಾಹುಲ್ ಗಾಂಧಿ | Oneindia Kannada

ಹೈದರಾಬಾದ್, ನವೆಂಬರ್ 29: ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜೊತೆ ಚುನಾವಣಾ ಮೈತ್ರಿ ಮಾಡಿಕೊಳ್ಳುತ್ತಿರುವ ರಾಹುಲ್ ಗಾಂಧಿ, ತಾವಿಬ್ಬರೂ ವಿರೋಧಿಗಳಲ್ಲ ಮತ್ತು ತಮ್ಮ ನಡುವಿನ ಹೊಂದಾಣಿಕೆ ತುಂಬಾ ಚೆನ್ನಾಗಿದೆ ಎಂದು ಹೇಳಿಕೊಂಡಿದ್ದಾರೆ.

ಮಧ್ಯಪ್ರದೇಶ ಮತದಾರರಿಗೆ ರಾಹುಲ್ ಗಾಂಧಿ 'ಭರವಸೆ' ಭರಿತ ಪತ್ರಮಧ್ಯಪ್ರದೇಶ ಮತದಾರರಿಗೆ ರಾಹುಲ್ ಗಾಂಧಿ 'ಭರವಸೆ' ಭರಿತ ಪತ್ರ

'ನಾವಿಬ್ಬರೂ ಪರಸ್ಪರ ಇಷ್ಟಡುತ್ತೇವೆ. ನಾವು ಜೊತೆಗೆ ಸೇರಿದರೆ ಸಾಕಷ್ಟು ಸಾಧಿಸಬಹುದು ಎನಿಸುತ್ತದೆ. ಬಹುಶಃ ಇದನ್ನು ನೀವು ಮುಂಬರುವ ಚುನಾವಣೆಯಲ್ಲಿ ನೋಡಲಿದ್ದೀರಿ. ನಾವು ಚುನಾವಣೆಯಲ್ಲಿ ಗೆಲ್ಲುತ್ತೇವೆ' ಎಂದು ಬುಧವಾರ ತೆಲಂಗಾಣಕ್ಕೆ ಚುನಾವಣಾ ಪ್ರಚಾರಕ್ಕಾಗಿ ತೆರಳಿದ ರಾಹುಲ್ ಗಾಂಧಿ ಹೇಳಿದರು.

ಚಂದ್ರಬಾಬು ನಾಯ್ಡು ಉರುಳಿಸುತ್ತಿರುವ ರಾಜಕೀಯ ದಾಳಕ್ಕೆ ಕೆಸಿಆರ್ ತಬ್ಬಿಬ್ಬು ಚಂದ್ರಬಾಬು ನಾಯ್ಡು ಉರುಳಿಸುತ್ತಿರುವ ರಾಜಕೀಯ ದಾಳಕ್ಕೆ ಕೆಸಿಆರ್ ತಬ್ಬಿಬ್ಬು

ಸುದೀರ್ಘ ಕಾಲದಿಂದ ರಾಜಕೀಯ ಎದುರಾಳಿಗಳಾಗಿದ್ದ ಕಾಂಗ್ರೆಸ್ ಮತ್ತು ಟಿಡಿಪಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜತೆಗೂಡುವ ಪ್ರಯತ್ನಗಳು ನಡೆದಿವೆ. ಡಿಸೆಂಬರ್ 7ರಂದು ತೆಲಂಗಾಣದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮುನ್ನ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕೈಜೋಡಿಸುತ್ತಿವೆ.

ನಾಯ್ಡು ಮುಖಕ್ಕೆ ಮಂಗಳಾರತಿ ಮಾಡಿದರೇ ಮಮತಾ, ಮಾಯಾವತಿ?! ನಾಯ್ಡು ಮುಖಕ್ಕೆ ಮಂಗಳಾರತಿ ಮಾಡಿದರೇ ಮಮತಾ, ಮಾಯಾವತಿ?!

https://kannada.oneindia.com/news/bhopal/rahul-gandhi-writes-a-letter-to-people-of-madhya-pradesh-155051.html

ನಾವು ಈ ವಿಚಾರದಲ್ಲಿ ಸ್ಪಷ್ಟವಾಗಿದ್ದೇವೆ. ನಮಗೆ ದೇಶ ಬಹಳ ಮುಖ್ಯ. ತೆಲುಗು ದೇಶಂ, ಕಾಂಗ್ರೆಸ್ ಪಕ್ಷ ಮತ್ತು ಇತರೆ ರಾಜಕೀಯ ಪಕ್ಷಗಳು ಬಿಜೆಪಿಯನ್ನು ಸೋಲಿಸಿ ದೇಶವನ್ನು ಉಳಿಸಲು ಒಂದಾಗಿ ಸೇರುವುದು ನಮ್ಮ ಜವಾಬ್ದಾರಿಯೂ ಹೌದು' ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.

English summary
Congress President Rahul Gandhi compaigning with Andhra Pradesh Chief Minister Chandrababu Naidu in Telangana said, we like each other. We think there is a lot can do together.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X