ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿ.ವಿ.ಸಿಂಧುಗೆ ಹೈದರಾಬಾದ್ ನಲ್ಲಿ ಅದ್ದೂರಿ ಸ್ವಾಗತ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಹೈದರಾಬಾದ್, ಆಗಸ್ಟ್ 22: ರಿಯೋ ಒಲಿಂಪಿಕ್ಸ್ ನಿಂದ ಹೈದರಾಬಾದ್ ಗೆ ಹಿಂತಿರುಗಿದ ಬೆಳ್ಳಿ ಪದಕ ವಿಜೇತೆ, ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧುಗೆ ಸೋಮವಾರ ಅದ್ದೂರಿ ಸ್ವಾಗತ ಕೋರಲಾಯಿತು. ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ಸಿಂಧು ಹೊಸ ಇತಿಹಾಸ ಬರೆದಿದ್ದಾರೆ. ಆಂಧ್ರ, ತೆಲಂಗಣಾದ ಪ್ರಮುಖರು ಸಿಂಧುವನ್ನು ಬರಮಾಡಿಕೊಂಡರು.

sindhu

ತೆರೆದ ಬಸ್ ನಲ್ಲಿ ಮೆರವಣಿಗೆ ಮೂಲಕ ಸಿಂಧು ಹಾಗೂ ತರಬೇತುದಾರ ಪುಲ್ಲೇಲ ಗೋಪಿಚಂದ್ ಅವರನ್ನು ಕರೆತರಲಾಯಿತು. ಭಾರಿ ಭದ್ರತೆಯಿದ್ದ ತೆರೆದ ಬಸ್ ನಲ್ಲಿ ಆಗಮಿಸಿದ ಸಿಂಧು, ಅಭಿಮಾನಿಗಳ ಕಡೆಗೆ ಕೈ ಬೀಸಿ ಸಂತಸ ವ್ಯಕ್ತಪಡಿಸಿದರು. ಹೈದರಾಬಾದ್ ನಲ್ಲಿರುವ ಗಚ್ಚಿಬೋಳಿ ಮೈದಾನದಲ್ಲಿ ಸಿಂಧು ಹಾಗೂ ಗೋಪಿಚಂದ್ ಗೆ ಸರ್ಕಾರದ ವತಿಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.[ಭಾರತದ ಬೆಳ್ಳಿ ಸಿಂಧುಗೆ ಕಡೆಗೆ ಹರಿದು ಬಂದ ಗಿಫ್ಟ್ ಗಳ ರಾಶಿ]

ಆಂಧ್ರದ ಉಪಮುಖ್ಯಮಂತ್ರಿ ಚಿನ್ನರಾಜಪ್ಪ, ಸಚಿವ ದೇವಿನೇನಿ ಉಮಾಮಹೇಶ್ವರ ರಾವ್ ಮತ್ತಿತರ ಸಚಿವರು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿ ಒಲಿಂಪಿಕ್ಸ್ ನಲ್ಲಿ ದೇಶಕ್ಕೆ ಬೆಳ್ಳಿ ಹಾಗೂ ಕಂಚಿನ ಪದಕ ತಂದ ಹೆಣ್ಣುಮಕ್ಕಳ ಬಗ್ಗೆ ಹೆಮ್ಮೆ ವ್ಯಕ್ತವಾಗುತ್ತಿದೆ.

English summary
India's Olympic silver medallist PV Sindhu was given a grand welcome today here in the city as she returned home from Rio de Janeiro. Andhra and Telangana politicians present while welcoming her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X