ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗಳಿಗೆ ಪೊಲೀಸ್ ಅಪ್ಪನ ಹೆಮ್ಮೆಯ ಸೆಲ್ಯೂಟ್

|
Google Oneindia Kannada News

ಹೈದರಾಬಾದ್, ಸೆಪ್ಟೆಂಬರ್ 3: ಪೊಲೀಸ್ ಇಲಾಖೆಯಲ್ಲಿ ಅಪ್ಪನಿಗೆ ಮೂರು ದಶಕಕ್ಕೂ ಹೆಚ್ಚಿನ ಸೇವೆ ಸಲ್ಲಿಸಿದ ಅನುಭವ. ಅಪ್ಪನ ಹಾದಿಯನ್ನೇ ತುಳಿದ ಮಗಳು ಪೊಲೀಸ್ ಇಲಾಖೆಗೆ ಸೇರಿ ನಾಲ್ಕು ವರ್ಷಗಳಾಗಿವೆಯಷ್ಟೇ. ಭಾನುವಾರ ಕರ್ತವ್ಯದಲ್ಲಿದ್ದ ಅಪ್ಪ-ಮಗಳು ಮುಖಾಮುಖಿಯಾದರು. ಅರೆ ಕ್ಷಣವೂ ಯೋಚಿಸದೆ ಅಪ್ಪ ತನ್ನೆದುರಿಗೆ ನಿಂತ ಮಗಳಿಗೆ ಗೌರವದಿಂದ ಸೆಲ್ಯೂಟ್ ಹೊಡೆದರು.

ತೆಲಂಗಾಣದ ಪೊಲೀಸ್ ಉಪ ಆಯುಕ್ತ ಎ.ಆರ್. ಉಮಾಮಹೇಶ್ವರ ಶರ್ಮಾ ಅವರಿಗೆ ತಮ್ಮ ಮೇಲಧಿಕಾರಿಯಾಗಿರುವ ಜಗ್ತಿಯಲ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸಿಂಧು ಶರ್ಮಾ ಅವರಿಗೆ ಸೆಲ್ಯೂಟ್ ಹೊಡೆಯುವುದು ಹೆಮ್ಮೆಯ ಸಂಗತಿ.

ಸೆ. 2ಕ್ಕೆ ಕೆಸಿಆರ್ ರಿಂದ ತೆಲಂಗಾಣ ವಿಧಾನಸಭೆ ವಿಸರ್ಜನೆ ಘೋಷಣೆ?ಸೆ. 2ಕ್ಕೆ ಕೆಸಿಆರ್ ರಿಂದ ತೆಲಂಗಾಣ ವಿಧಾನಸಭೆ ವಿಸರ್ಜನೆ ಘೋಷಣೆ?

ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಹೈದರಾಬಾದ್‌ನ ಹೊರವಲಯದ ಕೊಂಗರ ಕಾಲನ್‌ನಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆ ವೇಳೆ ಪೊಲೀಸ್ ಅಧಿಕಾರಿಗಳಾಗಿರುವ ಅಪ್ಪ-ಮಗಳು ಮುಖಾಮುಖಿಯಾದಾಗ ನಡೆದ ಘಟನೆಯಿದು.

proud father police salutes senior officer daughter

ಮುಂದಿನ ವರ್ಷ ನಿವೃತ್ತರಾಗಲಿರುವ ಉಮಾಮಹೇಶ್ವರ ಶರ್ಮಾ, ರಾಚಕೊಂಡ ಪೊಲೀಸ್ ವ್ಯಾಪ್ತಿಯಲ್ಲಿನ ಮಲ್ಕಾಜ್‌ಗಿರಿ ಪ್ರದೇಶದ ಡಿಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಬ್ ಇನ್‌ಸ್ಪೆಕ್ಟರ್ ಆಗಿ ವೃತ್ತಿ ಬದುಕು ಆರಂಭಿಸಿದ್ದ ಅವರು, ಇತ್ತೀಚೆಗಷ್ಟೇ ಐಪಿಎಸ್ ಶ್ರೇಣಿ ಪಡೆದುಕೊಂಡಿದ್ದರು. ಅವರ ಮಗಳು ಸಿಂಧು ಶರ್ಮಾ, 2014ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ.

ಕರ್ನಾಟಕ, ಕೇರಳ ಬಳಿಕ ಈಗ ಆಂಧ್ರ, ತೆಲಂಗಾಣದಲ್ಲಿ ಪ್ರವಾಹ ಭೀತಿಕರ್ನಾಟಕ, ಕೇರಳ ಬಳಿಕ ಈಗ ಆಂಧ್ರ, ತೆಲಂಗಾಣದಲ್ಲಿ ಪ್ರವಾಹ ಭೀತಿ

ನಮ್ಮ ಕರ್ತವ್ಯದ ನಡುವೆ ಮೊದಲ ಬಾರಿಗೆ ಪರಸ್ಪರ ಎದುರಾಗಿದ್ದೇವೆ. ಆಕೆಯೊಂದಿಗೆ ಕೆಲಸ ಮಾಡುತ್ತಿರುವುದು ನನ್ನ ಅದೃಷ್ಟ ಎಂದು ಶರ್ಮಾ ಹೇಳಿದ್ದಾರೆ.

'ಆಕೆ ನನ್ನ ಹಿರಿಯ ಅಧಿಕಾರಿ. ಆಕೆಯನ್ನು ನೋಡಿದಾಗ ಸೆಲ್ಯೂಟ್ ಹೊಡೆಯುತ್ತೇನೆ. ನಾವು ನಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತೇವೆ ಮತ್ತು ಅದರ ಬಗ್ಗೆ ಚರ್ಚಿಸುವುದಿಲ್ಲ. ಆದರೆ, ಮನೆಯಲ್ಲಿ ಅಪ್ಪ-ಮಗಳಂತೆ ಇರುತ್ತೇವೆ' ಎಂದಿದ್ದಾರೆ.

ಕೇರಳ ಪ್ರವಾಹ: ಒಂದು ತಿಂಗಳ ಸಂಬಳ ದೇಣಿಗೆ ನೀಡಿದ ತೆಲಂಗಾಣ ಡಿಸಿಎಂಕೇರಳ ಪ್ರವಾಹ: ಒಂದು ತಿಂಗಳ ಸಂಬಳ ದೇಣಿಗೆ ನೀಡಿದ ತೆಲಂಗಾಣ ಡಿಸಿಎಂ

ಸಭೆಯಲ್ಲಿ ಮಹಿಳೆಯರ ಭದ್ರತೆಯ ಜವಾಬ್ದಾರಿ ನಿರ್ವಹಿಸುತ್ತಿದ್ದ ಸಿಂಧು, ಒಟ್ಟಿಗೆ ಕೆಲಸ ಮಾಡಲು ಒಳ್ಳೆಯ ಅವಕಾಶ ಸಿಕ್ಕಿದೆ. ನನಗೆ ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.

English summary
Father and daughter duo serving in Police service came face to face, and father saluted her. Father DCP Umamaheswara Sarma and daughter Sindhu Sarma both are working at Telangana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X