ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ಸಿಲಿಂಡರ್ ನೆತ್ತಿ ಮೇಲೆ ಹೊಡೆಯುವ ಹೈದ್ರಾಬಾದ್ ಮಹಿಳೆಯರು; ಹಿಂದಿದೆ ಕುತೂಹಲದ ಕಾರಣ!?

|
Google Oneindia Kannada News

ಹೈದ್ರಾಬಾದ್, ಜುಲೈ 9: ಕೇಂದ್ರ ಸರ್ಕಾರದ ಬೆಲೆ ಏರಿಕೆ ಹೊಡೆತಕ್ಕೆ ಸಾಮಾನ್ಯ ವರ್ಗದ ಜನರು ಹೈರಾಣಾಗಿದ್ದಾರೆ. ಅಡುಗೆ ಅನಿಲದ ಬೆಲೆ ಕೇಳಿದ್ರೆ ಕನಸಿನಲ್ಲೂ ಬೆಚ್ಚಿ ಬೀಳುವಂತಾ ವಾತಾವರಣ ಸೃಷ್ಟಿಯಾಗಿದೆ.

ದೇಶದ ನಡುರಸ್ತೆಗಳಲ್ಲಿ, ರೈಲು ಹಳಿಗಳ ಮೇಲೆ, ಸರ್ಕಾರಿ ಕಚೇರಿಗಳ ಎದುರು ಪ್ರತಿಭಟನೆ ನಡೆಸುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಇಂಥದರ ಮಧ್ಯೆ ಹೈದ್ರಾಬಾದ್ ನಗರದಲ್ಲಿ ತಮ್ಮ ವಿನೂತನ ರೀತಿ ಪ್ರತಿಭಟನೆ ಮೂಲಕ ಸುದ್ದಿ ಮಾಡಿದ್ದಾರೆ.

Breaking: ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆBreaking: ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ

ಅಡುಗೆ ಅನಿಲದ ಬೆಲೆ ಏರಿಕೆಯನ್ನು ಖಂಡಿಸಿ ಅದೇ ಗ್ಯಾಸ್ ಸಿಲಿಂಡರ್ ಅನ್ನು ಹಿಡಿದುಕೊಂಡು ಮನೆ ಬಾಗಿಲ ಎದುರಿಗೆ ಬಂದು ನಿಂತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದಂತೆ ನಾವು ಪ್ಲೇಟು, ತಾಟುಗಳ ಬದಲಿಗೆ ಗ್ಯಾಸ್ ಸಿಲಿಂಡರ್ ಅನ್ನು ಬಾರಿಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಿಲಿಂಡರ್ ನೆತ್ತಿ ಮೇಲೆ ಬಾರಿಸುವ ಮೂಲಕ ಪ್ರತಿಭಟನೆ

ಅಡುಗೆ ಅನಿಲದ ಬೆಲೆಯು ಸಾಮಾನ್ಯ ವರ್ಗದ ಜನರ ಕೈಗೆ ಸಿಗದಷ್ಟು ಏರಿಕೆ ಆಗುತ್ತಿದೆ. ಈಗಾಗಲೇ ಒಂದು ಸಾವಿರ ರೂಪಾಯಿ ಗಡಿ ದಾಟಿರುವ ಸಿಲಿಂಡರ್ ದರದಲ್ಲಿ ಮೂರು ದಿನಗಳ ಹಿಂದೆ ಮತ್ತೆ ಏರಿಕೆ ಕಂಡು ಬಂದಿದೆ. ಕೇಂದ್ರ ಸರ್ಕಾರದ ಈ ಕ್ರಮವನ್ನು ಖಂಡಿಸಿದ ಮಹಿಳೆಯರು ಹೈದ್ರಾಬಾದ್ ನಗರದಲ್ಲಿ ವಿನೂತನ ಪ್ರತಿಭಟನೆ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ಮನೆ ಬಾಗಿಲ ಎದುರಿನಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಇಟ್ಟುಕೊಂಡು ಅವುಗಳ ನೆತ್ತಿಯ ಮೇಲೆ ಸೌಟಿನಿಂದ ಬಾರಿಸಿದರು. ಆ ಮೂಲಕ ಬೆಲೆ ಏರಿಕೆಯನ್ನು ಖಂಡಿಸಿದರು.

ಅಡುಗೆ ಅನಿಲದ ದರದಲ್ಲಿ 50 ರೂ. ಏರಿಕೆ

ಅಡುಗೆ ಅನಿಲದ ದರದಲ್ಲಿ 50 ರೂ. ಏರಿಕೆ

ಭಾರತದಲ್ಲಿ ಜುಲೈ 6ರಿಂದಲೇ ಜಾರಿಗೆ ಬರುವಂತೆ ಅಡುಗೆ ಅನಿಲದ ದರವನ್ನು ಏರಿಕೆ ಮಾಡಲಾಗಿತ್ತು. 14.20 ಕೆಜಿ ತೂಕದ ಒಂದು ಸಿಲಿಂಡರ್ ದರದಲ್ಲಿ 50 ರೂಪಾಯಿ ಏರಿಕೆ ಮಾಡುವಂತೆ ಘೋಷಿಸಲಾಯಿತು. ಆ ಮೂಲಕ ಒಂದು ಸಿಲಿಂಡರ್ ದರವು ಮತ್ತೆ 1053 ರೂಪಾಯಿಗೆ ಏರಿಕೆ ಆಯಿತು. ಪರಿಷ್ಕೃತ ದರ ಪಟ್ಟಿಯಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಕುಟುಂಬಗಳು ಪ್ರತಿ ಸಿಲಿಂಡರ್‌ಗೆ 1,053 ರೂ. ಪಾವತಿಸಬೇಕಾಗುತ್ತದೆ. ಇನ್ನು ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಸಿಲಿಂಡರ್ ಬೆಲೆ 1,052.50 ರೂ., ಕೋಲ್ಕತ್ತಾದಲ್ಲಿ 1,079 ರೂ. ಮತ್ತು ಚೆನ್ನೈ ನಿವಾಸಿಗಳು 1,068.50 ರೂ. ತೆರಬೇಕಾಗುತ್ತದೆ. ಬೆಂಗಳೂರಲ್ಲಿ ದರ 1005. 50 ರೂಪಾಯಿ ಆಗಿದೆ.

ತೆಲಂಗಾಣದಲ್ಲಿ ಕೇಂದ್ರದ ವಿರುದ್ಧ ಹೆಚ್ಚಿದ ಪ್ರತಿಭಟನೆ

ತೆಲಂಗಾಣದಲ್ಲಿ ಕೇಂದ್ರದ ವಿರುದ್ಧ ಹೆಚ್ಚಿದ ಪ್ರತಿಭಟನೆ

ಕಳೆದ ಶುಕ್ರವಾರವಷ್ಟೇ ತೆಲಂಗಾಣ ರಾಜ್ಯಾದ್ಯಂತ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕೆ ವಿರೋಧಿಸಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ನಾಯಕರು, ಸಚಿವರು, ಶಾಸಕರು ಮತ್ತು ಸಂಸದರು ಪ್ರತಿಭಟನೆ ನಡೆಸಿದರು. ಕಳೆದ ಎಂಟು ವರ್ಷಗಳ ಹಿಂದೆ 450 ರೂಪಾಯಿಯಿದ್ದ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಈಗ 1,100 ರೂಪಾಯಿಗೆ ಏರಿಕೆಯಾಗಿದೆ. ಪ್ರತಿ ಸಿಲಿಂಡರ್‌ಗೆ ₹240 ರ ಸಬ್ಸಿಡಿಯನ್ನು ಹಂತ ಹಂತವಾಗಿ ಹಿಂಪಡೆಯಲಾಗುತ್ತಿದ್ದು, ಅದು ಹೆಸರಿಗೆ ಮಾತ್ರ ಅಸ್ತಿತ್ವದಲ್ಲಿದೆ ಎಂದು ಶ್ರೀನಿವಾಸ್ ಗೌಡ್ ಹೇಳಿದರು.

ಅಡುಗೆ ಅನಿಲದ ಬೆಲೆ ಮೇ ತಿಂಗಳಿನಲ್ಲೂ ಏರಿಕೆ

ಅಡುಗೆ ಅನಿಲದ ಬೆಲೆ ಮೇ ತಿಂಗಳಿನಲ್ಲೂ ಏರಿಕೆ

ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ದರ ಮೇ ತಿಂಗಳಿನಲ್ಲಿ 50 ರೂ ಪ್ರತಿ ಸಿಲಿಂಡರ್ ಏರಿಕೆಯಾಗಿದೆ. ಅದಕ್ಕೂ ಕಳೆದ ತಿಂಗಳು ದೆಹಲಿಯಲ್ಲಿ ಬೆಲೆಯು ರೂಪಾಯಿ 1,003ಕ್ಕೆ ಏರಿಕೆಯಾಗಿತ್ತು. ಒಂದು ತಿಂಗಳಲ್ಲೇ ಎರಡು ಬಾರಿ ಗೃಹ ಬಳಕೆಯ ಎಲ್ಪಿಜಿ ದರ ಹೆಚ್ಚಳವಾಗಿದೆ. ಸಿಲಿಂಡರ್‌ಗೆ ಸುಮಾರು ರೂಪಾಯಿ 53.50ರಷ್ಟು ಆಗಿತ್ತು. ಈ ಬಳಿಕ ದೇಶದ ಹಲವಾರು ಪ್ರಮುಖ ನಗರಗಳಲ್ಲಿ ಎಲ್‌ಪಿಜಿ ದರವು ಒಂದು ಸಾವಿರದ ಗಡಿ ದಾಟಿತ್ತು.

English summary
Hyderabad: Protests erupted across State against the Centre's decision to hike domestic LPG cylinder cost by Rs 50.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X