ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಫ್ರಿಕಾದ ಅತಿ ಎತ್ತರದ ಶಿಖರ ಏರಿದ ಹೈದರಾಬಾದ್ ಬಾಲಕನ ಸಾಧನೆಗೆ ಸಚಿವರ ಶ್ಲಾಘನೆ

|
Google Oneindia Kannada News

ಹೈದರಾಬಾದ್, ಮಾರ್ಚ್ 19: ಆಫ್ರಿಕಾದ ಅತ್ಯಂತ ಎತ್ತರದ ಕಿಲಿಮಂಜಾರೊ ಶಿಖರ ಏರುವ ಮೂಲಕ ಹೈದರಾಬಾದ್‌ನ ಏಳು ವರ್ಷದ ಬಾಲಕ ವಿರಾಟ್ ಚಂದ್ರ, ಕಿಲಿಮಂಜಾರೊ ಶಿಖರ ಏರಿದ ಅತ್ಯಂತ ಕಿರಿಯರಲ್ಲಿ ಒಬ್ಬನಾಗಿದ್ದಾನೆ. ಈ ಸಾಧನೆ ಮೂಲಕ ಗಮನ ಸೆಳೆದು ದೇಶಕ್ಕೆ ಹೆಮ್ಮೆ ತಂದಿದ್ದಾನೆ.

ವಿರಾಟ್ ಚಂದ್ರ ಮಾರ್ಚ್ 6ರಂದು ಕಿಲಿಮಂಜಾರೊ ಶಿಖರವನ್ನು ತನ್ನ ಕೋಚ್ ಭರತ್ ತಮ್ಮಿನೇನಿ ಅವರೊಂದಿಗೆ ಏರಿದ್ದ. ಒಂದು ತಿಂಗಳ ಅಭ್ಯಾಸದ ಫಲವಾಗಿ 19,341 ಅಡಿ ಎತ್ತರದ ಈ ಶಿಖರ ಏರುವ ಸಾಧನೆ ಮಾಡಿದ್ದ.

ಮನೆಯ ಅಟ್ಟವಲ್ಲ, ಮೌಂಟ್ ಎವರೆಸ್ಟ್ 23 ಬಾರಿ ಏರಿ ದಾಖಲೆ ಬರೆದ ನೇಪಾಳದ ಪರ್ವತಾರೋಹಿಮನೆಯ ಅಟ್ಟವಲ್ಲ, ಮೌಂಟ್ ಎವರೆಸ್ಟ್ 23 ಬಾರಿ ಏರಿ ದಾಖಲೆ ಬರೆದ ನೇಪಾಳದ ಪರ್ವತಾರೋಹಿ

ಬಾಲಕನ ಈ ಸಾಧನೆಯನ್ನು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಕೊಂಡಾಡಿದ್ದಾರೆ. ವಿರಾಟ್ ಚಂದ್ರ ಕುರಿತು ಟ್ವೀಟ್ ಮಾಡಿರುವ ಅವರು, ಏಳು ವರ್ಷದ ಈ ಬಾಲಕ ಮೌಂಟ್ ಕಿಲಿಮಂಜಾರೋ ಏರುವ ಮೂಲಕ ಇಡೀ ದೇಶಕ್ಕೆ ಹೆಮ್ಮೆ ತಂದಿದ್ದಾನೆ. ಅಲ್ಲಿ ತ್ರಿರಂಗ ಧ್ವಜ ಹಾರಿಸಿ ನಮಗೆ ಕೀರ್ತಿ ತಂದಿದ್ದಾನೆ. ಈ ಪ್ರೋತ್ಸಾಹಕ್ಕೆ ವಿರಾಟ್ ಪೋಷಕರಿಗೂ ಧನ್ಯವಾದ ಎಂದು ಶ್ಲಾಘಿಸಿದ್ದಾರೆ.

Prakash Javadekar Congratulated Virat Chandra For Scaling Mt Kilimanjaro

ಶಿಖರ ಏರಿದ ತನ್ನ ಅನುಭವ ಬಿಚ್ಚಿಟ್ಟಿರುವ ವಿರಾಟ್, "ಮೊದಲು ನನಗೆ ಭಯ ಎನ್ನಿಸಿತು. ಆದರೆ ನನಗೆ ಗುರಿ ಮುಟ್ಟಬೇಕು ಎಂಬ ಬಯಕೆ ಜೊತೆಗಿತ್ತು. ನನ್ನ ಸೋದರ ಸಂಬಂಧಿಗಳಿಗೆ ಟ್ರೆಕಿಂಗ್ ಎಂದರೆ ಇಷ್ಟ. ಟ್ರೆಕಿಂಗ್ ಬಗ್ಗೆ ಅವರ ಅನುಭವವನ್ನು ಕೇಳುತ್ತಿದ್ದೆ. ಆಗ ನಾನು ಏಕೆ ಶಿಖರ ಏರಬಾರದು ಎನಿಸಿತು. ಈ ಬಗ್ಗೆ ಅಪ್ಪ ಅಮ್ಮನ ಜೊತೆ ಮಾತನಾಡಿದೆ. ಅವರು ಭರತ್ ಎಂಬುವರ ಬಳಿ ಅಭ್ಯಾಸಕ್ಕೆ ಸೇರಿಸಿದರು. ಒಂದು ತಿಂಗಳ ತರಬೇತಿ ನಂತರ ಶಿಖರ ಏರಲು ಸಿದ್ಧವಾದೆ. ಈಗ ತುಂಬಾ ಸಂತೋಷವೆನಿಸುತ್ತಿದೆ" ಎಂದಿದ್ದಾನೆ.

ಫೆಬ್ರವರಿಯಲ್ಲಿ ಆಂಧ್ರಪ್ರದೇಶದ 9 ವರ್ಷದ ಬಾಲಕಿ ಕಡಪಲ ರಿತ್ವಿಕಾ ಶ್ರೀ ಕಿಲಿಮಂಜಾರೊ ಏರಿದ್ದಳು. 2018ರ ಅಕ್ಟೋಬರ್‌ನಲ್ಲಿ ನ್ಯೂ ಮೆಕ್ಸಿಕೋದ ಆರು ವರ್ಷದ ಬಾಲಕ ಕೋಲ್ಟನ್ ಟ್ಯಾನರ್ ಕಿಲಿಮಂಜಾರೊ ಏರಿದ ಅತ್ಯಂತ ಕಿರಿಯ ಎನಿಸಿಕೊಂಡಿದ್ದ.

English summary
Union minister Prakash Javadekar congratulated Virat Chandra, a 7 year old boy from Hyderabad, for scaling Mt Kilimanjaro, the highest mountain in Africa
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X