ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಳಿ ಅಂಕದಲ್ಲಿ ಆಕಸ್ಮಿಕವಾಗಿ ವ್ಯಕ್ತಿ ಸಾವು; ಪೊಲೀಸ್ ಕಸ್ಟಡಿಯಲ್ಲಿ ಹುಂಜ

|
Google Oneindia Kannada News

ತೆಲಂಗಾಣ, ಫೆಬ್ರವರಿ 27: ಕೋಳಿ ಅಂಕ ನಡೆಯುತ್ತಿದ್ದ ಸಂದರ್ಭ ಆಕಸ್ಮಿಕವಾಗಿ 45 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಸಂಗತಿ ತೆಲಂಗಾಣದ ಜಗತಿಯಾಲ್ ಜಿಲ್ಲೆಯಲ್ಲಿನ ಯಲ್ಲಮ್ಮ ದೇವಸ್ಥಾನದಲ್ಲಿ ನಡೆದಿದೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿಂತೆ ಪೊಲೀಸರು ಹುಂಜವನ್ನು ಕಸ್ಟಡಿಗೆ ತೆಗೆದುಕೊಂಡಿರುವುದು ಸುದ್ದಿಯಾಗಿದೆ.

ಫೆಬ್ರವರಿ 22ರಂದು ಈ ಸಂಗತಿ ನಡೆದಿದೆ. ಹಳ್ಳಿಯಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದು, ಹುಂಜದ ಕಾಲಿಗೆ ಚಾಕು ಕಟ್ಟಲಾಗಿತ್ತು. ಆದರೆ ಹುಂಜವನ್ನು ಜಗಳಕ್ಕೆ ಬಿಡುವ ಸಂದರ್ಭ ಅದು ತಪ್ಪಿಸಿಕೊಳ್ಳಲು ಒದ್ದಾಡುವಾಗ, ಹಿಡಿದುಕೊಂಡಿದ್ದ ವ್ಯಕ್ತಿಯ ಕಿಬ್ಬೊಟ್ಟೆಗೆ ಚಾಕು ತಾಗಿದೆ. ಆತನಿಗೆ ತೀವ್ರ ರಕ್ತಸ್ರಾವವಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.

ಕೋಳಿ ಜೂಜು; ಹುಂಜಗಳನ್ನು ಜೈಲಿಗೆ ಹಾಕಿದ ಪೊಲೀಸರು!ಕೋಳಿ ಜೂಜು; ಹುಂಜಗಳನ್ನು ಜೈಲಿಗೆ ಹಾಕಿದ ಪೊಲೀಸರು!

ತೆಲಂಗಾಣದಲ್ಲಿ ಕೋಳಿ ಅಂಕ ನಡೆಸಲು ನಿಷೇಧವಿದೆ. ಆದರೂ ಕೆಲವರು ರಹಸ್ಯವಾಗಿ ನಡೆಸುತ್ತಾರೆ. ಈ ಘಟನೆ ನಂತರ ಗೊಲ್ಲಪಲ್ಲಿ ಪೊಲೀಸರು ಆ ವ್ಯಕ್ತಿಯ ಸಾವಿಗೆ ಕಾರಣವಾದ ಹುಂಜವನ್ನು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಹಾಗೆಯೇ ಕೋಳಿ ಅಂಕ ಆಯೋಜಿಸಿದವನನ್ನು ಬಂಧಿಸಿದ್ದಾರೆ. ಹುಂಜವನ್ನು ಪೊಲೀಸ್ ಠಾಣೆ ಮುಂದೆ ಕಟ್ಟಿದ್ದು, ತಾವೇ ಮೇವು ಹಾಕುತ್ತಿದ್ದಾರೆ. ಈ ಫೋಟೊ ಎಲ್ಲೆಲ್ಲೂ ಹರಿದಾಡುತ್ತಿದೆ.

Police Took Rooster For Custody After Man Dies Accidentaly At Cockfight

ಆದರೆ ಹುಂಜವನ್ನು ಜೂಜಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯವಾಗಿ ಇರಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
A rooster has been kept under police custody after a knife tied to its leg cut into a man's groins in Telangana,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X