ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುನೆಸ್ಕೋ ಪಟ್ಟಿ ಸೇರಿದ ಕಾಕತೀಯ ರಾಮಪ್ಪ ದೇಗುಲ ನೋಡಿ

|
Google Oneindia Kannada News

ಹೈದರಾಬಾದ್, ಜುಲೈ 26: ಕಾಕತೀಯ ರಾಮಪ್ಪ ದೇವಸ್ಥಾನವನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.

ಜನತೆ ಈ ಭವ್ಯ ದೇವಸ್ಥಾನ ಸಂಕಿರ್ಣಕ್ಕೆ ಭೇಟಿ ನೀಡಬೇಕು ಮತ್ತು ಅಲ್ಲಿನ ವೈಭವದ ಬಗ್ಗೆ ಮೊದಲ ಅನುಭವ ಪಡೆಯಬೇಕು ಎಂದು ಹೇಳಿದ್ದಾರೆ.

ಯುನೆಸ್ಕೋಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿ ಅವರು,''ಇದು ಅತ್ಯುತ್ತಮ, ಎಲ್ಲರಿಗೂ, ವಿಶೇಷವಾಗಿ ತೆಲಂಗಾಣದ ಜನರಿಗೆ ಅಭಿನಂದನೆಗಳು'' ಎಂದು ಹೇಳಿದ್ದಾರೆ.

PM urged people to visit World Heritage site Kakatiya Ramappa Temple

ಅಪ್ರತಿಮ ರಾಮಪ್ಪ ದೇವಾಲಯ ಕಾಕತೀಯ ರಾಜವಂಶದ ಅತ್ಯುತ್ತಮ ಕರಕುಶಲತೆಯ ಪ್ರತೀಕವಾಗಿದೆ. ಇಂತಹ ಭವ್ಯ ದೇವಸ್ಥಾನದ ಸಂಕಿರ್ಣಕ್ಕೆ ಜನತೆ ಭೇಟಿ ನೀಡಬೇಕು ಮತ್ತು ಅಲ್ಲಿನ ವೈಭವದ ಬಗ್ಗೆ ಮೊದಲ ಅನುಭವ ಪಡೆಯಬೇಕು ಎಂದು ಸಲಹೆ ಮಾಡಿದ್ದಾರೆ.

ರಾಮೇಶ್ವರ ದೇಗುಲದ ವಿಶೇಷತೆ?: 12ನೇ ಶತಮಾನದ ಕಾಕತೀಯ ವಾಸ್ತುಶಿಲ್ಪ ಹೊಂದಿರುವ ದೇವಸ್ಥಾನವನ್ನು ಯುನೆಸ್ಕೋ ಗುರುತಿಸಿ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರಿಸಿ ಮಾನ್ಯತೆ ನೀಡಿದೆ.

ತೆಲಂಗಾಣ ರಾಜ್ಯದ ಮುಲುಗು ಜಿಲ್ಲೆಯ ವೆಂಕಟಪುರ ಮಂಡಲದ ಪಾಲೆಂಪೆಟ್ ಗ್ರಾಮದಲ್ಲಿದೆ. 1213ರಲ್ಲಿ ರಾಮಪ್ಪ ಅವರ ಕಲಾ ಕೌಶಲ್ಯದಡಿ ಇದನ್ನು ನಿರ್ಮಿಸಲಾಯಿತು ಎಂದು ಇತಿಹಾಸದಿಂದ ತಿಳಿದು ಬಂದಿದೆ.

ಭಾರತೀಯ ಸರ್ವೇಕ್ಷಣ ವಿಭಾಗದ ಉತ್ಖನನ ಹಾಗೂ ದೇಗುಲ ಸಂರಕ್ಷಣೆ ಹೊತ್ತುಕೊಂಡ ತಂಡದಲ್ಲಿದ್ದ ಕನ್ನಡತಿ ಡಾ. ಚೂಡಮಣಿ ನಂದ ಗೋಪಾಲ್ ಅವರು ಈ ಭವ್ಯ ದೇಗುಲಕ್ಕೆ ಮಾನ್ಯತೆ ಸಿಗಲು ಕಾರಣರಾದ ಪ್ರಮುಖರು ಎಂಬುದು ವಿಶೇಷ.

English summary
PM Narendra Modi has expressed happiness on UNESCO declaring Kakatiya Ramappa Temple a World Heritage site. He also urged people to visit this majestic Temple complex.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X