ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಾನುಜಾಚಾರ್ಯಯ ಸಮಾನತೆಯ ಪ್ರತಿಮೆ ಕುರಿತು ತಿಳಿಯಬೇಕಾದ ಸಂಗತಿ

|
Google Oneindia Kannada News

ಹೈದರಾಬಾದ್, ಫೆಬ್ರವರಿ 3: ಹೈದರಾಬಾದ್‌ನಲ್ಲಿ ನಿರ್ಮಿಸಲಾಗಿರುವ ರಾಮಾನುಜಾಚಾರ್ಯರ ಸಮಾನತೆಯ ಪ್ರತಿಮೆಯನ್ನು ಫೆಬ್ರವರಿ 5ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

ರಾಮಾನಜುಚಾಯಾರ್ಯರ ಪ್ರತಿಮೆ ಕುರಿತು ಮಾಹಿತಿ
* ರಾಮಾನುಜಾಚಾರ್ಯಯ 216 ಅಡಿಯ ಪ್ರತಿಮೆಯು ಹೈದರಾಬಾದಿನ ಹೊರವಲಯದಲ್ಲಿ ನಿರ್ಮಿಸಲಾಗಿದ್ದು, ಕುಳಿತ ಭಂಗಿಯಲ್ಲಿ ಇರುವ ವಿಶ್ವದ ಎರಡನೇ ಅತಿ ಎತ್ತರದ ಪ್ರತಿಮೆ ಆಗಿರಲಿದೆ.

ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಲಿರುವ ಸಮಾನತೆಯ ಪ್ರತಿಮೆ ಬಗ್ಗೆ ಮಾಹಿತಿಪ್ರಧಾನಿ ಮೋದಿ ಲೋಕಾರ್ಪಣೆ ಮಾಡಲಿರುವ ಸಮಾನತೆಯ ಪ್ರತಿಮೆ ಬಗ್ಗೆ ಮಾಹಿತಿ

*ಥಾಯ್ಲೆಂಡ್​ನ ಕುಳಿತ ಭಂಗಿಯ ಬುದ್ಧನ ಪ್ರತಿಮೆ ಮೊದಲನೇ ಎತ್ತರದ ಪ್ರತಿಮೆ ಆಗಿದೆ. *ಈ ವಿಪ್ರತಿಮೆಯನ್ನು ಪಂಚಲೋಹ ಬಳಸಿ ನಿರ್ಮಾಣ ಮಾಡಲಾಗಿದೆ. ಚಿನ್ನ, ಬೆಳ್ಳಿ, ಕಂಚು, ತಾಮ್ರ ಹಾಗೂ ಜಿಂಕ್ ಸೇರಿ ಐದು ಲೋಹಗಳಿಂದ ಈ ಪ್ರತಿಮೆ ತಯಾರಾಗಿದೆ.

PM Modi To Inaugurate Statue Of Equality On February 5 In Hyderabad. Details Here

*ಇಲ್ಲಿರುವ ರಾಮಾನುಜಾಚಾರ್ಯರ ಗರ್ಭಗುಡಿಯನ್ನು 120 ಕಿಲೋ ಗ್ರಾಂ ಬಂಗಾರದಿಂದ ನಿರ್ಮಿಸಲಾಗಿದೆ.
*ಶ್ರೀ ರಾಮಾನುಜಾಚಾರ್ಯರು 11ನೇ ಶತಮಾನದ ಹಿಂದು ಧರ್ಮಶಾಸ್ತ್ರಜ್ಞ ತತ್ವಜ್ಞಾನಿ ಹಾಗೂ ಭಕ್ತಿ ಚಳುವಳಿಯನ್ನು ನಡೆಸಿದ ಸಮಾಜ ಸುಧಾರಕರೂ ಆಗಿದ್ದಾರೆ. ರಾಮಾನುಜಾಚಾರ್ಯರ 1000ನೇ ಜನ್ಮೋತ್ಸವವನ್ನು ಹೈದರಾಬಾದ್​ನ ಶಮ್ಸಾಬಾದ್​ನ ಆಶ್ರಮದಲ್ಲಿ ರಾಮಾನುಜರ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಗುತ್ತದೆ.

*ಒಂದು ಸಾವಿರ ಕೋಟಿ ಮೊತ್ತದ ಈ ಯೋಜನೆಯನ್ನು ಜಾಗತಿಕವಾಗಿ ಇರುವ ಭಕ್ತಜನರ, ದಾನಿಗಳ ನಿಧಿ ಸಂಗ್ರಹಣೆಯ ಮೊತ್ತದಿಂದ ನಿರ್ಮಿಸಲಾಗಿದೆ. *ಇಲ್ಲಿ 108 ದಿವ್ಯ ದೇಶ, 108 ಸುಂದರ ವಿಷ್ಣು ದೇಗುಲಗಳು ಇರಲಿದೆ. ತಮಿಳು ಸಂತರಾದ ಆಳ್ವರ್ಸರ ಕೆಲಸಗಳಲ್ಲಿ ಉಲ್ಲೇಖಿಸಿರುವ ರೂಪದಲ್ಲಿ ಇದು ಇರಲಿದೆ. 403 ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮೋದಿ ಭಾಷಣ403 ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮೋದಿ ಭಾಷಣ

*ಈ ಪ್ರತಿಮೆಯು 216 ಅಡಿ ಎತ್ತರವಿದ್ದು, ಸಮಾನತೆಯ ಪ್ರತಿಮೆ ಎಂದು ಹೆಸರಿಸಲಾಗಿದೆ. ಜಾತಿಬೇಧ ಇಲ್ಲದೆ, ಮಾನವಸಂಕುಲದ ಉನ್ನತಿಗೆ ಕೆಲಸ ಮಾಡಿದ ರಾಮಾನುಜರ ನೆನಪಿಗೆ ಈ ಪ್ರತಿಮೆ ನಿರ್ಮಿಸಲಾಗಿದೆ.

*ಫೆಬ್ರವರಿ 2 ರಿಂದ ಫೆಬ್ರವರಿ 14 ರವರೆಗೆ ಈ ಕಾರ್ಯಕ್ರಮಗಳು ನಡೆಯಲಿದೆ. ಸಮಾನತೆಯ ಪ್ರತಿಮೆಯನ್ನು 200 ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿದೆ. ಹೈದರಾಬಾದ್​ನ ಹೊರವಲಯದಲ್ಲಿ ಇರುವ ಶಮ್ಸಾಬಾದ್​ನ ಮುಚಿಂತಾಲ್ ಎಂಬಲ್ಲಿ ಇದೆ.

ರಾಮಾನುಜಾಚಾರ್ಯರು ಯಾರು?
ರಾಮಾನುಜಾಚಾರ್ಯರು 1017 ರಲ್ಲಿ ಶ್ರೀಪೆರಂಬದೂರಿನಲ್ಲಿ ಜನಿಸಿದರು, ಎಲ್ಲಾ ವರ್ಗಗಳ ಜೀವನ ವಿಧಾನವನ್ನು ಅರ್ಥ ಮಾಡಿಕೊಂಡಿದ್ದರು. ಅದೇ ಸಮಯದಲ್ಲಿ, ವೈಯಕ್ತಿಕ ಅಗತ್ಯಗಳನ್ನು ಕೇಂದ್ರೀಕರಿಸಿದರು.

ಸಾವಿರಾರು ವರ್ಷಗಳ ಹಿಂದೆಯೇ ಅಸ್ಪೃಶ್ಯತೆಯ ವಿರುದ್ಧದ ಆಧ್ಯಾತ್ಮಿಕ ಆಂದೋಲನಕ್ಕೆ ಭಗವಂತ ಮಾನವರೂಪದಲ್ಲಿ ಇದ್ದಾನೆ ಎಂದು ಪ್ರೇರೇಪಿಸಿದ ಕ್ರಾಂತಿಕಾರಿ ವ್ಯಕ್ತಿ.

ಎಲ್ಲರ ಶ್ರೇಯೋಭಿವೃದ್ಧಿಗಾಗಿ ರಾಮಾನುಜಾಚಾರ್ಯರು ವೇದಗಳ ಸಾರವನ್ನು 9 ಗ್ರಂಥಗಳ ರೂಪದಲ್ಲಿ ಪ್ರಸ್ತುತಪಡಿಸಿದರು. ಅವರ ಸ್ವಂತ ಹೃದಯದ ಪರಿಶುದ್ಧತೆಯು, ಅವರ ಮಾರ್ಗದರ್ಶಕರು, ಆಡಳಿತಗಾರರು, ಅಧಿಕಾರಿಗಳು, ಗಣ್ಯರು ಮತ್ತು ಸಾಮಾನ್ಯ ವ್ಯಕ್ತಿಗಳು ಭಕ್ತಿ, ದೈವಿಕ ಪ್ರೀತಿಯ ಹಾದಿಯನ್ನು ತುಳಿಯಲು ಮನವೊಲಿಸಲು ಅನುವು ಮಾಡಿಕೊಟ್ಟಿತು.

ವೈಷ್ಣವ ಧರ್ಮದ ಜ್ಯೋತಿ ಹೊತ್ತ ಶ್ರೀ ರಾಮಾನುಜಾಚಾರ್ಯರು ಭಕ್ತಿ ಚಳವಳಿಯ ಬೋಧಕರಾಗಿದ್ದರು. ಜಗತ್ತು ಭ್ರಮೆ ಎಂಬ ಮಾಯಾವಾದದ ಪರಿಕಲ್ಪನೆಯನ್ನು ದೂರಮಾಡಿ ಅನೇಕ ತಪ್ಪು ಕಲ್ಪನೆಗಳನ್ನೂ ನಿವಾರಿಸಿದರು.

ಸ್ವಾಮಿ ರಾಮಾನುಜಾಚಾರ್ಯರು ಭಾರತದಲ್ಲಿ ಭಕ್ತಿ ಚಳವಳಿಗೆ ಸುವರ್ಣ ಶಿಖರವನ್ನು ನಿರ್ಮಿಸಿದರು. ಅವರ ಕೃಪೆಯಿಂದ ಸಮಾಜದ ಪ್ರತಿಯೊಬ್ಬರೂ ನಾರಾಯಣ ಮಂತ್ರವನ್ನು ಜಪಿಸುವಂತಾಗಿದೆ. ಈ ಗುರುವಿನಿಂದಾಗಿ ಎಲ್ಲರಿಗೂ ಮುಕ್ತಿ ಅಷ್ಟಾಕ್ಷರಿ ಮಂತ್ರ 'ಓಂ ನಮೋ ನಾರಾಯಣಾಯ' ಲಭಿಸಿತು.

ಸಮಾನತೆಯ ಪ್ರತಿಮೆ ನಿರ್ಮಿಸಿದ್ದು ಏಕೆ?
ರಾಮಾನುಜಾಚಾರ್ಯರು ಜಾತಿಗೆ ಪ್ರಾಮುಖ್ಯತೆ ಕೊಡದೇ, ಮಂತ್ರವನ್ನು ಎಲ್ಲರೊಂದಿಗೆ ಹಂಚಿಕೊಂಡರು. ಅವರು ಬಯಸಿದ ಏಕೈಕ ಅರ್ಹತೆ ಅವರಲ್ಲಿ ಶ್ರದ್ಧೆ ಮತ್ತು ಕಲಿಯಲು ಉತ್ಸುಕರಾಗಿರುವುದು ಮಾತ್ರ.

ರಾಮಾನುಜಾಚಾರ್ಯರ ಕಾಲದಲ್ಲಿ ದೇವಸ್ಥಾನಗಳು ಸಮಾಜದ ಒಂದು ವರ್ಗದ, ಒಂದು ನಿರ್ದಿಷ್ಟ ಜಾತಿಯ ನಿಯಂತ್ರಣದಲ್ಲಿ ಆಡಳಿತದ ಕೇಂದ್ರಗಳಾಗಿದ್ದವು. ರಾಮಾನುಜಾಚಾರ್ಯರು, ಉಳಿದ ಜಾತಿಗಳಿಗೆ ಸೇರಿದ ವ್ಯಕ್ತಿಗಳಿಗೆ 50% ಕಾರ್ಯಗಳನ್ನು ಹಂಚುವ ಮೂಲಕ ಒಳಗೊಳ್ಳುವಿಕೆಯನ್ನು ಪ್ರೋತ್ಸಾಹಿಸಿದರು.

ಆದುದರಿಂದಲೇ, ಅಂದಿನಿಂದ ದೇವಾಲಯಗಳಿಗೆ ಪ್ರವೇಶಿಸಲು ಜಾತಿಯ ಆಧಾರದ ಮೇಲೆ ಯಾವುದೇ ನಿರ್ಬಂಧಗಳಿಲ್ಲ. ಅವರು ಎಲ್ಲಾ ಜಾತಿಗಳ ನಡುವೆ ಸಮಾನತೆ ಇರುವಂತೆ ನೋಡಿಕೊಂಡರು.

216 ಅಡಿ ಎತ್ತರದ "ಶ್ರೀ ರಾಮಾನುಜಾಚಾರ್ಯ ಸ್ವಾಮಿ"ಯ ಪ್ರತಿಮೆ ಯೋಜನೆಯ ಪ್ರಮುಖ ಅಂಶಗಳೆಂದರೇ, 216 ಅಡಿ ಎತ್ತರದ ಶ್ರೀ ರಾಮಾನುಜಾಚಾರ್ಯರ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ತಾಮ್ರದಿಂದ ಮಾಡಿದ 42 ಅಡಿ ಎತ್ತರದ ಸಂಗೀತ ಕಾರಂಜಿಯನ್ನು ನಿರ್ಮಿಸಲಾಗಿದೆ.

ಬಲಿಪೀಠದಲ್ಲಿ ಶ್ರೀ ರಾಮಾನುಜಾಚಾರ್ಯರ 54 ಇಂಚು ಎತ್ತರದ ಚಿನ್ನದ ದೇವರ ಪ್ರತಿಮೆ ಇದೆ. 24 ಕ್ಯಾರೆಟ್ ನ 120 ಕೆ.ಜಿ. ಚಿನ್ನ ಬಳಸಿ ದೇವರ ಪ್ರತಿಮೆ ನಿರ್ಮಾಣ ಮಾಡಲಾಗಿದೆ. 108 ದಿವ್ಯ ದೇಶಂ ಹಾಗೂ ಸ್ಪೂರ್ತಿ ಕೇಂದ್ರ ನಿರ್ಮಾಣ ಮಾಡಲಾಗಿದೆ. ಸಂಕೀರ್ಣದಲ್ಲಿ ಆನ್ ಲೈನ್ ಡಿಜಿಟಲ್ ಲೈಬ್ರರಿ ನಿರ್ಮಿಸಲಾಗಿದೆ. ಓಮ್ನಿಮ್ಯಾಕ್ಸ್ ಥಿಯೇಟರ್ ನಿರ್ಮಿಸಲಾಗಿದೆ.

ಪ್ರತಿಮೆಯು 108 'ದಿವ್ಯ ದೇಶಂ' ಮಾದರಿ ದೇವಾಲಯಗಳಿಂದ ಸುತ್ತುವರೆದಿರುತ್ತದೆ. ಭದ್ರಿನಾಥ, ಮುಕ್ತಿನಾಥ, ಅಯೋಧ್ಯೆ, ಬೃಂದಾವನ, ಕುಂಭಕೋಣಂ, ತಿರುಮಲ, ಶ್ರೀರಂಗಂ, ಕಂಚಿ ಮತ್ತು ಇತರ ದೇವಾಲಯ ಮಾದರಿಗಳಿಂದ ಸುತ್ತುವರಿದಿದೆ. ಅಸ್ತಿತ್ವದಲ್ಲಿರುವ ದೇವಾಲಯಗಳಲ್ಲಿ ದೇವತೆಗಳ ಮತ್ತು ರಚನೆಗಳ ವಿಗ್ರಹಗಳನ್ನು ಆಕಾರದಲ್ಲಿ ನಿರ್ಮಿಸಲಾಗಿದೆ. ಫೆಬ್ರವರಿ 2 ರಂದು 5 ಸಾವಿರ ಪಂಡಿತರು ಯಜ್ಞ ನಡೆಸಿದರು.

English summary
Prime Minister Narendra Modi is set to visit Hyderabad, on Saturday 5 February, 2022 to kickstart the 50th Anniversary Celebrations of ICRISAT and inaugurate the 216-feet tall ‘Statue of Equality’ commemorating the 11th century Bhakti Saint Sri Ramanujacharya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X