ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಪಿಎಫ್ಐ ಕಾರ್ಯಕರ್ತನ ಕರಾಟೆ ಕ್ಲಾಸ್‌ ರಹಸ್ಯ ಬಯಲು ಮಾಡಿದ ಎನ್‌ಐಎ

|
Google Oneindia Kannada News

ಹೈದರಾಬಾದ್, ಸೆಪ್ಟೆಂಬರ್ 24: ದೇಶ ವಿರೋಧಿ ಚಟುವಟಿಗೆಗಳಿಗೆ ಕುಮ್ಮಕ್ಕು ನೀಡುತ್ತಿದ್ದ ಆರೋಪದ ಮೇಲೆ ಪಿಎಫ್‌ಐ ಕಚೇರಿ ಮತ್ತು ನಾಯಕರ ಮನೆ ಮೇಲೆ ಏಕಕಾಲದಲ್ಲಿ ಎನ್‌ಐಎ ದಾಳೆಯನ್ನು ನಡೆಸಿತ್ತು. ಹೈದರಾಬಾದ್‌ನಲ್ಲಿ ಸಿಕ್ಕಿಬಿದ್ದಿರುವ ಆರೋಪಿಯೊಬ್ಬ ಕರಾಟೆ ಕ್ಲಾಸ್‌ ನಡೆಸುತ್ತ ಉಗ್ರರಿಗೆ ತರಬೇತಿ ನೀಡುತ್ತಿದ್ದ ಎಂಬುದು ರಿವೀಲ್ ಆಗಿದೆ.

ದೇಶಾದ್ಯಂತ ಎನ್‌ಐಎ ರೇಡ್ ಮಾಡಲು ಕಾರಣಾಗಿದ್ದು ಕರಾಟೆ ಕ್ಲಾಸ್‌. ಕರಾಟೆ ಕ್ಲಾಸ್ ನಲ್ಲಿ ನಡಿತಿತ್ತು ಪಿಎಫ್‌ಐ ರಣತಂತ್ರ ಎಂಬುದು ತಿಳಿದು ಬಂದಿದೆ. ಕರಾಟೆ ಕ್ಲಾಸ್ ನೆಪದಲ್ಲಿ ಪಿಎಫ್‌ಐ ಸದಸ್ಯರಿಗೆ ಉಗ್ರ ಚಟುವಟಿಕೆಯ ತಯಾರಿ ನೀಡಲಾಗುತ್ತಿತತ್ತು ಎನ್ನಲಾಗಿದೆ. ತೆಲಂಗಾಣದ ಆಟೋನಗರ್ ನಲ್ಲಿ ಅಬ್ದುಲ್ ಖಾದರ್ ಎಂಬಾತ ಕರಾಟೆ ಕ್ಲಾಸ್ ನಡೆಸುತ್ತಿದ್ದ. ಈತ ಇದೀಗ ಎನ್‌ಐಎ ಬಲೆಗೆ ಬಿದ್ದಿದ್ದಾನೆ.

PFI operatives karate class secrets revealed by NIA in Hyderabad

ಪಿಎಫ್‌ಐ ತನ್ನ ಸದಸ್ಯರಿಗೆ ಉಗ್ರಚಟುವಟಿಕೆ ಮಾಡುವುದರ ಬಗ್ಗೆ ತರಬೇತಿ ನೀಡುತ್ತಿತ್ತು. ಈ ಬಗ್ಗೆ ಹೈದರಾಬಾದ್ ಎನ್ಐಎನಲ್ಲಿ ಪ್ರಕರಣ ದಾಖಲಾಗಿತ್ತು. ಅಬ್ದುಲ್ ಖಾದರ್ ಎಂಬಾತ ಸೇರಿ 27 ಜನರ ಮೇಲೆ ಎಫ್ ಐ ಆರ್ ದಾಖಲಾಗಿತ್ತು. ಇದರಲ್ಲಿ ಹಲವರನ್ನು ಮಾಡಿದ್ದ ಎನ್ ಐ ಎ ಅಧಿಕಾರಿಗಳು ಬಂಧಿಸಿದ್ದರು.

PFI operatives karate class secrets revealed by NIA in Hyderabad

ಕರಾಟೆ ಕ್ಲಾಸ್ ರಹಸ್ಯ ಬಯಲು
ಕರಾಟೆ ಕ್ಲಾಸ್‌ನಲ್ಲಿದ್ದವರ ವಿಚಾರಣೆ ವೇಳೆ ಸ್ಪೋಟಕ ರಹಸ್ಯ ಬಯಲಾಗಿತ್ತು. ದೇಶಾದ್ಯಂತ ಇದೇ ರೀತಿಯ ಸಂಚನ್ನು ಮಾಡುತ್ತಿರುವ ಬಗ್ಗೆ ಆರೋಪಿಗಳು ಮಾಹಿತಿಯನ್ನು ಹೊರಹಾಕಿದ್ದರು. ಹೀಗಾಗಿಯೇ ಒಂದು ತಿಂಗಳಿನಿಂದ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದ ಎನ್ಐಎ ಎರಡು ದಿನದ ಹಿಂದೆ ಏಕಕಾಲಕ್ಕೆ ದೇಶದ 93 ಕಡೆ 15 ರಾಜ್ಯಗಳಲ್ಲಿ ದಾಳಿ ಮಾಡಿದ್ದರು. ಕರಾಟೆ ಕ್ಲಾಸ್ ರಹಸ್ಯ ಹೈದರಾಬಾದ್ ಎನ್ಐಎನಲ್ಲಿ ದಾಖಲು ಮಾಡಿದ್ದ ಎಫ್ಐಆರ್‌ನಲ್ಲಿ ಬಹಿರಂಗವಾಗಿದೆ.

English summary
NIA raided the PFI office and the leader's house simultaneously on charges of abetting anti-national activities. It has been revealed that an accused caught in Hyderabad was conducting karate classes and training terrorists. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X