ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್ ಕೊರೊನಾ ಲಸಿಕೆ ಪ್ರಯೋಗಾಲಯಗಳಿಗೆ ವಿದೇಶಿ ನಿಯೋಗ ಭೇಟಿ

|
Google Oneindia Kannada News

ಹೈದರಾಬಾದ್, ಡಿಸೆಂಬರ್ 10: ಹೈದರಾಬಾದ್‌ನ ಕೊರೊನಾ ಲಸಿಕೆ ಪ್ರಯೋಗಾಲಯಗಳಿಗೆ ವಿದೇಶಿ ನಿಯೋಗ ಭೇಟಿ ನೀಡಿದೆ.

ಹೈದರಾಬಾದ್‌ನಲ್ಲಿರುವ ಭಾರತ್ ಬಯೋಟೆಕ್ ಹಾಗೂ ಬಯೋಲಾಜಿಕಲ್ ಇ ಲಿಮಿಟೆಡ್ ನ ಲಸಿಕೆ ಪ್ರಯೋಗಾಲಯಕ್ಕೆ 64 ದೇಶಗಳ 70ಕ್ಕೂ ಹೆಚ್ಚು ಪ್ರತಿನಿಧಿಗಳ ನಿಯೋಗವು ಭೇಟಿ ನೀಡಿದೆ. ಲಸಿಕೆ ಅಭಿವೃದ್ಧಿ ಮತ್ತು ಲಸಿಕೆ ತಯಾರಿಕೆ ಮತ್ತು ಸಾಮರ್ಥ್ಯವನ್ನು ನಿಯೋಗದ ಸದಸ್ಯರು ಪರಿಶೀಲಿಸಲಿದ್ದಾರೆ.

ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್

ವಿಶ್ವದಲ್ಲಿ ತಯಾರಾಗುವ ಒಟ್ಟು ಲಸಿಕೆಗಳಲ್ಲಿ ಶೇ.30ರಷ್ಟು ಹೈದರಾಬಾದಿನಲ್ಲಿ ತಯಾರಾಗುತ್ತಿವೆ ಎಂದು ತೆಲಂಗಾಣ ಆರೋಗ್ಯ ಇಲಾಖೆಯು ಇಯೋಗಕ್ಕೆ ಮನವರಿಕೆ ಮಾಡಿಕೊಟ್ಟಿದೆ.

Over 60 Foreign Envoys Visit Leading Pharma Companies In Hyderabad

64 ದೇಶಗಳ ರಾಜತಾಂತ್ರಿಕ ಅಧಿಕಾರಿಗಳು ಮತ್ತು ತಜ್ಞರು ಈ ನಿಯೋಗದಲ್ಲಿ ಇದ್ದರು. ಭಾರತದ ವಿದೇಶಾಂಗ ಸಚಿವಾಲಯವು ಈ ಭೇಟಿಯನ್ನು ಆಯೋಜಿಸಿತ್ತು. ಭಾರತ್ ಬಯೋಟೆಕ್ ತನ್ನ ಲಸಿಕೆ ತಯಾರಕಾ ಘಟಕಗಳ ಸಾಮರ್ಥ್ಯದ ಬಗ್ಗೆ ನಿಯೋಗದ ಸದಸ್ಯರಿಗೆ ಪ್ರಾತ್ಯಕ್ಷಿಕೆ ನೀಡಿದೆ.

ಔಷಧಿ, ಆಹಾರ ಅಥವಾ ಲಸಿಕೆ ತೆಗೆದುಕೊಂಡರೆ ಅಲರ್ಜಿಗೆ ಒಳಗಾಗುವ ಜನರಿಗೆ, ಕೊರೊನಾ ವೈರಸ್ ಗೆ ನೀಡಲಾಗುತ್ತಿರುವ ಫೈಜರ್ ಲಸಿಕೆ ತೆಗೆದುಕೊಳ್ಳದಂತೆ ಬ್ರಿಟನ್ ಔಷಧ ನಿಯಂತ್ರಕ ಬುಧವಾರ ಎಚ್ಚರಿಕೆಯನ್ನು ನೀಡಿದೆ.

ಫೈಜರ್ ಲಸಿಕೆ; ಫೈಜರ್ ಲಸಿಕೆ; "ಅಲರ್ಜಿ" ಹಿನ್ನೆಲೆಯವರಿಗೆ ಎಚ್ಚರಿಕೆ ಕೊಟ್ಟ ಲಂಡನ್

ಬ್ರಿಟನ್ ನಲ್ಲಿ ಮೊದಲ ಹಂತದಲ್ಲಿ ರೋಗಿಗಳಿಗೆ ಎರಡು ಡೋಸ್ ಗಳ ಲಸಿಕೆ ನೀಡಿದ ನಂತರ ಈ ಎಚ್ಚರಿಕೆಯನ್ನು ರವಾನಿಸಲಾಗಿದೆ. ಇಬ್ಬರು ರಾಷ್ಟ್ರೀಯ ಆರೋಗ್ಯ ಸೇವಾ ಸಿಬ್ಬಂದಿಗೆ ಲಸಿಕೆ ತೆಗೆದುಕೊಂಡ ನಂತರ ಅನಾಫಿಲ್ಯಾಕ್ಟಾಯ್ಡ್ ಅಲರ್ಜಿ (ಉಸಿರಾಟದಲ್ಲಿ ತೊಂದರೆ, ಚರ್ಮದ ಸಮಸ್ಯೆ, ರಕ್ತದೊತ್ತಡ) ಕಾಣಿಸಿಕೊಂಡಿದೆ. ಅವರಿಗೆ ತಕ್ಷಣವೇ ಚಿಕಿತ್ಸೆ ನೀಡಿದ್ದು, ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿದುಬಂದಿದೆ.

ಹೊಸ ಲಸಿಕೆ ನೀಡಿದಾಗ ಈ ರೀತಿ ಆಗುವುದು ಸಹಜವೇ ಆಗಿದ್ದರೂ, ಮುನ್ನೆಚ್ಚರಿಕಾ ಕ್ರಮವಾಗಿ ಅಲರ್ಜಿಯ ಹಿನ್ನೆಲೆಯಿರುವ ಜನರಿಗೆ ಲಸಿಕೆ ತೆಗೆದುಕೊಳ್ಳದೇ ಇರುವುದು ಉತ್ತಮ ಎಂದು ವೈದ್ಯಕೀಯ ನಿರ್ದೇಶಕ ಸ್ಟೀಫನ್ ಪೋವಿಸ್ ತಿಳಿಸಿದ್ದಾರೆ.

ಯಾವುದೇ ಲಸಿಕೆ ತೆಗೆದುಕೊಂಡಾಗಲೂ ಅಲರ್ಜಿ ಹಿನ್ನೆಲೆವುಳ್ಳ ವ್ಯಕ್ತಿಗಳಿಗೆ ಈ ರೀತಿಯಾಗುವುದು ನಿರೀಕ್ಷಿತವೇ. ಹಾಗಾಗಿ ಈ ಕುರಿತು ಮತ್ತಷ್ಟು ಸ್ಪಷ್ಟತೆ ದೊರೆತ ನಂತರ ಮುಂದುವರೆಯಲಾಗುವುದು ಎಂದರು.

Recommended Video

Shimoga: ಗ್ರಾಮದಲ್ಲಿ ಪತ್ತೆಯಾಯ್ತು 8 ಅಡಿ ಉದ್ದದ ಕಾಳಿಂಗ ಸರ್ಪ! | Oneindia Kannada

English summary
Over 60 foreign envoys on Wednesday visited Hyderabad-based leading biotech companies Bharat Biotech and Biological E where they were apprised of India's vaccine development programmes in the wake of the Covid-19 pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X