ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಗಂಡನನ್ನು ಅಪ್ಪ ಮಾತ್ರ ಕೊಲ್ಲಿಸಲು ಸಾಧ್ಯ: ಗರ್ಭಿಣಿ ಅಮೃತಾ ಮಾತು

By ಅನಿಲ್
|
Google Oneindia Kannada News

"ಇದನ್ನು ನನ್ನ ಅಪ್ಪ ಮಾತ್ರ ಮಾಡಿಸುವುದಕ್ಕೆ ಸಾಧ್ಯ"- ತೆಲಂಗಾಣದಲ್ಲಿ ತನ್ನ ಕಣ್ಣೆದುರೇ ಗಂಡನ ಕೊಲೆಯನ್ನು ನೋಡಿದ ಅಮೃತಾ ಹೇಳಿದ ಮಾತಿದು. ಜಾತಿ ಕಾರಣಕ್ಕೆ ಆದ ಕೊಲೆಯಿದು ಎಂಬ ಅನುಮಾನವಿದ್ದು, ಈ ಕೃತ್ಯದಲ್ಲಿ ತನ್ನ ತಂದೆಯ ಕೈವಾಡ ಇದೆ ಎಂದು ಆಕೆ ಆರೋಪಿಸಿದ್ದಾರೆ.

ಅಮೃತಾಗೆ ಈಗ ಇಪ್ಪತ್ತೊಂದು ವರ್ಷ ವಯಸ್ಸು. ಮೂರು ತಿಂಗಳ ಗರ್ಭಿಣಿ. ಮಿರ್ಯಾಲಗುಡದ ಜ್ಯೋತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅದೇ ಆಸ್ಪತ್ರೆಯ ಎದುರೇ ಶುಕ್ರವಾರದಂದು ಅಪರಿಚಿತ ದುಷ್ಕರ್ಮಿಗಳಿಂದ ಆಕೆಯ ಗಂಡನ ಕೊಲೆಯಾಗಿದೆ.

'ಇಚಾ' ಲವ್ಸ್ 'ಪೊಣ್ಣಿ': ಇದು ಕೇರಳದ ರಕ್ತಸಿಕ್ತ ಪ್ರೇಮ ಅಧ್ಯಾಯ'ಇಚಾ' ಲವ್ಸ್ 'ಪೊಣ್ಣಿ': ಇದು ಕೇರಳದ ರಕ್ತಸಿಕ್ತ ಪ್ರೇಮ ಅಧ್ಯಾಯ

"ನನ್ನ ಮಾತಿಗೆ ವಿರುದ್ಧವಾಗಿ ನಡೆದುಕೊಂಡರೆ ಕೊಂದುಬಿಡ್ತೀನಿ ಅಂತ ಹಲವು ಸಲ ಆತ ಹೇಳಿದ್ದರು" ಎಂದು ತನ್ನ ತಂದೆಯ ಮಾತನ್ನು ನೆನಪಿಸಿಕೊಳ್ಳುತ್ತಾರೆ. ಸದ್ಯಕ್ಕೆ ಪೊಲೀಸರ ಮನವಿ ಮೇರೆಗೆ ಅಮೃತಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಮ್ಮನ್ನು ಕೊಲ್ಲಬೇಡಿ, ಬದುಕಲು ಬಿಡಿ: ಪ್ರೇಮಿಗಳ ದಯನೀಯ ಮೊರೆ ನಮ್ಮನ್ನು ಕೊಲ್ಲಬೇಡಿ, ಬದುಕಲು ಬಿಡಿ: ಪ್ರೇಮಿಗಳ ದಯನೀಯ ಮೊರೆ

"ಆಕೆ ಆರೋಗ್ಯ ಸ್ಥಿತಿ ಕ್ಷೀಣವಾಗಿದೆ ಮತ್ತು ರಕ್ತದೊತ್ತಡದಲ್ಲಿ ಭಾರೀ ಏರಿಳಿತವಾಗುತ್ತಿದೆ. ಆಕೆಯ ದೇಹದಲ್ಲಿ ಆಗುತ್ತಿರುವ ಬದಲಾವಣೆಯು ಮಗುವಿಗೆ ಒಳ್ಳೆಯದಲ್ಲ" ಎಂದು ಅಮೃತಾ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರಾದ ಎಂ.ರಾಮರಾವ್ ಆತಂಕ ವ್ಯಕ್ತಪಡಿಸಿದ್ದಾರೆ.

ಕೊಲೆಗೆ ಒಂದು ನಿಮಿಷಕ್ಕೆ ಮುಂಚೆ ಕರೆ ಬಂದಿತ್ತು

ಕೊಲೆಗೆ ಒಂದು ನಿಮಿಷಕ್ಕೆ ಮುಂಚೆ ಕರೆ ಬಂದಿತ್ತು

"ಕೊಲೆಗೆ ಒಂದು ನಿಮಿಷಕ್ಕೆ ಮುಂಚೆ ಅವರು ನನ್ನ ಫೋನ್ ಗೆ ಕರೆ ಮಾಡಿದ್ದರು. ಆದರೆ ನಾನು ಸ್ವೀಕರಿಸಲಿಲ್ಲ. ಪ್ರಣಯ್ ಮೇಲೆ ದಾಳಿ ಆದ ಮೇಲೆ ನಾನು ಅವರ ಫೋನ್ ಗೆ ಕರೆ ಮಾಡಿದೆ. ಆಗ ಬೇರೆಯದೇ ರೀತಿಯಲ್ಲಿ ಮಾತನಾಡಿದರು. ಅಲ್ಲಿಯವರೆಗೆ ಅವರ ಜತೆಗೆ ಮಾತುಕತೆಯೇ ಇರಲಿಲ್ಲ. ನನ್ನ ಫೋನ್ ನಂಬರ್ ಅನ್ನು ಅವರು ಬ್ಲಾಕ್ ಮಾಡಿದ್ದರು. ಪ್ರಣಯ್ ಮನೆಯಲ್ಲಿ ಗಣಪತಿ ಪೂಜೆ ಮಾಡಿದೆವು ಅಂತ ಹೇಳುವ ಸಲುವಾಗಿ ಅಮ್ಮನಿಗೆ ಫೋನ್ ಮಾಡಿ, ಮಾತನಾಡಿದೆ" ಎನ್ನುತ್ತಾರೆ ಅಮೃತಾ.

ಇಪ್ಪತ್ನಾಲ್ಕು ವರ್ಷದ ಪ್ರಣಯ್ ದಲಿತ ಕ್ರಿಶ್ಚಿಯನ್

ಇಪ್ಪತ್ನಾಲ್ಕು ವರ್ಷದ ಪ್ರಣಯ್ ದಲಿತ ಕ್ರಿಶ್ಚಿಯನ್

ಇಪ್ಪತ್ನಾಲ್ಕು ವರ್ಷದ ಪ್ರಣಯ್ ದಲಿತ ಕ್ರಿಶ್ಚಿಯನ್. ಅಮೃತಾ ಹಿಂದೂ ವೈಶ್ಯ ಸಮುದಾಯಕ್ಕೆ ಸೇರಿದವರು. ಈ ವರ್ಷದ ಜನವರಿಯಲ್ಲಿ ಇಬ್ಬರೂ ಮನೆ ಬಿಟ್ಟು ಹೋಗಿ ಮದುವೆಯಾಗಿದ್ದರು. "ಪ್ರಣಯ್ ಜತೆಗೆ ನಾನು ಮಾತನಾಡುತ್ತಿದ್ದೀನಿ ಅಂತ ಗೊತ್ತಾದಾಗ ಅಂಕಲ್ ನನಗೆ ಹೊಡೆದಿದ್ದರು" ಎನ್ನುವ ಅಮೃತಾಗೆ ಏಳು ವರ್ಷಗಳಿಂದ ಆತನ ಪರಿಚಯವಿತ್ತು. ಆದಷ್ಟು ಬೇಗ ಕೆಲಸ ಹುಡುಕಿಕೊಂಡು ವಿದೇಶದಲ್ಲಿ ಹೋಗಿ ನೆಲೆಸಬೇಕು ಅನ್ನೋದು ಇವರಿಬ್ಬರ ಉದ್ದೇಶವಾಗಿತ್ತು. ಆದರೆ ಅಮೃತ್ ಗರ್ಭಿಣಿ ಅಂತ ಗೊತ್ತಾದಾಗ ತಮ್ಮ ಯೋಜನೆಯನ್ನು ಮುಂದಕ್ಕೆ ಹಾಕಿದ್ದರು. "ಈಗ ಕೂಡ ಮಗುವನ್ನು ನಾನು ತೆಗೆಸಲ್ಲ. ಅವನ ನೆನಪಾಗಿ ಹಾಗೇ ಇಟ್ಟುಕೊಳ್ತೀನಿ" ಎನ್ನುತ್ತಾರೆ ಅಮೃತಾ.

ಕಾರು ಬಾಡಿಗೆಗೆ ಕೊಡ್ತೀರಾ ಎಂದು ಬಂದಿದ್ದ ಅಪರಿಚಿತ

ಕಾರು ಬಾಡಿಗೆಗೆ ಕೊಡ್ತೀರಾ ಎಂದು ಬಂದಿದ್ದ ಅಪರಿಚಿತ

ನಮಗೆ ಯಾವಾಗಲೂ ಗೊತ್ತಿತ್ತು. ಅಪರಾಧ ಹಿನ್ನೆಲೆಯ ಅವರು ಅಪಾಯಕಾರಿ ಜನ ಎಂಬ ಸಂಗತಿ ಗೊತ್ತಿತ್ತು. ಭೂಮಿ ಒತ್ತುವರಿ ಮತ್ತು ಅಕ್ರಮ ಮದ್ಯ ದಂಧೆ ನಡೆಸುವ ಜನ ಅವರು. ಅಮೃತಾಳ ಅಪ್ಪ ಮಾರುತಿ ರಾವ್ ಕಡೆಯ ಜನರಿಂದ ನಿರಂತರವಾಗಿ ನಮಗೆ ಜೀವ ಬೆದರಿಕೆ ಎದುರಾಗುತ್ತಲೇ ಇತ್ತು ಎನ್ನುತ್ತಾರೆ ಪ್ರಣಯ್ ನ ದೊಡ್ಡಪ್ಪ. ಆಗಸ್ಟ್ ಹದಿನೇಳನೇ ತಾರೀಕು ಪ್ರಣಯ್-ಅಮೃತಾಗೆ ಆರತಕ್ಷತೆ ಕಾರ್ಯಕ್ರಮ ಮಾಡಿದ ಮೂರು ದಿನದ ನಂತರ ಹಿಂದಿ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬ ಬಂದು ಕಾರು ಬಾಡಿಗೆ ಕೊಡ್ತೀರಾ ಎಂದು ಕೇಳಿದ. ಅವನು ನಮಗೆ ಅಪರಿಚಿತ. ಜತೆಗೆ ನಮ್ಮ ಮನೆಗೇ ಹುಡುಕಿಕೊಂಡು ಬಂದು ಕಾರು ಬಾಡಿಗೆಗೆ ಕೇಳಿದ್ದು ಅನುಮಾನ ಮೂಡಿಸುವಂತಿದೆ ಎನ್ನುತ್ತಾರೆ ಪ್ರಣಯ್ ಕುಟುಂಬದವರು.

ಮಾಹಿತಿ ಸಂಗ್ರಹಿಸುತ್ತಿರುವ ಪೊಲೀಸರು

ಮಾಹಿತಿ ಸಂಗ್ರಹಿಸುತ್ತಿರುವ ಪೊಲೀಸರು

ಆಗಸ್ಟ್ ಮಧ್ಯಭಾಗದಿಂದ ಈ ವರೆಗೆ ಪ್ರಣಯ್ ಮನೆಗೆ ಭೇಟಿ ನೀಡಿದವರ ಮಾಹಿತಿ ಸಂಗ್ರಹಿಸುವ ಸಲುವಾಗಿ ಪೊಲೀಸ್ ಅಧಿಕಾರಿಗಳು ಸಿಸಿಟಿವಿ ಫೂಟೇಜ್ ಪರಿಶೀಲನೆ ನಡೆಸುತ್ತಿದ್ದಾರೆ. ಈ ಮಧ್ಯೆ, ವಾಪಸ್ ಮನೆಗೆ ಹೋಗ್ತೀಯಾ ಎಂದು ಅಮೃತಾಳನ್ನು ಕೇಳಲಾಗಿದೆ. "ಇಲ್ಲ ನನ್ನ ತಂದೆ-ತಾಯಿ ಬಳಿ ಹೋಗಲ್ಲ" ಎಂದು ಆಕೆ ಉತ್ತರಿಸಿದ್ದಾರೆ.

English summary
Just a day after her husband was cruelly hacked to death before her eyes in what is suspected to be a case of caste killing, Amrutha has alleged that it is her father who is behind the crime.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X