ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿಗೆ 16 ಕೋಟಿ ದಾನ ಮಾಡಿದ ಎನ್ಆರ್ ಐ ಉದ್ಯಮಿ

|
Google Oneindia Kannada News

ತಿರುಪತಿ, ಫೆ.4 : ಜಗತ್ತಿನ ಅತ್ಯಂತ ಶ್ರೀಮಂತ ದೇವರು ಎಂಬ ಹೆಗ್ಗಳಿಕೆ ಗಳಿಸಿರುವ ತಿರುಪತಿ ತಿಮ್ಮಪ್ಪನಿಗೆ ಶೀಘ್ರವೇ 33 ಕೆಜಿ ಚಿನ್ನದ ಹಾರವನ್ನು ಭಕ್ತರೊಬ್ಬರು ಸಮರ್ಪಿಸಲಿದ್ದಾರೆ. ಹೌದು, ಅನಿವಾಸಿ ಭಾರತೀಯ ಉದ್ಯಮಿ ಎಂ.ರಾಮಲಿಂಗ ರಾಜು ಇದಕ್ಕಾಗಿ 16 ಕೋಟಿ ರೂ.ಗಳನ್ನು ದೇವಾಲಯಕ್ಕೆ ನೀಡಿದ್ದಾರೆ.

ಅಮೆರಿಕ ನಿವಾಸಿಯಾಗಿರುವ ಉದ್ಯಮಿ ಎಂ.ರಾಮಲಿಂಗ ರಾಜು ತಿಮ್ಮಪ್ಪನಿಗೆ ಭಾರೀ ಗಾತ್ರದ ಚಿನ್ನದ ಹಾರವನ್ನು ನೀಡುವ ಆಶಯ ಹೊಂದಿದ್ದರು. ಈ ಕುರಿತು ತಿರುಪತಿ ತಿರುಮಲ ದೇವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಅವರು, ಕೆಲವು ದಿನಗಳ ಹಿಂದೆ ಇದಕ್ಕಾಗಿ 16 ಕೋಟಿ ರೂಪಾಯಿಗಳನ್ನು ದೇವಾಲಯದ ಆಡಳಿತ ಮಂಡಳಿಗೆ ನೀಡಿದ್ದರು.

Tirupati

ತಿರುಪತಿ ತಿರುಮಲ ಆಡಳಿತ ಮಂಡಳಿ ಈ ದಾನದ ಹಣದಲ್ಲಿ ಚಿನ್ನದ ಹಾರ ಮಾಡಿಸಲು ತೀರ್ಮಾನ ಕೈಗೊಂಡಿದೆ. ಈ ಹಾರಕ್ಕೆ 'ಸಹಸ್ರ ನಾಮ ಕಾಸುಲಾ ಮಾಲಾ' ಎಂದು ಹೆಸರಿಡಲಾಗಿದೆ. 33 ಕೆಜಿ ಚಿನ್ನ ಬಳಸಿ ಬಹು ಪದರ ಇರುವ ಹಾರವನ್ನು ತಯಾರಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 11 ಕೋಟಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ. [ತಿಮ್ಮಪ್ಪನ ಸನ್ನಿಧಿಯಲ್ಲಿ ವೈಕುಂಠ ಏಕಾದಶಿ]

ಎಂ.ರಾಮಲಿಂಗ ರಾಜು ಅವರು ಈಗಾಗಲೇ 16 ಕೋಟಿ ರೂ.ಗಳನ್ನು ದೇವಾಲಯಕ್ಕೆ ನೀಡಿದ್ದಾರೆ. ಇದರಲ್ಲಿ 11 ಕೋಟಿ ಚಿನ್ನದ ಹಾರಕ್ಕೆ ಖರ್ಚಾಗಲಿದೆ ಎಂದು ಟಿಟಿಡಿ ಅಧಿಕಾರಿಗಳು ಹೇಳಿದ್ದಾರೆ. ಉಳಿದ ಹಣವನ್ನು ತಿರುಚನೂರಿನಲ್ಲಿ ಭಕ್ತಾದಿಗಳಿಗೆ ಅನುಕೂಲವಾಗಲು ಉಚಿತ ಭೋಜನ ಶಾಲೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.

ಕೇವಲ ಇಷ್ಟು ಮಾತ್ರವಲ್ಲದೇ ರಾಮಲಿಂಗ ರಾಜು ಅವರು ವೈಕುಂಠದಿಂದ ಭೂಮಿಗೆ ಇಳಿದ ವೆಂಕಟೇಶ್ವರ ಸ್ವಾಮಿ ಮೊದಲು ತನ್ನ ಪಾದವನ್ನು ಇಟ್ಟ ಸ್ಥಳವಿದು ಎಂಬ ನಂಬಿಕೆ ಇರುವ ಶ್ರೀವರಿ ಪಾದಲು ಬಳಿ ಧ್ಯಾನ ಮಂದಿನ ನಿರ್ಮಾಣ ಮಾಡಲು 65 ಲಕ್ಷ ರೂ.ಗಳನ್ನು ನೀಡಲು ನಿರ್ಧರಿಸಿದ್ದಾರೆ.

50 ಕೋಟಿ ರೂ.ವೆಚ್ಚದ ಪಾರ್ಕಿಂಗ್‌ ಸೌಲಭ್ಯ : ತಿರುಪತಿ ತಿರುಮಲ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನುಕೂಲವಾಗಲು ಸುಮಾರು 50 ಕೋಟಿ ವೆಚ್ಚದಲ್ಲಿ ಬಹು ಅಂತಸ್ತಿನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ದೇವಾಲಯದ ಆಡಳಿತ ಮಂಡಳಿ ನಿರ್ಧರಿಸಿದೆ. ಇದಕ್ಕೆ ದೇವಾಲಯದ ಆಡಳಿತ ಮಂಡಳಿ ಸಭೆಯಲ್ಲಿ ಅನುಮೋದನೆ ಸಹ ನೀಡಲಾಗಿದೆ.

English summary
In what is being billed as the single largest overseas donation, an NRI entrepreneur devotee has donated Rs 16 core to the Tirumala Tirupati Devasthanams (TTD). M Ramalinga Raju, the US-based devotee, happens to be a close relative of TTD chairman Kanamuri Bapiraju.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X