ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮಪ್ಪನಿಗೆ ಗೊತ್ತಿರುವಂತೆ ಇನ್ಯಾರಿಗೂ ತೆಲಂಗಾಣ ಗೊತ್ತಿಲ್ಲ ಎಂದ ಕೆಸಿಆರ್ ಮಗಳು

|
Google Oneindia Kannada News

Recommended Video

5 States Assembly Election Results 2018: ಅಪ್ಪನ ಬಗ್ಗೆ ಮಾತನಾಡಿದ ಕೆಸಿಆರ್ ಮಗಳು

ಹೈದರಾಬಾದ್, ಡಿಸೆಂಬರ್ 11: "ನಾವು ಜನರ ಪ್ರತಿಸ್ಪಂದನೆ ನೋಡುತ್ತಿದ್ದೇವೆ. ನಾಲ್ಕೂವರೆ ವರ್ಷದ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ" ಎಂದು ತೆಲಂಗಾಣದ ಕೆ.ಚಂದ್ರಶೇಖರ್ ರಾವ್ ಅವರ ಮಗಳು ಕವಿತಾ ಹೇಳಿದ್ದಾರೆ. ರಾಜ್ಯದಲ್ಲಿ ಕೆಸಿಆರ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ ಭರ್ಜರಿ ಜಯ ದಾಖಲಿಸಿದ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಕೆಸಿಆರ್ ಅವರ ರೀತಿ ತೆಲಂಗಾಣದ ಬಗ್ಗೆ ಯಾರಿಗೂ ಗೊತ್ತಿಲ್ಲ ಎಂದು ಕೂಡ ಅವರು ಮಂಗಳವಾರ ಹೇಳಿದ್ದಾರೆ. ಹೇಗಾದರೂ ಮಾಡಿ ಆಡಳಿತಾರೂಢ ಟಿಆರ್ ಎಸ್ ಪಕ್ಷವನ್ನು ಸೋಲಿಸಬೇಕು ಎಂಬ ಉದ್ದೇಶದಿಂದ ಬಹುಕಾಲದ ವೈಷಮ್ಯ ಮರೆತು, ಕಾಂಗ್ರೆಸ್ ಜತೆಗೆ ಟಿಡಿಪಿ ಕೈ ಜೋಡಿಸಿತ್ತು. ಆ ಮೈತ್ರಿ ಪಕ್ಷದಿಂದ ಯಾವುದೇ ಸವಾಲು ಎದುರಾಗಲಿಲ್ಲ ಎಂದು ಕವಿತಾ ಹೇಳಿದ್ದಾರೆ.

ತೆಲಂಗಾಣ: ನಾಳೆಯೇ ಮುಖ್ಯಮಂತ್ರಿಯಾಗಿ ಕೆಸಿಆರ್ ಪ್ರಮಾಣವಚನ ತೆಲಂಗಾಣ: ನಾಳೆಯೇ ಮುಖ್ಯಮಂತ್ರಿಯಾಗಿ ಕೆಸಿಆರ್ ಪ್ರಮಾಣವಚನ

ಈ ಕದನ ಏನಿದ್ದರೂ ಪತ್ರಿಕೆಗಳಲ್ಲಿ ತೋರಿಸಿದ್ದರು. ಆದರೆ ನಾವು ತಳಮಟ್ಟದಲ್ಲಿ ಜನರ ಜತೆಗೆ ಸಂಪರ್ಕದಲ್ಲಿದ್ದೆವು. ಮತ್ತು ಜನರ ಕೆಸಿಆರ್ ಜತೆಗಿದ್ದರು. ಚಂದ್ರಬಾಬು ನಾಯ್ಡು ಆಂದ್ರದಲ್ಲಿನ ತಮ್ಮ ವೈಫಲ್ಯವನ್ನು ಮರೆಮಾಚಲು ಯತ್ನಿಸಿದರು. ಮಹಾಘಟ್ ಬಂಧನ್ ಅನ್ನು ಹೈಜಾಕ್ ಮಾಡಿ, ತೆಲಂಗಾಣದಲ್ಲಿ ಪ್ರಚಾರಕ್ಕೆ ಇಳಿದರು ಎಂದು ಆಕೆ ಹೇಳಿದ್ದಾರೆ.

No one knows Telangana like KCR, says daughter Kavitha

ಸಮೀಕ್ಷೆಗಳಿಗೂ ಅಚ್ಚರಿ ಮೂಡಿಸಿದ ತೆಲಂಗಾಣ ಫಲಿತಾಂಶ ಸಮೀಕ್ಷೆಗಳಿಗೂ ಅಚ್ಚರಿ ಮೂಡಿಸಿದ ತೆಲಂಗಾಣ ಫಲಿತಾಂಶ

ನಾವು ಇನ್ನಷ್ಟು ವಿಸ್ತಾರ ಆಗುತ್ತೇವೆ, ನಾವು ರಾಷ್ಟ್ರಮಟ್ಟದ ರಾಜಕಾರಣಕ್ಕೆ ತೆರಳುತ್ತೇವೆ. ನಾಳೆ ಖಂಡಿತವಾಗಿಯೂ ರಾಷ್ಟ್ರಮಟ್ಟದ ಕಾರ್ಯಸೂಚಿ (ಅಜೆಂಡಾ) ಘೋಷಣೆ ಮಾಡುತ್ತೇವೆ. ರಾಷ್ಟ್ರ ಮಟ್ಟದಲ್ಲಿ ಪರ್ಯಾಯದ ಅಗತ್ಯವಿದೆ. ಕೆಸಿಆರ್ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಆದರೆ ರಾಷ್ಟ್ರ ರಾಜಕಾರಣದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದಿದ್ದಾರೆ ಕವಿತಾ.

English summary
KCR's daughter K Kavitha, a parliamentarian, said his hard work had paid off. "We are seeing the response of the people. The hard work in four and a half years has paid off," said Ms Kavitha. "Nobody knows Telangana like KCR," she remarked. After Telangana Rashtriya Samithi victory in Telanagana assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X