ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಸ್‌ಐಎಸ್‌ ಜೊತೆ ನಂಟು, ಹೈದರಾಬಾದ್‌ನಲ್ಲಿ ಇಬ್ಬರ ಬಂಧನ

By Gururaj
|
Google Oneindia Kannada News

ಹೈದರಾಬಾದ್, ಆಗಸ್ಟ್ 12 : ಐಎಸ್‌ಐಎಸ್‌ ಆದೇಶದಂತೆ ದೇಶದಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಆರೋಪದಡಿ ಹೈದರಾಬಾದ್ ಮೂಲಕ ಇಬ್ಬರು ಯುವಕರನ್ನು ಎನ್‌ಐಎ ಬಂಧಿಸಿದೆ. 2016ರಲ್ಲಿಯೇ ಯುವಕರಿಬ್ಬರು ಐಎಸ್‌ಐಎಸ್ ಸೇರಲು ಬಯಸಿದ್ದರು.

ಮೊಹಮ್ಮದ್ ಅಬ್ದುಲ್ಲಾ ಬತೀಷ್ (24), ಅಬ್ದುಲ್ ಖಾದೀರ್ (19) ಬಂಧಿತ ಯುವಕರು. ದೇಶದಲ್ಲಿ ಸ್ಪೋಟ ನಡೆಸಲು ಒಳಸಂಚು ರೂಪಿಸುತ್ತಿದ್ದರು ಎಂಬ ಖಚಿತ ಮಾಹಿತಿ ಆಧರಿಸಿ, ಎನ್‌ಐಎ ಇಬ್ಬರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದೆ.

ಇರಾಕ್ ದುರಂತದ ಬಗ್ಗೆ ನನ್ನ ಬಾಯಿ ಮುಚ್ಚಿಸಲಾಗಿತ್ತು: ಹರ್ಜಿತ್ಇರಾಕ್ ದುರಂತದ ಬಗ್ಗೆ ನನ್ನ ಬಾಯಿ ಮುಚ್ಚಿಸಲಾಗಿತ್ತು: ಹರ್ಜಿತ್

2016ರಲ್ಲಿ ಅದಾನ್ ಹಾಸನ್ ಸೇರಿದಂತೆ ಇಬ್ಬರನ್ನು ಎನ್‌ಐಎ ಬಂಧಿಸಿತ್ತು. ಬಂಧಿತ ಮೂವರು ದೇಶದಲ್ಲಿನ ಯುವಕರನ್ನು ತರಬೇತಿಗೊಳಿಸಿ, ಐಎಸ್‌ಐಎಸ್‌ಗೆ ಸೇರಿಸಿಕೊಳ್ಳುತ್ತಿದ್ದರು ಎಂಬ ಆರೋಪವಿತ್ತು. ಅವರು ನೀಡಿದ ಮಾಹಿತಿಯಂತೆ ಇಬ್ಬರನ್ನು ಈಗ ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ.

isis

ಅಬ್ದುಲ್ಲಾ ಬತೀಷ್ ಬಂಧನದ ಬಳಿಕ ಸ್ಪೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬತೀಷ್ ಬಾಂಬ್ ತಯಾರು ಮಾಡುವ ತರಬೇತಿಯನ್ನು ಪಡೆದಿದ್ದ ಎಂದು ತಿಳಿದುಬಂದಿದೆ. 2016ರಲ್ಲಿಯೇ ಈತ ಐಎಸ್‌ಐಎಸ್ ಸೇರಲು ಪ್ರಯತ್ನ ನಡೆಸಿದ್ದ. ಆದರೆ, ಸಾಧ್ಯವಾಗಿರಲಿಲ್ಲ.

ಐಎಸ್‌ಐಎಸ್‌ ಚಟುವಟಿಕೆ : ದಕ್ಷಿಣ ಭಾರತದಲ್ಲಿ ಕೇರಳದಲ್ಲಿ ಹೆಚ್ಚುಐಎಸ್‌ಐಎಸ್‌ ಚಟುವಟಿಕೆ : ದಕ್ಷಿಣ ಭಾರತದಲ್ಲಿ ಕೇರಳದಲ್ಲಿ ಹೆಚ್ಚು

ಬತೀಷ್ ಮತ್ತು ಖಾದೀರ್ ಹಲವಾರು ದಿನಗಳಿಂದ ಎನ್‌ಐಎ ಕಣ್ಗಾವಲಿನಲ್ಲಿದ್ದರು. ದೇಶದಲ್ಲಿ ಸ್ಪೋಟಗಳನ್ನು ನಡೆಸಲು ಅವರು ತಯಾರಿ ನಡೆಸಿದ್ದರು ಎಂದು ತಿಳಿದುಬಂದಿದೆ.

English summary
Two arrested by the National Investigation Agency (NIA) from Hyderabad for conspiring to carry out terror activities in India. Explosive material was also recovered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X