ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿರಂಜೀವಿ ಪುತ್ರನ ಹೊಸ ಸಾಹಸ, ಗಗನದಲ್ಲಿ ಹಾರಾಟ

By Mahesh
|
Google Oneindia Kannada News

ಹೈದರಾಬಾದ್, ಜುಲೈ 13: ನಟ ಕಮ್ ರಾಜಕಾರಣಿ ಚಿರಂಜೀವಿ ಅವರ ಪುತ್ರ ನಟ ರಾಮ್ ಚರಣ್ ತೇಜ ಹೊಸ ಸಾಹಸಕ್ಕೆ ಕೈ ಹಾಕಿರುವುದು ಎಲ್ಲರಿಗೂ ಗೊತ್ತೇ ಇದೆ. ವಿಮಾನಯಾನ ಕ್ಷೇತ್ರಕ್ಕೆ ಜಿಗಿದಿರುವ ಈ 'ಮಗಧೀರ' ಕಡಿಮೆ ಬಜೆಟ್ ವಿಮಾನವನ್ನು ಪರಿಚಯಿಸಿದ್ದಾರೆ. ರಾಮ್ ಅವರ 'ಟ್ರೂಜೆಟ್' ಸೋಮವಾರ ಚೊಚ್ಚಲ ಪ್ರಯಾಣವನ್ನು ಯಶಸ್ವಿಯಾಗಿ ಪೂರೈಸಿದೆ.

ಟರ್ಬೋ ಮೆಗಾ ಏರ್ ವೇಸ್ ಪ್ರೈ ಲಿಮಿಟೆಡ್ ನ ಭಾಗವಾಗಿರುವ ಟ್ರೂಜೆಟ್ ಸೋಮವಾರ(ಜುಲೈ 13, 2015) ಹೈದರಾಬಾದಿನಿಂದ ತಿರುಪತಿಗೆ ಪ್ರಯಾಣಿಸಿದೆ.

ಈ ಹೊಸ ವಿಮಾನಯಾನ ಮಾರ್ಗವನ್ನು ಕೇಂದ್ರದ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಣಪತಿ ರಾಜು ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಟ ರಾಮ್ ಚರಣ್ ತೇಜ, ಬಂಡವಾಳ ಹೂಡಿಕೆದಾರರಾದ ಪ್ರೇಮ್ ಕುಮಾರ್, ವಿ ಉಮೇಶ್ ಮುಂತಾದವರಿದ್ದರು.

ಕೇಂದ್ರದ ಕಾರ್ಮಿಕ ಖಾತೆ ರಾಜ್ಯ ಸಚಿವ ಬಂಡಾರು ದತ್ತಾತ್ರೇಯ, ತೆಲಂಗಾಣದ ಮಾಹಿತಿ ಮತ್ತು ತಂತ್ರಜ್ಞಾನ ಹಾಗೂ ಪಂಚಾಯತ್ ರಾಜ್ ಸಚಿವ ಕೆಟಿ ರಾಮರಾವ್ ಅವರು ಷಂಶಾಬಾದ್ ವಿಮಾನ ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಉಪಸ್ಥಿತರಿದ್ದರು.

'ಟ್ರೂಜೆಟ್' ಸೋಮವಾರ ಚೊಚ್ಚಲ ಪ್ರಯಾಣ

'ಟ್ರೂಜೆಟ್' ಸೋಮವಾರ ಚೊಚ್ಚಲ ಪ್ರಯಾಣ

ವಿಮಾನಯಾನ ಕ್ಷೇತ್ರಕ್ಕೆ ಜಿಗಿದಿರುವ ಈ 'ಮಗಧೀರ' ಕಡಿಮೆ ಬಜೆಟ್ ವಿಮಾನವನ್ನು ಪರಿಚಯಿಸಿದ್ದಾರೆ. ರಾಮ್ ಅವರ 'ಟ್ರೂಜೆಟ್' ಸೋಮವಾರ ಚೊಚ್ಚಲ ಪ್ರಯಾಣವನ್ನು ಯಶಸ್ವಿಯಾಗಿ ಪೂರೈಸಿದೆ.

ಹೈದರಾಬಾದಿನಿಂದ ತಿರುಪತಿಗೆ ಪ್ರಯಾಣ

ಹೈದರಾಬಾದಿನಿಂದ ತಿರುಪತಿಗೆ ಪ್ರಯಾಣ

ಟರ್ಬೋ ಮೆಗಾ ಏರ್ ವೇಸ್ ಪ್ರೈ ಲಿಮಿಟೆಡ್ ನ ಭಾಗವಾಗಿರುವ ಟ್ರೂಜೆಟ್ ಸೋಮವಾರ(ಜುಲೈ 13, 2015) ಹೈದರಾಬಾದಿನಿಂದ ತಿರುಪತಿಗೆ ಪ್ರಯಾಣಿಸಿದೆ. ಈ ಹೊಸ ವಿಮಾನಯಾನ ಮಾರ್ಗವನ್ನು ಕೇಂದ್ರದ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಣಪತಿ ರಾಜು ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಟ ರಾಮ್ ಚರಣ್ ತೇಜ, ಬಂಡವಾಳ ಹೂಡಿಕೆದಾರರಾದ ಪ್ರೇಮ್ ಕುಮಾರ್, ವಿ ಉಮೇಶ್ ಮುಂತಾದವರಿದ್ದರು.

ಎಟಿಅರ್ 72-500 ಏರ್ ಕ್ರಾಫ್ಟ್

ಎಟಿಅರ್ 72-500 ಏರ್ ಕ್ರಾಫ್ಟ್

ಟ್ರೂಜೆಟ್ ವಿಮಾನ ಸದ್ಯಕ್ಕೆ ಎಟಿಅರ್ 72-500 ಏರ್ ಕ್ರಾಫ್ಟ್ ಗಳನ್ನು ಹೊಂದಿದೆ. ಐರಿಷ್ ಮೂಲದ ಕಂಪನಿಯಿಂದ ಭೋಗ್ಯಕ್ಕೆ ಎರಡು ವಿಮಾನಗಳನ್ನು ಪಡೆದುಕೊಳ್ಳಲಾಗಿದೆ. 2016ರ ಅಂತ್ಯಕ್ಕೆ ಇನ್ನೂ 3 ವಿಮಾನಗಳನ್ನು ಖರೀದಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

ಸಾರ್ವಜನಿಕರಿಗೆ ವಿಮಾನಯಾನ ಲಭ್ಯ

ಸಾರ್ವಜನಿಕರಿಗೆ ವಿಮಾನಯಾನ ಲಭ್ಯ

72 ಸೀಟುಗಳ ಈ ಲಘು ವಿಮಾನದ ಮುಖ್ಯ ಉದ್ದೇಶ ಕಡಿಮೆ ಬಜೆಟ್ ನಲ್ಲಿ ಉತ್ತಮ ಸೌಲಭ್ಯ ನೀಡಿ ಎಲ್ಲಾಸ್ತ ರದ ಸಾರ್ವಜನಿಕರಿಗೆ ವಿಮಾನಯಾನ ಲಭ್ಯವಾಗುವಂತೆ ಮಾಡುವುದಾಗಿದೆ.

ಟರ್ಬೋ ಮೆಗಾ ಏರ್ ವೇಸ್ ಸಂಸ್ಥೆ

ಟರ್ಬೋ ಮೆಗಾ ಏರ್ ವೇಸ್ ಸಂಸ್ಥೆ

ಕಳೆದ ವಾರ ಜುಲೈ 7ರಂದು ಈ ಹೊಸ ವಿಮಾನ ಸಂಸ್ಥೆ ಟರ್ಬೋ ಮೆಗಾ ಏರ್ ವೇಸ್ (ಟ್ರೂಜೆಟ್ ಏರ್ ವೇಸ್ )ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ದಿಂದ ಪರವಾನಗಿ ಸಿಕ್ಕಿತ್ತು.

ಷಂಶಾಬಾದ್ ವಿಮಾನ ನಿಲ್ದಾಣದಲ್ಲಿ

ಷಂಶಾಬಾದ್ ವಿಮಾನ ನಿಲ್ದಾಣದಲ್ಲಿ

ಕೇಂದ್ರದ ಕಾರ್ಮಿಕ ಖಾತೆ ರಾಜ್ಯ ಸಚಿವ ಬಂಡಾರು ದತ್ತಾತ್ರೇಯ, ತೆಲಂಗಾಣದ ಮಾಹಿತಿ ಮತ್ತು ತಂತ್ರಜ್ಞಾನ ಹಾಗೂ ಪಂಚಾಯತ್ ರಾಜ್ ಸಚಿವ ಕೆಟಿ ರಾಮರಾವ್ ಅವರು ಷಂಶಾಬಾದ್ ವಿಮಾನ ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಬೆಂಗಳೂರಿನಲ್ಲೂ ವಿಮಾನ ಸಂಸ್ಥೆ ಕಚೇರಿ

ಬೆಂಗಳೂರಿನಲ್ಲೂ ವಿಮಾನ ಸಂಸ್ಥೆ ಕಚೇರಿ

ಹೈದರಾಬಾದ್ ಮೂಲದ ಟ್ರೂಜೆಟ್ ಏರ್ ವೇಸ್ ರಾಜಮಂಡ್ರಿ, ಬೆಂಗಳೂರು, ಚೆನ್ನೈನಲ್ಲೂ ತನ್ನ ಕಚೇರಿಯನ್ನು ಹೊಂದಿದೆ. ಸುಮಾರು 20 ಮಿಲಿಯನ್ ಯುಎಸ್ ಡಾಲರ್ ಹೂಡಿಕೆಯೊಂದಿಗೆ ಹೊಸ ಸಾಹಸಕ್ಕೆ ರಾಮ್ ಚರಣ್ ಹಾಗೂ ಅವರ ತಂಡ ಕೈ ಹಾಕಿದೆ.

English summary
Actor-turned-politician Chiranjeevi's son Ram Charan has given a special gift to his motherland. TruJet, the first city-based regional low cost carrier began its operation on Sunday, July 13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X