ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎವರೆಸ್ಟ್ ಏರಲು ಹೋಗಿದ್ದ ಹೈದರಾಬಾದ್ ಟೆಕ್ಕಿ ನಾಪತ್ತೆ

|
Google Oneindia Kannada News

ಹೈದರಾಬಾದ್, ಏ. 27 : ಮೌಂಟ್ ಎವರೆಸ್ಟ್ ಏರಲು ಹೋಗಿದ್ದ ಹೈದರಾಬಾದ್ ಮೂಲದ ಸಾಫ್ಟ್‌ವೇರ್ ಇಂಜಿನಿಯರ್‌ ನೀಲಿಮಾ ಕಣ್ಮರೆಯಾಗಿದ್ದಾರೆ. ಶನಿವಾರ ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪದ ಬಳಿಕ ನೀಲಿಮಾ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ.

ನೀಲಿಮಾ ಪುಟೋಟಾ (28) ಸೇರಿದಂತೆ 21 ಜನರ ತಂಡ ಮೌಂಟ್ ಎವರೆಸ್ಟ್ ಏರಲು ತೆರಳಿತ್ತು. ತೆಲಂಗಾಣದಿಂದ ಆಯ್ಕೆಯಾಗಿದ್ದ ಏಕೈಕ ಯುವತಿ ನೀಲಿಮಾ ಆಗಿದ್ದರು, ಶನಿವಾರದ ನಂತರ ನೀಲಿಮಾ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ, ಇದರಿಂದ ಕುಟುಂಬದವರು ಗಾಬರಿಯಾಗಿದ್ದಾರೆ.

Neelima

ಶನಿವಾರ ಬೆಳಗ್ಗೆ ತನ್ನ ಪೋಷಕರಿಗೆ ಕರೆ ಮಾಡಿದ್ದ ನೀಲಿಮಾ ಅವರು, ತಾವು ಸುಮಾರು 4,600 ಮೀಟರ್ ಎತ್ತರ ತಲುಪಿದ್ದು, ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಲು ಇನ್ನು 4 ದಿನ ಬಾಕಿ ಉಳಿದಿದೆ ಎಂದು ಮಾಹಿತಿ ನೀಡಿದ್ದರು. ಆದರೆ, ನಂತರ ಭೂಕಂಪ ಸಂಭವಿಸಿದೆ. ಆನಂತರ ಅವರ ಸಂಪರ್ಕ ಸಿಕ್ಕಿಲ್ಲ.[ನೇಪಾಳಕ್ಕೆ ತೆರಳಿದ ಕರ್ನಾಟಕದ 10 ವೈದ್ಯರ ತಂಡ]

ಸಂಪರ್ಕ ಕೊರತೆಯಿಂದಾಗಿ ನೀಲಿಮಾ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಅವರಿಗೆ ಏನೂ ಅನಾಹುತವಾಗಿಲ್ಲ ಎಂದು ಪ್ರವಾಸವನ್ನು ಆಯೋಜಿಸಿರುವ ಸಂಘಟಕರು ಹೇಳಿದ್ದಾರೆ. ಏ.18ರಂದು ನೀಲಿಮಾ ಅವರು ಹೈದರಾಬಾದ್‌ನಿಂದ ತೆರಳಿದ್ದರು. [ಭೂಕಂಪ: ಗೂಗಲ್ ಗುರು ಬಳಸಿ ನಿಮ್ಮವರ ಹುಡುಕಾಟ ನಡೆಸಿ]

Mountaineer Neelima

ಸಾಫ್ಟ್‌ವೇರ್ ಇಂಜಿನಿಯರ್‌ ನೀಲಿಮಾ ಉತ್ತಮ ಭರತನಾಟ್ಯ ಪಟುವೂ ಹೌದು. ಕಳೆದ ಎರಡು ದಿನಗಳಿಂದ ಆಕೆಯ ಸಂಪರ್ಕ ಸಿಗದಿರುವುದಕ್ಕೆ ಕುಟುಂಬದವರು ಆತಂಕಗೊಂಡಿದ್ದಾರೆ.

English summary
Neelima (28) a software engineer working in Hyderabad has been missing on Mount Everest. Neelima was selected for international everest expedition camp of 21 members. She left Hyderabad on April 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X