ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರಕ್ಕೆ 1000 ಕೋಟಿ ಪ್ಯಾಕೇಜ್ ಘೋಷಿಸಿದ ಮೋದಿ

|
Google Oneindia Kannada News

ಹೈದರಾಬಾದ್, ಅ.14 : ಹುಡ್‌ಹುಡ್ ಚಂಡಮಾರುತದಿಂದ ಹಾನಿಗೀಡಾದ ಆಂಧ್ರಪ್ರದೇಶಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಒಂದು ಸಾವಿರ ಕೋಟಿ.ರೂ. ನೆರವು ಘೋಷಿಸಿದ್ದಾರೆ. ಚಂಡಮಾರುತದಿಂದ ಸ್ಥಗಿತಗೊಳಿಸಲಾಗಿದ್ದ ರೈಲ್ವೆ ಸಂಚಾರ ವಿಶಾಖಪಟ್ಟಣಂನಲ್ಲಿ ಮಂಗಳವಾರದಿಂದ ಪುನಃ ಆರಂಭವಾಗಿದೆ.

ಮಂಗಳವಾರ ಮಧ್ಯಾಹ್ನ ವಿಶಾಖಪಟ್ಟಣಂಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ವಿಶಾಖಪಟ್ಟಣಂ, ಶ್ರೀಕಾಕುಳಂ ಮತ್ತು ವಿಜಯನಗರಂ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ, ಚಂಡಮಾರುತದಿಂದ ಆಗಿರುವ ನಷ್ಟದ ಅಂದಾಜು ನಡೆಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮತ್ತು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಜೊತೆಗಿದ್ದರು. [ಚಂಡಮಾರುತ, ಆಂಧ್ರಕ್ಕೆ ಕರ್ನಾಟಕದ ನೆರವು]

ಸಮೀಕ್ಷೆ ನಂತರ ಮಾತನಾಡಿದ ಪ್ರಧಾನಿ ಮೋದಿ, ಆಂಧ್ರಪ್ರದೇಶಕ್ಕೆ 1000 ಕೋಟಿ ರೂ.ಗಳ ಪ್ಯಾಕೇಜ್‌ ಅನ್ನು ತುರ್ತಾಗಿ ಘೋಷಿಸಲಾಗಿದೆ ಎಂದು ಹೇಳಿದರು. ಹುಡ್‌ಹುಡ್ ಅಬ್ಬರದಿಂದ ಮೃತಪಟ್ಟ ಕುಟುಂಬಗಳಿಗೆ 2 ಲಕ್ಷ ಪರಿಹಾರ ಮತ್ತು ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ಮೋದಿ ಹೇಳಿದರು.

ಹುಡ್‌ಹುಡ್ ಚಂಡಮಾರುತದ ದಾಳಿಯಿಂದಾಗಿ ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳ ಕರಾವಳಿ ತೀರಗಳಲ್ಲಿ 22 ಮಂದಿ ಸಾವಿಗೀಡಾಗಿದ್ದು, ವಿಶಾಖಪಟ್ಟಣಂ ಒಂದರಲ್ಲೇ 16 ಮಂದಿ ಸಾವನ್ನಪ್ಪಿದ್ದಾರೆ. ಚಂಡಮಾರುತದ ದಾಳಿಗೆ ವಿಶಾಖಪಟ್ಟಣಂ ನಗರದಲ್ಲಿ ಭಾರೀ ಹಾನಿ ಉಂಟಾಗಿದ್ದು, ಗ್ರಾಮಾಂತರ ಪ್ರದೇಶಗಳಾದ ಶ್ರೀಕಾಕುಳಂ ಮತ್ತು ವಿಜಯನಗರಂ ಜಿಲ್ಲೆಗಳಲ್ಲಿ ಕೃಷಿ ಭೂಮಿ ನಾಶವಾಗಿದೆ.

ಸಿನಿಮಾ ನಟರಿಂದ ಸಹಾಯ : ಹುಡ್‌ಹುಡ್‌ನಿಂದ ಹಾನಿಗೊಳಗಾದ ಪ್ರದೇಶಗಳ ಸಂತ್ರಸ್ತರಿಗೆ ಸಹಾಯ ಮಾಡಲು ತೆಲಗು ಚಿತ್ರರಂಗದವರು ಮುಂದೆ ಬಂದಿದ್ದಾರೆ. ಸೂಪರ್‌ಸ್ಟಾರ್ ರಾಮ್‌ಚರಣ್ ತೇಜ ಅವರು 10 ಲಕ್ಷ ರೂ., ಪವನ್ ಕಲ್ಯಾಣ್ 50 ಲಕ್ಷ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ.

English summary
Prime Minister Narendra Modi, who visited Hudhud cyclone-battered Visakhapatnam on Tuesday, October 14 has announced a Rs. 1,000 core package to help Andhra Pradesh get back on its feet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X