ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುವೈತ್‌ನಿಂದ ತೆಲಂಗಾಣಕ್ಕೆ ಬಂದಿದ್ದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಲಕ್ಷಣ ಪತ್ತೆ

|
Google Oneindia Kannada News

ಹೈದರಾಬಾದ್‌, ಜುಲೈ. 25: ಕುವೈತ್‌ನಿಂದ ಬಂದಿದ್ದ ತೆಲಂಗಾಣದ ಕಾಮರೆಡ್ಡಿಯ 40 ವರ್ಷದ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್‌ ಲಕ್ಷಣಗಳು ಪತ್ತೆಯಾಗಿವೆ ಎಂದು ತೆಲಂಗಾಣ ಸಾರ್ವಜನಿಕ ಆರೋಗ್ಯ ಇಲಾಖೆ ತಿಳಿಸಿದೆ.

ಕುವೈತ್‌ನಿಂದ ಬಂಧಿರುವ ಈ ವ್ಯಕ್ತಿ ಕಾಮರೆಡ್ಡಿ ಜಿಲ್ಲೆಯ ಇಂದಿರಾನಗರ ಕಾಲೋನಿ ನಿವಾಸಿಯಾಗಿದ್ದು, ಅವರನ್ನು ಹೈದರಾಬಾದ್‌ನ ಫೀವರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಮಂಕಿಪಾಕ್ಸ್‌ ಲಕ್ಷಣಗಳುಳ್ಳ ವ್ಯಕ್ತಿ ಜುಲೈ 6 ರಂದು ಕುವೈತ್‌ನಿಂದ ಹೈದರಾಬಾದ್‌ಗೆ ಬಂದಿದ್ದರು. ಜುಲೈ 20 ರಂದು ವ್ಯಕ್ತಿಗೆ ಜ್ವರ ಕಾಣಿಸಿಕೊಂಡಿತು. ಜುಲೈ 23 ರಂದು ಅವರಿಗೆ ಗಂಟುಗಳು ಕಾಣಿಸಿಕೊಂಡಿದ್ದವು. ಮರುದಿನ ಬೆಳಗ್ಗೆಯೇ ಕಾಮರೆಡ್ಡಿಯ ಖಾಸಗಿ ಆಸ್ಪತ್ರೆಗೆ ಅವರು ಭೇಟಿ ನೀಡಿದ್ದರು. ಅಲ್ಲಿನ ವೈದ್ಯರು ಮಂಗನ ಕಾಯಿಲೆಯ ಲಕ್ಷಣಗಳನ್ನು ಪತ್ತೆ ಹಚ್ಚಿ ಕಾಮರೆಡ್ಡಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

Monkeypox symptoms were detected in a person who had come to Telangana from Kuwait

ಕಾಮರೆಡ್ಡಿಯಿಂದ ಶಂಕಿತ ಮಂಕಿಪಾಕ್ಸ್‌ ಪ್ರಕರಣವನ್ನು ವಿಶ್ಲೇಷಣೆಗಾಗಿ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಶಂಕಿತ ವ್ಯಕ್ತಿಯು ಕೆಲವು ದಿನಗಳ ಹಿಂದೆ ಕುವೈತ್‌ನಿಂದ ಬಂದಿರುವ ಪ್ರಯಾಣದ ಇತಿಹಾಸವನ್ನು ಹೊಂದಿದ್ದಾರೆ. ಅವರಿಗೆ ಸ್ವಲ್ಪ ದವಡೆ ನೋವು ಮತ್ತು ಜ್ವರ ಇತ್ತು. ಆದ್ದರಿಂದ ಜಿಲ್ಲಾ ಆಸ್ಪತ್ರೆಯು ಅವರನ್ನು ದಾಖಲಿಸಿಕೊಂಡು ಕ್ವಾರಂಟೈನ್‌ಗಾಗಿ ಜ್ವರ ಆಸ್ಪತ್ರೆಗೆ ಕಳುಹಿಸಿದೆ ಎಂದು ಆಸ್ಪತ್ರೆ ಅಧೀಕ್ಷಕ ಶಂಕರ್ ತಿಳಿಸಿದ್ದಾರೆ.

ತೆಲಂಗಾಣ ಸಾರ್ವಜನಿಕ ಆರೋಗ್ಯ ನಿರ್ದೇಶಕ ಜಿ. ಶ್ರೀನಿವಾಸ ರಾವ್, "ಕಾಮರೆಡ್ಡಿಯಿಂದ ನಾವು ರೋಗಿಯನ್ನು ಜ್ವರ ಆಸ್ಪತ್ರೆಗೆ ಸ್ಥಳಾಂತರಿಸುತ್ತಿದ್ದೇವೆ. ಇಲ್ಲಿ ರೋಗದ ಮಾದರಿಯನ್ನು ಸಂಗ್ರಹಿಸಿ ಪುಣೆಯ ರಾಷ್ಟ್ರೀಯ ವೈರಾಲಜಿ ಲ್ಯಾಬ್‌ಗೆ ಕಳುಹಿಸಲಾಗಿದೆ. ವರದಿ ಬರುವವರೆಗೆ ನಾವು ಅವರನ್ನು ಇಲ್ಲಿ ಇರಿಸುತ್ತೇವೆ. ಜ್ವರದ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಿ ಚಿಕಿತ್ಸೆ ನೀಡುತ್ತೇವೆ. ಈ ವ್ಯಕ್ತಿಯೊಂದಿಗೆ ನೇರ ಸಂಪರ್ಕ ಹೊಂದಿದ್ದ ಆರು ಜನರನ್ನು ಈಗ ನಾವು ಗುರುತಿಸಿದ್ದೇವೆ. ಅವರಲ್ಲಿ ಯಾರಿಗೂ ಯಾವುದೇ ರೋಗಲಕ್ಷಣಗಳಿಲ್ಲ. ಆದರೆ, ನಾವು ಅವರನ್ನು ಪ್ರತ್ಯೇಕ ವಾಸದಲ್ಲಿ ಇರಿಸಿದ್ದೇವೆ," ಎಂದು ಹೇಳಿದರು.

Monkeypox symptoms were detected in a person who had come to Telangana from Kuwait

"ನಾವು ಎಲ್ಲಾ ಅಗತ್ಯ ಕ್ರಮಗಳನ್ನು ಮಂಕಿಪಾಕ್ಸ್‌ ರೋಗದ ತೀವ್ರತೆ ಹಿನ್ನೆಲೆಯಲ್ಲಿ ತೆಗೆದುಕೊಳ್ಳುತ್ತಿದ್ದೇವೆ. ಜನರು ಮಂಗನ ಕಾಯಿಲೆಯ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಇದು ಮಾರಣಾಂತಿಕ ಕಾಯಿಲೆ ಅಲ್ಲ. ಇದೇ ವೇಳೆ ತೆಲಂಗಾಣ ಆರೋಗ್ಯ ಸಚಿವ ಹರೀಶ್ ರಾವ್ ಅವರು ಪರಿಸ್ಥಿತಿ ಅವಲೋಕಿಸಿದ್ದಾರೆ," ಎಂದು ಅವರು ಹೇಳಿದರು.

Recommended Video

Telangana Governor Tamilisai Soundararajan ವಿಮಾನದಲ್ಲಿ ವ್ಯಕ್ತಿಯ ಜೀವ ಉಳಿಸಿದರು *India | Oneindia

English summary
The Telangana Public Health Department said that a 40-year-old man from Telangana, who had come from Kuwait, had symptoms of monkeypox.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X