ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: ಮೋದಿ, ಶಾರಿಂದ ಪ್ರಚಾರ

|
Google Oneindia Kannada News

ಹೈದರಾಬಾದ್, ನವೆಂಬರ್ 25: ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ,ಯೋಗಿ ಆದಿತ್ಯನಾಥ್, ಅಮಿತ್ ಶಾ ಪ್ರಚಾರ ನಡೆಸುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಡಿಸೆಂಬರ್ 1 ರಂದು ಚುನಾವಣೆ ನಡೆಯಲಿದೆ.ಬಿಜೆಪಿಯು ಜಿಎಚ್‌ಎಂಸಿ ಚುನಾವಣೆಯನ್ನು 2023ರ ತೆಲಂಗಾಣ ವಿಧಾನಸಭಾ ಚುನಾವಣೆಗೆ ಮುಂಚಿನ ನಿರ್ಣಾಯಕ ಚುನಾವಣಾ ಸಮರವೆಂದು ಪರಿಗಣಿಸಿದೆ. ಹೀಗಾಗಿ ಪ್ರಚಾರಕ್ಕಾಗಿ ಉನ್ನತ ನಾಯಕರನ್ನು ಕಳುಹಿಸುತ್ತಿದೆ ಎಂದು ಕೆಲವು ರಾಜಕೀಯ ವೀಕ್ಷಕರು ಹೇಳಿದ್ದಾರೆ.

ಜಿಎಚ್‌ಎಂಸಿ ಚುನಾವಣೆಗೆ ಕೇಂದ್ರ ಬಿಜೆಪಿ ನಾಯಕರ ಅಭಿಯಾನ ದೃಢಪಟ್ಟಿದೆ, ಅದರ ವೇಳಾಪಟ್ಟಿ ಇನ್ನೂ ಅಂತಿಮಗೊಂಡಿಲ್ಲ ಎಂದು ಪಕ್ಷದ ಮೂಲಗಳು ಬುಧವಾರ ನೀಡಿರುವ ಹೇಳಿಕೆಯಲ್ಲಿ ತಿಳಿಸಿವೆ.

 Modi, Shah, Yogi May Campaign In A Civic Election As BJP Sees Gateway In Hyderabad

ಮೂಲಗಳ ಪ್ರಕಾರ ಮೋದಿ ಮತ್ತು ಅಮಿತ್ ಶಾ ಅವರಲ್ಲದೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಹೈದರಾಬಾದ್‌ಗೆ ಆಗಮಿಸುವ ನಿರೀಕ್ಷೆಯಿದೆ.

ಕೇರಳದಲ್ಲಿ ಕೇರಳದಲ್ಲಿ "ಕೊರೊನಾ"ಗಾಗಿ ಮತಯಾಚನೆ ನಡೆಸಿರುವ ಬಿಜೆಪಿ!

ಮಂಗಳವಾರ ನಡೆಯಲಿರುವ ಚುನಾವಣೆಯ ಫಲಿತಾಂಶ ಡಿಸೆಂಬರ್ 4 ರಂದು ಪ್ರಕಟವಾಗಲಿದೆ. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆಗಳೆರಡನ್ನೂ ಗಮನದಲ್ಲಿರಿಸಿಕೊಂಡು ಬಿಜೆಪಿ ಮುಖಂಡರ ಪ್ರಚಾರ ಮಾಡಲಿದ್ದಾರೆ ಎನ್ನಲಾಗಿದೆ.

ಜಿಎಚ್‌ಎಂಸಿ ಚುನಾವಣೆಗಳು, ವಿಧಾನಸಭಾ ಚುನಾವಣೆಗೆ ಮುನ್ನ ಸೆಮಿಫೈನಲ್ ಆಗಿದ್ದು, ಇದರಲ್ಲಿ ಟಿಆರ್‌ಎಸ್ ಬೆಂಬಲವನ್ನು ತ್ಯಜಿಸಲು ಬಿಜೆಪಿ ಬಯಸಿದೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

English summary
Something unprecedented is happening in Hyderabad. Prime Minister Narendra Modi, Amit Shah, BJP chief JP Nadda and other top leaders of the BJP are all set to land in the city to campaign for local polls that have consumed the ruling party's attention and resources like never before.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X