ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣ: ಕೆಸಿಆರ್‌ ವಿರುದ್ಧ ಭಾರಿ ಟೀಕಾಸ್ತ್ರ ಪ್ರಯೋಗಿಸಿದ ಮೋದಿ

|
Google Oneindia Kannada News

ನಿಜಾಮಾಬಾದ್ (ತೆಲಂಗಾಣ), ನವೆಂಬರ್ 27: ತೆಲಂಗಾಣದ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್‌ ವಿರುದ್ಧ ಭಾರಿ ಟೀಕಾ ಪ್ರಹಾರ ನಡೆಸಿದರು.

ನಿಜಾಮಾಬಾದ್‌ನಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿ ಕೆ.ಸಿ.ಚಂದ್ರಶೇಖರ್ ಮೇಲೆ ವ್ಯಂಗ್ಯ, ಟೀಕೆ ಎಲ್ಲ ಅಸ್ತ್ರಗಳನ್ನೂ ಪ್ರಯೋಗಿಸಿದರು. ಕನಿಷ್ಟ ನೀರು ಕೊಡಲಾಗದಿದ್ದ ಸೋಮಾರಿ ಸಿಎಂಗೆ ಮತ್ತೆ ರಾಜ್ಯದ ಅಧಿಕಾರವನ್ನು ಕೊಡುತ್ತೀರಾ ಎಂದು ಜನರನ್ನು ಮೋದಿ ಕೆಣಕಿ ಕೇಳಿದರು.

ತೆಲಂಗಾಣ ಚುನಾವಣೆ: 2 ಲಕ್ಷ ಮತದಾರರ ಸಂಖ್ಯೆ ಇಳಿಮುಖತೆಲಂಗಾಣ ಚುನಾವಣೆ: 2 ಲಕ್ಷ ಮತದಾರರ ಸಂಖ್ಯೆ ಇಳಿಮುಖ

ಚಂದ್ರಶೇಖರ್ ರಾವ್ ಅವರಿಗೆ ಕಾಂಗ್ರೆಸ್‌ ಪಕ್ಷವೇ ಆದರ್ಶ. ಕಾಂಗ್ರೆಸ್‌ ಐವತ್ತು ವರ್ಷ ಅಧಿಕಾರದಲ್ಲಿ ಇದ್ದರೂ ಸಹ ಏನೂ ಮಾಡದೇ ಅಧಿಕಾರ ಅನುಭವಿಸಿದರು, ಅದೇ ಆದರ್ಶವನ್ನು ಚಂದ್ರಶೇಖರ್ ಸಹ ಪಾಲಿಸಲು ಹೊರಟಿದ್ದಾರೆ ಎಂದು ಮೋದಿ ಆರೋಪಿಸಿದರು.

ನಿಜಾಮಾಬಾದ್ ಅನ್ನು ಲಂಡನ್ ಮಾಡುತ್ತೇನೆ ಎಂದು ಚಂದ್ರಶೇಖರ್ ರಾವ್ ಹೇಳಿದ್ದರು, ನಾನೂ ಸಹ ಇಲ್ಲಿಗೆ ಬರಬೇಕಾದರೆ ನೋಡಿದೆ, ದೇಶದ ಅತ್ಯಂತ ಹೀನಾಯ ಆರ್ಥಿಕ ಸ್ಥಿತಿ ಹೊಂದಿರುವ ರಾಜ್ಯಗಳಿಗಿಂತಲೂ ಕಡೆಯಾಗಿ ನಿಜಾಮಾಬಾದ್ ಇದೆ, ಕೆಸಿಆರ್ ಅವರು ಲಂಡನ್‌ಗೆ ಹೋಗಿ ಅದನ್ನು ನೋಡಿ ಆಮೇಲೆ ಆ ಮಾತಾಡಲಿ ಎಂದು ಅವರು ಹೇಳಿದರು.

ಮಾಟ-ಮಂತ್ರಗಳಲ್ಲಿ ಸಮಯ ಕಳೆದಿದ್ದಾರೆ

ಮಾಟ-ಮಂತ್ರಗಳಲ್ಲಿ ಸಮಯ ಕಳೆದಿದ್ದಾರೆ

ಇಲ್ಲಿನ ಮುಖ್ಯಮಂತ್ರಿಗೆ ತಮ್ಮ ಬಗ್ಗೆ ತಮಗೇ ನಂಬಿಕೆ ಇಲ್ಲ, ಯಾವಾಗ ನೋಡಿದರೂ ಮಾಟ-ಮಂತ್ರ, ಪೂಜೆ ಪುನಸ್ಕಾರ, ನಿಂಬೆಹಣ್ಣು-ಮೆಣಸಿನಕಾಯಿ ಕಟ್ಟಿಕೊಂಡು ಓಡಾಡುತ್ತಿರುತ್ತಾರೆ ಎಂದು ವ್ಯಂಗ್ಯ ಮಾಡಿದ ಮೋದಿ ಕೇವಲ ಜೋತಿಷ್ಯದಿಂದ ರಾಜ್ಯದ ಅಭಿವೃದ್ಧಿ ಆಗದು ಎಂದು ಅವರಿಗೆ ಗೊತ್ತಿದ್ದ ಹಾಗಿಲ್ಲ ಎಂದು ಅವರು ಹೇಳಿದರು.

ಆಯುಷ್ಮಾನ್‌ ಭಾರತ್‌ಗೆ ಸೇರಿಲ್ಲ ಕೆಸಿಆರ್‌

ಆಯುಷ್ಮಾನ್‌ ಭಾರತ್‌ಗೆ ಸೇರಿಲ್ಲ ಕೆಸಿಆರ್‌

ಆಯುಷ್ಮಾನ್ ಭಾರತ್ ಯೋಜನೆಯನ್ನು ನಾವು ಮಾಡಿದೆವು, ಆದರೆ ಕೆ.ಸಿ.ಆರ್ ಅವರಿಗೆ ಎಷ್ಟು ಅಭದ್ರತೆ ಎಂದರೆ ನನ್ನ ಹೆಸರಿನ ಯೋಜನೆ ಅವರ ರಾಜ್ಯದಲ್ಲಿ ಆದರೆ ನನಗೆ ಹೆಸರು ಬರುತ್ತದೆ ಎಂದು ಆ ಯೋಜನೆಗೆ ಸೇರಲೇ ಇಲ್ಲ. ಇದರಿಂದ ಇಲ್ಲಿನ ಜನರಿಗೆ ಭಾರಿ ಅನ್ಯಾಯವಾಯಿತು. ಅವರ ಆರೋಗ್ಯದ ಹಕ್ಕನ್ನು ಕೆ.ಚಂದ್ರಶೇಖರ್‌ ರಾವ್ ಕಿತ್ತುಕೊಂಡರು ಎಂದು ವಾಗ್ದಾಳಿ ನಡೆಸಿದರು.

ಆಖಾಡಕ್ಕಿಳಿದ ಸೋನಿಯಾ ಗಾಂಧಿ: ಫುಲ್ ಲೆಫ್ಟ್ & ರೈಟ್ ವಾಗ್ದಾಳಿ ಆಖಾಡಕ್ಕಿಳಿದ ಸೋನಿಯಾ ಗಾಂಧಿ: ಫುಲ್ ಲೆಫ್ಟ್ & ರೈಟ್ ವಾಗ್ದಾಳಿ

ಯುವಕರ ತ್ಯಾಗವನ್ನು ಹಾಳು ಮಾಡುತ್ತಿದ್ದಾರೆ

ಯುವಕರ ತ್ಯಾಗವನ್ನು ಹಾಳು ಮಾಡುತ್ತಿದ್ದಾರೆ

ತೆಲಂಗಾಣ ರಾಜ್ಯ ಸುಮ್ಮನೇ ಹುಟ್ಟಿದ್ದಲ್ಲ ಇದು ಹಲವು ಯುವಜನರ, ಇಲ್ಲಿನ ಜನರ ತ್ಯಾಗ ಬಲಿದಾನಗಳ ನಂತರ ಹುಟ್ಟಿದ ರಾಜ್ಯವಿದು. ಆದರೆ ಈ ತ್ಯಾಗಗಳನ್ನು ಹಾಳು ಮಾಡುವ ಹಕ್ಕು ಚಂದ್ರಶೇಖರ ರಾವ್‌ ಅವಿರಿಗೆ ಇಲ್ಲ, ಯಾವ ರಾಜಕೀಯ ಪಕ್ಷಕ್ಕೂ ಇಲ್ಲ. ಇದು ಚುನಾವಣೆ ಸಮಯ, ಲೆಕ್ಕಗಳನ್ನು ಕೇಳುವ ಸಮಯ, ಕೆ.ಸಿಆರ್‌ ಅವರನ್ನು ನೀವು ಅಭಿವೃದ್ಧಿಯ ಲೆಕ್ಕಗಳನ್ನು ಕೇಳಿ ಎಂದು ಅವರು ಹೇಳಿದರು.

ಕೆಸಿಆರ್‌ ಅವರದ್ದು ಅರ್ಧಂಬರ್ದ ರಾಜಕೀಯ

ಕೆಸಿಆರ್‌ ಅವರದ್ದು ಅರ್ಧಂಬರ್ದ ರಾಜಕೀಯ

ಕೆ.ಚಂದ್ರಶೇಖರ್‌ ಅವರದ್ದು ಎಲ್ಲವೂ ಅರ್ಧಂಬರ್ದ ಕೆಲಸ, ಅವರ ಮಾತೂ ಅರ್ಧ, ಕೆಲಸಗಳೂ ಅರ್ಧ, ಭರವಸೆಗಳೂ ಅರ್ಧ ಕೊನೆಗೆ ಸಿಕ್ಕಿರುವ ಅಧಿಕಾರವನ್ನೂ ಅವರು ಅರ್ಧಕ್ಕೆ ಬಿಟ್ಟಿದ್ದಾರೆ ಎಂದು ಮೋದಿ ವ್ಯಂಗ್ಯ ಮಾಡಿದರು. ಇಂತಹಾ ಅರ್ಧಬರ್ದ ಕೆಲಸ ಮಾಡುವವರಿಗೆ ರಾಜ್ಯವನ್ನು ಕೊಡುತ್ತೀರಾ ಎಂದು ಪ್ರಶ್ನೆ ಮಾಡಿದರು. ಮೋದಿ ಅವರ ಭಾಷಣಕ್ಕೆ ಭಾರಿ ಪ್ರತಿಕ್ರಿಯೆ ಜನರಿಂದ ವ್ಯಕ್ತವಾಯಿತು.

ಚಂದ್ರಬಾಬು ನಾಯ್ಡು ಉರುಳಿಸುತ್ತಿರುವ ರಾಜಕೀಯ ದಾಳಕ್ಕೆ ಕೆಸಿಆರ್ ತಬ್ಬಿಬ್ಬು ಚಂದ್ರಬಾಬು ನಾಯ್ಡು ಉರುಳಿಸುತ್ತಿರುವ ರಾಜಕೀಯ ದಾಳಕ್ಕೆ ಕೆಸಿಆರ್ ತಬ್ಬಿಬ್ಬು

ಕಾಂಗ್ರೆಸ್‌ ಜೊತೆ ಫ್ರೆಂಡ್ಲಿ ಮ್ಯಾಚ್‌ ಆಡುತ್ತಿದ್ದಾರೆ

ಕಾಂಗ್ರೆಸ್‌ ಜೊತೆ ಫ್ರೆಂಡ್ಲಿ ಮ್ಯಾಚ್‌ ಆಡುತ್ತಿದ್ದಾರೆ

ಕಾಂಗ್ರೆಸ್‌ ಜೊತೆ ಫ್ರೆಂಡ್ಲಿ ಮ್ಯಾಚ್‌ ಆಡುತ್ತಿದ್ದಾರೆ. ಕಾಂಗ್ರೆಸ್‌ ಮತ್ತು ಕೆ.ಸಿ.ಆರ್‌ ಅವರ ಟಿಆರ್ಎಸ್ ಪಕ್ಷ ಒಳ ಒಪ್ಪಂದ ಮಾಡಿಕೊಂಡಿದೆ. ಕೆ.ಸಿ.ಆರ್‌ ಅವರು ಉಪ್ಪು ತಿಂದಿದ್ದಾರೆ. ಯುಪಿಎನಲ್ಲಿ ಅವರು ಮಂತ್ರಿ ಆಗಿದ್ದರು. ಅದರ ಋಣವನ್ನು ತೀರಿಸುತ್ತಿದ್ದಾರೆ. ಕೆಸಿಆರ್‌ ಅವರು ಕಾಂಗ್ರೆಸ್‌ಗೆ ವಿರೋಧ ಎಂದರೆ ನೀವು ನಂಬಬೇಡಿ ಎಂದು ಮೋದಿ ಹೇಳಿದರು. ಟಿಆರ್‌ಎಸ್‌ ಸಹ ಕುಟುಂಬ ರಾಜಕೀಯದ ಪಕ್ಷವೇ.

ವಿಡಿಯೋ: ಚಪ್ಪಲಿ ಕೈಗೆ ಕೊಟ್ಟು ಮತ ಕೇಳಿದ ಅಭ್ಯರ್ಥಿ!ವಿಡಿಯೋ: ಚಪ್ಪಲಿ ಕೈಗೆ ಕೊಟ್ಟು ಮತ ಕೇಳಿದ ಅಭ್ಯರ್ಥಿ!

English summary
Narendra Modi addressed rally in Telangana's Nizamuddin nagar. He lambasted on CM K Chandrashekhar Rao. He said both Congress and TRS are playing friendly match
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X