ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಹಾವಾಲಾನಿಂದ ಪ್ರಧಾನಿ, ನಿಮ್ಮ ಪರಿವರ್ತನೆ ಅಮೋಘ: ಇವಾಂಕಾ

By Sachhidananda Acharya
|
Google Oneindia Kannada News

ಹೈದರಾಬಾದ್, ನವೆಂಬರ್ 28: ನಗರದಲ್ಲಿ ಇಂದು ಜಾಗತಿಕ ಉದ್ಯಮಶೀಲತಾ ಶೃಂಗಸಭೆ (ಜಿಇಎಸ್) ಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಇವಾಂಕಾ ಟ್ರಂಪ್ ಉದ್ಘಾಟಿಸಿದರು.

ಹೈದರಾಬಾದ್ ಮೆಟ್ರೋ ಉದ್ಘಾಟಿಸಿದ ಪ್ರಧಾನಿ ಮೋದಿಹೈದರಾಬಾದ್ ಮೆಟ್ರೋ ಉದ್ಘಾಟಿಸಿದ ಪ್ರಧಾನಿ ಮೋದಿ

ರೋಬೋಟ್ ಗೆ ತಮ್ಮ ಬೆರಳಚ್ಚು ನೀಡುವ ಮೂಲಕ ಮೋದಿ ಮತ್ತು ಇವಾಂಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗ್ಯಾಲರಿ : ಸುಂದರಿ ಇವಾಂಕಾಗೆ ಸಿಂಗಾರಗೊಂಡ ಮುತ್ತಿನ ನಗರಿ

ನಂತರ ಉದ್ಯಮಶೀಲತಾ ಶೃಂಗಸಭೆಗೆ ಆಗಮಿಸಿದ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಲಹೆಗಾರ್ತಿ ಇವಾಂಕಾ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದರು.

ಜಿಇಎಸ್ 2017: ಮೋದಿ ಜತೆ ವೇದಿಕೆ ಹಂಚಿಕೊಳ್ಳಲಿರುವ ಟ್ರಂಪ್ ಪುತ್ರಿಜಿಇಎಸ್ 2017: ಮೋದಿ ಜತೆ ವೇದಿಕೆ ಹಂಚಿಕೊಳ್ಳಲಿರುವ ಟ್ರಂಪ್ ಪುತ್ರಿ

"ಇವತ್ತು ನೀವು ಮಾಡಿರುವ ಸಾಧನೆ ಅಮೋಘವಾದುದು. ಬಾಲ್ಯದಲ್ಲಿ ಚಹಾ ಮಾರುತ್ತಿದ್ದ ನೀವು ಚುನಾವಣೆಗೆ ನಿಂತು ಪ್ರಧಾನಿಯಾಗುವ ಮೂಲಕ ಪರಿವರ್ತನೆ ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದ್ದೀರಿ," ಎಂದು ಇವಾಂಕಾ ಪ್ರಶಂಸೆ ವ್ಯಕ್ತಪಡಿಸಿದರು.

ಯಾರು ಈ ಚೆಂದುಳ್ಳಿ ಚೆಲುವೆ ಇವಾಂಕಾ ಟ್ರಂಪ್..?ಯಾರು ಈ ಚೆಂದುಳ್ಳಿ ಚೆಲುವೆ ಇವಾಂಕಾ ಟ್ರಂಪ್..?

ಮುತ್ತನ ನಗರಿಯ ಭೇಟಿಯ ಮತ್ತು

ಮುತ್ತನ ನಗರಿಯ ಭೇಟಿಯ ಮತ್ತು

ತಂತ್ರಜ್ಞಾನವನ್ನು ಒಳಗೊಂಡಿರುವ ಪುರಾತನ ನಗರ ಹೈದರಾಬಾದ್ ಭೇಟಿಗೆ ಅದ್ಭುತ ನಗರ ಎಂದು ಇದೇ ವೇಳೆ ಇವಾಂಕಾ ಬಣ್ಣಿಸಿದರು.

ಜಾಗತಿಕ ಉದ್ಯಮಶೀಲತಾ ಶೃಂಗಸಭೆ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ 1500ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು ಭಾಗಿಯಾಗುತ್ತಿರುವುದು ನನಗೆ ಹೆಮ್ಮೆಯನ್ನುಂಟು ಮಾಡಿದೆ ಎಂದು ಇವಾಂಕಾ ಹೇಳಿದರು.

ಭಾರತೀಯರಿಗೆ ಶುಭ ಕೋರಿದ ಇವಾಂಕಾ

ಭಾರತೀಯರಿಗೆ ಶುಭ ಕೋರಿದ ಇವಾಂಕಾ

ಇದೇ ವೇಳೆ ಇವಾಂಕಾ ಟ್ರಂಪ್ 70ನೇ ಸ್ವಾತಂತ್ರೋತ್ಸವ ಆಚರಿಸುತ್ತಿರುವ ಭಾರತೀಯರಿಗೆ ಶುಭಾಶಯ ಕೋರಿದರು. ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಉದ್ಯಮಿಗಳ ಮನ ರಂಜಿಸಿತು.

'ಮೊದಲು ಮಹಿಳೆ, ಎಲ್ಲರಿಗೂ ಸಮೃದ್ಧಿ'

'ಮೊದಲು ಮಹಿಳೆ, ಎಲ್ಲರಿಗೂ ಸಮೃದ್ಧಿ'

ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "'ಮೊದಲು ಮಹಿಳೆ, ಎಲ್ಲರಿಗೂ ಸಮೃದ್ಧಿ' ಥೀಮ್ ಮೂಲಕ ಈ ಆವೃತ್ತಿಯ ಜಿಎಸ್ಇ ವಿಭಿನ್ನವಾಗಿದೆ. ಭಾರತೀಯ ಪುರಾಣದಲ್ಲಿ, ಮಹಿಳೆಯರು ಶಕ್ತಿ ದೇವತೆಯ ಅವತಾರವಾಗಿದ್ದಾರೆ. ಮಹಿಳಾ ಸಬಲೀಕರಣವು ಅಭಿವೃದ್ಧಿಗೆ ಮುಖ್ಯವಾದುದು ಎಂದು ನಾವು ನಂಬಿದ್ದೇವೆ," ಎಂದು ಹೇಳಿದರು.

ಭಾರತದಲ್ಲಿ ಉದ್ಯಮ ನಡೆಸುವುದು ಸುಲಭ

ಭಾರತದಲ್ಲಿ ಉದ್ಯಮ ನಡೆಸುವುದು ಸುಲಭ

ದಕ್ಷಿಣ ಏಷ್ಯಾದಲ್ಲಿ ಇದೇ ಮೊದಲ ಬಾರಿಗೆ ಜಿಇಸಿ ನಡೆಯುತ್ತಿದೆ ಎಂಬುದನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, "ನಮ್ಮಲ್ಲಿರುವ ವಿಶ್ವದ ಅತ್ಯಂತ ಹಳೆಯ ಹಡಗುಕಟ್ಟೆಗಳು, ಬಂದರುಗಳು ಪ್ರಾಚೀನ ವ್ಯಾಪಾರ ಸಂಪರ್ಕಗಳ ಸಾಕ್ಷ್ಯಾಧಾರಗಳಾಗಿವೆ," ಎಂದು ಹೇಳಿದರು.

ದೇಶದಲ್ಲಿರುವ ವ್ಯವಹಾರದ ವಾತಾವರಣವನ್ನು ಸುಧಾರಿಸಲು ಹಲವಾರು ಕ್ರಮಗಳನ್ನು ನಾವು ತೆಗೆದುಕೊಂಡಿದ್ದೇವೆ. ಈ ಉಪಕ್ರಮದ ಪರಿಣಾಮದಿಂದ ಭಾರತದಲ್ಲಿ ಉದ್ಯಮ ನಡೆಸುವುದು ಸುಲಭ (ಈಸ್ ಆಫ್ ಡೂಯಿಂಗ್) ವಾಗಿದೆ ಎಂದು ಅಭಿಪ್ರಾಯಪಟ್ಟರು.

ನಾವೀನ್ಯತೆಗಳ ಅಕ್ಷಯ ಪಾತ್ರೆ ಭಾರತ

"ಭಾರತವು ನಾವೀನ್ಯತೆ ಮತ್ತು ಉದ್ಯಮಶೀಲತೆಯ ಅಕ್ಷಯ ಪಾತ್ರೆಯಾಗಿತ್ತು. ಪುರಾತನ ಭಾರತೀಯರು ಚರಕ ಸಂಹಿತ, ಆಯುರ್ವೇದವನ್ನು ಜಗತ್ತಿಗೆ ಪರಿಚಯಿಸಿದರು. ಯೋಗ ಭಾರತದ ಮತ್ತೊಂದು ಪ್ರಾಚೀನ ಅನ್ವೇಷಣೆ. ಪ್ರತಿ ವರ್ಷ ಜೂನ್ 21 ರಂದು ಯೋಗ ದಿನವನ್ನು ಆಚರಿಸಲು ಜಗತ್ತು ಒಂದಾಗುತ್ತದೆ," ಎಂದು ಪ್ರಧಾನಿ ಹೇಳಿದರು.

ನಾವು ಜಗತ್ತಿನ ಅತಿ ದೊಡ್ಡ ಡಿಜಿಟಲ್ ಡೇಟಾಬೇಸ್ ಆದ ಆಧಾರ್ ರಚಿಸಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಮೋದಿ ತಿಳಿಸಿದರು.

English summary
Prime Minister Narendra Modi and Ivanka Trump inaugurated Global Entrepreneurship Summit in Hyderabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X