ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣದಲ್ಲಿ ವರ್ಕೌಟ್ ಆಗದ ತಂತ್ರಗಾರಿಕೆ: ಡಿಕೆಶಿಗೆ ಭಾರೀ ಮುಖಭಂಗ

|
Google Oneindia Kannada News

Recommended Video

ಡಿ ಕೆ ಶಿವಕುಮಾರ್ ತಂತ್ರ ತೆಲಂಗಾಣದಲ್ಲಿ ಫಲಿಸಲಿಲ್ಲ | Oneindia Kannada

ಹೈದರಾಬಾದ್, ಡಿ 11: ಅಭೂತಪೂರ್ವ ಜಯ ದಾಖಲಿಸಿದ ಕೆ ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್ ಎಸ್ ಪಕ್ಷದ ಹೊಸ ಸರಕಾರ ನಾಳೆಯೇ (ಡಿ 12) ಅಧಿಕಾರಕ್ಕೆ ಬರಲಿದೆ. ಬುಧವಾರ, ತೆಲಂಗಾಣದ ನಿಯೋಜಿತ ಸಿಎಂ ಕೆಸಿಆರ್ ಬಹುತೇಕ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಕಾಂಗ್ರೆಸ್ - ಟಿಡಿಪಿ ಮೈತ್ರಿಕೂಟ, ಟಿಆರ್ ಎಸ್ ಪಕ್ಷಕ್ಕೆ ತೀವ್ರ ಪೈಪೋಟಿ ನೀಡಬಹುದು ಎನ್ನುವ ಲೆಕ್ಕಾಚಾರ ಉಲ್ಟಾ ಹೊಡೆದಿದ್ದು, ಒಂದು ಕಡೆ ರಾಹುಲ್ ಗಾಂಧಿ, ಇನ್ನೊಂದು ಕಡೆ ಚಂದ್ರಬಾಬು ನಾಯ್ಡು ಜೊತೆಗೆ, ಕರ್ನಾಟಕದ ಜಲಸಂಪನ್ಮೂಲ ಖಾತೆಯ ಸಚಿವ ಡಿ ಕೆ ಶಿವಕುಮಾರ್ ಕೂಡಾ ಮುಖಭಂಗ ಅನುಭವಿಸಿದ್ದಾರೆ.

5 ರಾಜ್ಯ ಫಲಿತಾಂಶ LIVE: ರಾಜಸ್ಥಾನದಲ್ಲಿ ಕಾಂಗ್ರೆಸ್ಸಿಗೆ ಬಹುಮತ5 ರಾಜ್ಯ ಫಲಿತಾಂಶ LIVE: ರಾಜಸ್ಥಾನದಲ್ಲಿ ಕಾಂಗ್ರೆಸ್ಸಿಗೆ ಬಹುಮತ

ಕಳೆದ ಕರ್ನಾಟಕ ಚುನಾವಣೆಯ ನಂತರ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಬರುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಸಚಿವ ಡಿ ಕೆ ಶಿವಕುಮಾರ್ ಅವರನ್ನು ತೆಲಂಗಾಣ ಚುನಾವಣೆಯ ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು. ಹೈಕಮಾಂಡ್ ಆದೇಶವನ್ನು ಡಿಕೆಶಿ ಶಿರಸಾ ಪಾಲಿಸಿದ್ದರು.

ತೆಲಂಗಾಣ: ಟಿಆರ್‌ಎಸ್‌ಗೆ ಗೆಲುವು, ಕಾಂಗ್ರೆಸ್‌ಗೆ ಇವಿಎಂ ಮೇಲೆ ಅನುಮಾನ ತೆಲಂಗಾಣ: ಟಿಆರ್‌ಎಸ್‌ಗೆ ಗೆಲುವು, ಕಾಂಗ್ರೆಸ್‌ಗೆ ಇವಿಎಂ ಮೇಲೆ ಅನುಮಾನ

ಆದರೆ, ಕರ್ನಾಟಕದಲ್ಲಿ ನಡೆಸುವ ರಾಜಕೀಯವೇ ಬೇರೆ, ಪಕ್ಕದ ತೆಲಂಗಾಣದಲ್ಲಿ ನಡೆಸುವ ರಾಜಕೀಯವೇ ಬೇರೆ ಎನ್ನುವುದನ್ನು ಅಲ್ಲಿನ ಮತದಾರ ಸ್ಪಷ್ಟವಾಗಿ ಸಾರಿದ್ದಾನೆ. ತೆಲಂಗಾಣದ ಹೀನಾಯ ಸೋಲಿನಿಂದ, ಹೈಕಮಾಂಡ್ ಮಟ್ಟದಲ್ಲಿ ಡಿಕೆಶಿ ಪ್ರಭಾವ ಕಮ್ಮಿಯಾಗಬಹುದೇ ಎನ್ನುವ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಗದು.

ಅಭ್ಯರ್ಥಿಗಳ ಘೋಷಣೆಯ ನಂತರ, ಎಲ್ಲೂ ಅಸಮಾಧಾನದ ಹೊಗೆ ಏಳಬಾರದೆಂದು, ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಆದರೂ, ಬಂಡಾಯವೆದ್ದಾಗ, ಶಮನಗೊಳಿಸಲು ಪಕ್ಷದ ವರಿಷ್ಠರು ಡಿಕೆಶಿಗೆ ಇದರ ಜವಾಬ್ದಾರಿಯನ್ನು ನೀಡಿದ್ದರು.

ತೆಲಂಗಾಣ ಚುನಾವಣೆ

ತೆಲಂಗಾಣ ಚುನಾವಣೆ

ಅಹಮದ್ ಪಟೇಲ್ ಅವರನ್ನು ರಾಜ್ಯಸಭೆಗೆ ಕಳುಹಿಸಿದ್ದು, ಎಲ್ಲೂ ಆಪರೇಶನ್ ಕಮಲ ನಡೆಯದಂತೆ ನೋಡಿಕೊಂಡಿದ್ದು, ಇದಾದ ನಂತರ, ಮೊನ್ನೆಮೊನ್ನೆ ನಡೆದ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ, ಸೈ ಎನಿಸಿಕೊಂಡಿದ್ದ, ಡಿಕೆ ಶಿವಕುಮಾರ್ ಅವರನ್ನು ತೆಲಂಗಾಣ ಚುನಾವಣೆಯಲ್ಲಿ ಪಕ್ಷದ ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು. ಜೊತೆಗೆ, ಸಿದ್ದರಾಮಯ್ಯನವರಿಗೂ ಪಕ್ಷದ ಪರವಾಗಿ ಪ್ರಚಾರ ನಡೆಸಲು ಸೂಚಿಸಲಾಗಿತ್ತು.

ತೆಲಂಗಾಣ: ನಾಳೆಯೇ ಮುಖ್ಯಮಂತ್ರಿಯಾಗಿ ಕೆಸಿಆರ್ ಪ್ರಮಾಣವಚನ ತೆಲಂಗಾಣ: ನಾಳೆಯೇ ಮುಖ್ಯಮಂತ್ರಿಯಾಗಿ ಕೆಸಿಆರ್ ಪ್ರಮಾಣವಚನ

ತೆಲಂಗಾಣ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

ತೆಲಂಗಾಣ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

ಸಂಘಟನಾ ಚುತುರ ಎನ್ನುವುದನ್ನು ಬಹಳಷ್ಟು ಬಾರಿ ಸಾಬೀತು ಮಾಡಿದ್ದ ಡಿ ಕೆ ಶಿವಕುಮಾರ್ ಅವರನ್ನು, ತೆಲಂಗಾಣ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ನಂತರ ಉಂಟಾದ ಬಂಡಾಯ ಶಮನ ಮಾಡಲು ತುರ್ತಾಗಿ ಆಖಾಡಕ್ಕಿಳಿಯುವಂತೆ ಸೂಚಿಸಲಾಗಿತ್ತು. ಹೈಕಮಾಂಡ್ ಸೂಚನೆಯನ್ನು ಡಿಕೆಶಿ ಪಾಲಿಸಿದ್ದರೂ, ಪಕ್ಷ ಚುನಾವಣೆಯಲ್ಲಿ ಊಹಿಸಲೂ ಅಸಾಧ್ಯವಾದ ಸೋಲು ಅನುಭವಿಸಿದೆ. ಟಿಕೆಟ್ ಅಸಮಾಧಾನವೇ ಪಕ್ಷದ ಸೋಲಿಗೆ ಒಂದು ಕಾರಣ ಎಂದು ಹೇಳಲಾಗುತ್ತಿದೆ.

ತೆಲಂಗಾಣ ಕಾಂಗ್ರೆಸ್ ನಾಯಕನ ಬಂಧನ: ಡಿಕೆಶಿ ಆಕ್ರೋಶ ತೆಲಂಗಾಣ ಕಾಂಗ್ರೆಸ್ ನಾಯಕನ ಬಂಧನ: ಡಿಕೆಶಿ ಆಕ್ರೋಶ

ಕಾಂಗ್ರೆಸ್ ಬಂಡಾಯಗಾರರ ಮನವೊಲಿಕೆ

ಕಾಂಗ್ರೆಸ್ ಬಂಡಾಯಗಾರರ ಮನವೊಲಿಕೆ

ಸಾಮಾನ್ಯವಾಗಿ ಕೋರ್ ಕಮಿಟಿ, ಪ್ರಚಾರ ಸಮಿತಿ.. ಹೀಗೆ ಸಮಿತಿ ರಚಿಸುವ ಕಾಂಗ್ರೆಸ್, ಬಂಡಾಯಗಾರರ ಮನವೊಲಿಸಲು ಒಂದು ಸಮಿತಿಯನ್ನೇ ರಚಿಸಿತ್ತು. ಅದರಲ್ಲಿ ಡಿಕೆಶಿ ಕೂಡಾ ಒಬ್ಬರಾಗಿದ್ದರು. ಬಂಡಾಯ ನಾಯಕರ ಮನವೊಲಿಸುವಲ್ಲಿ ಆ ಕ್ಷಣದಲ್ಲಿ ಡಿಕೆಶಿ ಯಶಸ್ವಿಯಾಗಿದ್ದರೂ ಕೂಡಾ. ಎರಡು ದಿನಗಳಿಂದ ತೆಲಂಗಾಣದಲ್ಲಿ ಬಿಡುವಿಲ್ಲದ ಓಡಾಟ ನಡೆಸಿದ್ದ ಡಿಕೆಶಿ,​ ಅಲ್ಲಿನ ಬಂಡಾಯ​ ನಾಯಕರು ಸಲ್ಲಿಸಿದ್ದ ನಾಮಪತ್ರವನ್ನು ಹಿಂಪಡಿಸುವಲ್ಲಿ ಯಶಸ್ವಿಯಾಗಿದ್ದರು.

ಡಿಕೆ ಶಿವಕುಮಾರ್ ಭಾಗವಹಿಸಿದ್ದರು

ಡಿಕೆ ಶಿವಕುಮಾರ್ ಭಾಗವಹಿಸಿದ್ದರು

ಎಐಸಿಸಿ ವರಿಷ್ಠರ ಚುನಾವಣಾ ಪ್ರಚಾರ ಸಭೆಯಲ್ಲೂ ಡಿಕೆ ಶಿವಕುಮಾರ್ ಭಾಗವಹಿಸಿದ್ದರು. ಪ್ರಮುಖವಾಗಿ, ತೆಲಂಗಾಣ-ಕರ್ನಾಟಕದ ಗಡಿ ಭಾಗದಲ್ಲಿ ಹೆಚ್ಚಿನ ಕಾಳಜಿ ವಹಿಸುವಂತೆ ಸೂಚಿಸಲಾಗಿತ್ತು. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಟ್ಟಿಗೆ ಬಹಿರಂಗ ಪ್ರಚಾರವನ್ನೂ ಡಿಕೆಶಿ ಮಾಡಿದ್ದರು. ಆದರೆ, ಇದ್ಯಾವುದೂ ವರ್ಕೌಟ್ ಆಗಲಿಲ್ಲ. ಖುದ್ದು, ತೆಲಂಗಾಣ ಕಾಂಗ್ರೆಸ್ ಕಾರ್ಯಾಧ್ಯಕ್ಷ ರೇವಂತ್ ರೆಡ್ಡಿ ಸೋಲು ಅನುಭವಿಸಿದ್ದಾರೆ. ಚುನಾವಣೆಯಲ್ಲಿ ದಯನೀಯವಾಗಿ ಸೋತಿರುವ ಕಾಂಗ್ರೆಸ್, ಈಗ ಅಧಿಕೃತವಾಗಿ ಇವಿಎಂ ಮೇಲೆ ಗೂಬೆ ಕೂರಿಸಿದೆ.

ಕಳೆದ ಚುನಾವಣೆಯಲ್ಲಿ ಪಡೆದಷ್ಟು ಸ್ಥಾನವೂ ಕಾಂಗ್ರೆಸ್ಸಿಗೆ ದಕ್ಕಲಿಲ್ಲ

ಕಳೆದ ಚುನಾವಣೆಯಲ್ಲಿ ಪಡೆದಷ್ಟು ಸ್ಥಾನವೂ ಕಾಂಗ್ರೆಸ್ಸಿಗೆ ದಕ್ಕಲಿಲ್ಲ

119 ಸ್ಥಾನಗಳ ತೆಲಂಗಾಣ ಅಸೆಂಬ್ಲಿಯಲ್ಲಿ ಟಿಆರ್ ಎಸ್ 87, ಕಾಂಗ್ರೆಸ್ ಮೈತ್ರಿಕೂಟ 27, ಬಿಜೆಪಿ 2, ಎಂಐಎಂ ಮತ್ತು ಇತರರು 10ಕ್ಷೇತ್ರದಲ್ಲಿ ಗೆಲುವು/ಮುನ್ನಡೆ ಸಾಧಿಸಿದ್ದಾರೆ. ಆ ಮೂಲಕ, ಕಳೆದ ಚುನಾವಣೆಯಲ್ಲಿ ಪಡೆದಷ್ಟು ಸ್ಥಾನವೂ ಕಾಂಗ್ರೆಸ್ಸಿಗೆ ದಕ್ಕಲಿಲ್ಲ. ಒಟ್ಟಿನಲ್ಲಿ, ಡಿಕೆ ಶಿವಕುಮಾರ್ ಹೇಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಾಲಿಗೆ ಟ್ರಬಲ್ ಶೂಟರೋ, ಅದೇ ರೀತಿಯ ರಾಜಕೀಯ ದಾಳ ತೆಲಂಗಾಣದಲ್ಲಿ ಉರುಳಿಸಲು ವಿಫಲರಾಗಿದ್ದಾರೆ.

English summary
Minsiter DK Shivakumar political game plan not worked out in Telangana. Congress high command made him in-charge and he is only succeeded to withdraw the nomination from rebel candidates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X